Home ರಾಜ್ಯ ಯಾದಗಿರಿ ದರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವುದು ತಪ್ಪಲ್ಲ: ಸತೀಶ್ ಜಾರಕಿಹೊಳಿ

ದರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವುದು ತಪ್ಪಲ್ಲ: ಸತೀಶ್ ಜಾರಕಿಹೊಳಿ

0

ಯಾದಗಿರಿ: ದರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಹಸ್ತಾಂತರಿಸುವುದು ತಪ್ಪಲ್ಲ. ಎನ್‌ಐಎ ತನಿಖೆಯಿಂದ ದೊಡ್ಡ ಮಟ್ಟದ ಸಂಚುಗಳು ಬಯಲಿಗೆ ಬರುತ್ತವೆ ಮತ್ತು ಸತ್ಯ ಹೊರಬರಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭಾನುವಾರ ಹೇಳಿದರು.

“ಕರ್ನಾಟಕದ ಜನರು ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಟಿವಿ ಮತ್ತು ಮೊಬೈಲ್‌ಗಳಲ್ಲಿ ದರ್ಮಸ್ಥಳ ವಿಷಯವನ್ನು ನೋಡುತ್ತಿದ್ದಾರೆ. ಇದಕ್ಕೆ ಒಂದು ಅಂತ್ಯ ಕಾಣಿಸಬೇಕಿದೆ. ಸಂಚಿನ ಕೋನವನ್ನು ತನಿಖೆ ಮಾಡಲು ಮತ್ತು ಸತ್ಯವನ್ನು ಹೊರತರಲು ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವುದು ತಪ್ಪೇನಲ್ಲ,” ಎಂದು ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದರು.

“ಈ ಸಂಪೂರ್ಣ ಘಟನೆ ಒಂದು ಹಳ್ಳಿಗೆ ಸಂಬಂಧಿಸಿದ್ದು, ದೇಶಕ್ಕಲ್ಲ. ಅದಕ್ಕೂ ಕಾಂಗ್ರೆಸ್ ಅಥವಾ ಬಲಪಂಥೀಯ-ಎಡಪಂಥೀಯ ಗುಂಪುಗಳಿಗೂ ಯಾವುದೇ ಸಂಬಂಧವಿಲ್ಲ. ನ್ಯಾಯಾಲಯದ ಆದೇಶದ ನಂತರ ದರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ” ಎಂದು ಅವರು ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಶಿವಕುಮಾರ್ ಅವರು ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಜಾರಕಿಹೊಳಿ, “ಆರ್‌ಎಸ್‌ಎಸ್ ಪ್ರಾರ್ಥನೆ ಹೇಳಿದರೆ ಸಿಎಂ ಆಗಬಹುದು ಎಂದಾದರೆ, ಯಾದಗಿರಿ ಶಾಸಕ ಚೆನ್ನರೆಡ್ಡಿ ಮತ್ತು ನಾನು ಸಹ ಅದನ್ನು ಹಾಡುತ್ತೇವೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಸಂಸ್ಕೃತ ಗೊತ್ತಿದೆ. ಅವರು ಸಂಸ್ಕೃತ ಶ್ಲೋಕಗಳನ್ನು ಹೇಳುವ ಅಸಾಮಾನ್ಯ ಸಾಮರ್ಥ್ಯ ಹೊಂದಿದ್ದಾರೆ ಮತ್ತು ವಿಧಾನಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ ಶ್ಲೋಕವೊಂದನ್ನು ಹೇಳಿದ್ದರು” ಎಂದರು.

You cannot copy content of this page

Exit mobile version