ಪ್ರೀತಿಗೆ ಜಾತಿ, ವರ್ಣ, ಅಂತಸ್ತು, ವಯಸ್ಸಿನ ಇರಲ್ಲ ಅನ್ನೋ ಮಾತಿದೆ. ಅಮೇರಿಕದಲ್ಲೊಂದು ಶತಾಯುಷಿಗಳ ಜೋಡಿ ಈ ಮಾತಿಗೆ ಪುಷ್ಠಿ ಕೊಡುವಂತೆ ತಮ್ಮ ಶತಾಯುಷ್ಯದಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ. 102 ವರ್ಷದ ಮಾರ್ಜೋರಿ ಫುಟರ್‌ಮ್ಯಾನ್ 100 ವರ್ಷ ವಯಸ್ಸಿನ ಬರ್ನಿ ಲಿಟ್‌ಮ್ಯಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಈ ಸುದ್ದಿ ಈಗ ಸಾಕಷ್ಟು ವೈರಲ್ ಆಗುತ್ತಿದೆ.
ಈ ಅಪರೂಪದ ಘಟನೆ ಅಮೇರಿಕಾದ ಪೆನ್ಸಿಲ್ವೇನಿಯಾದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾರ್ಜೋರಿ ಮತ್ತು ಬರ್ನಿ ಲಿಟ್‌ಮ್ಯಾನ್ ಒಂದೇ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಅವರಿಗೆ ವಯಸ್ಸಾಗಿದೆ ಎಂದು ಅವರಿಬ್ಬರ ಕುಟುಂಬದವರು ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಆದರೆ, ಈ ಇಬ್ಬರು ವೃದ್ಧ ಜೀವಿಗಳು ಆ ವೃದ್ಧಾಶ್ರಮದಲ್ಲೇ ಬಿಡುವು ಸಿಕ್ಕಾಗಲೆಲ್ಲ ಡೇಟ್ ಮಾಡುತ್ತಿದ್ದರು. ಕಳೆದ 9 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು ಎಂದು ವೃದ್ಧಾಶ್ರಮದ ಸಿಬ್ಬಂಧಿ ತಿಳಿಸಿದ್ದಾರೆ.
ಇಳಿ ವಯಸ್ಸಿನಲ್ಲಿ ಬದುಕು ಬಹಳಷ್ಟು ಬೋರಾಗತೊಗಿತ್ತು. ಜೀವನದ ಇಳಿಸಂಜೆಯಲ್ಲಿ ತಮ್ಮ ಒಂಟಿತನ ಕಳೆಯಲು ಹಳೆಯದೆಲ್ಲವನ್ನು ಮರೆತು ಹಾಯಾಗಿರಲು ನಾವು ಪ್ರೀತಿಸತೊಡಗಿದೇವು ಎಂದು ಈ ಜೋಡಿ ಹೇಳಿಕೊಂಡಿದೆ. ನಂತರ ಇವರ ಪ್ರೀತಿಯ ಬಗ್ಗೆ ಕುಟುಂಬಸ್ಥರ ಬಳಿ ತಿಳಿಸಿದಾಗ ಇಬ್ಬರ ಕುಟುಂಬಸ್ಥರು ಸಂತೋಷದಿಂದ ಮದುವೆ ಮಾಡಿಕೊಡಲು ಒಪ್ಪಿಗೆ ನೀಡಿದ್ದಾರೆ. “ತನ್ನ ಅಜ್ಜ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದಾದ ನಮಗೆಲ್ಲರಿಗೂ ಆಶ್ಚರ್ಯವಾಯಿತು. ಮೊದಲಿಗೆ ಸ್ವಲ್ಪ ಬೇಸರವೂ ಆಯಿತು. ಆದರೆ, ಅವರ ಬದಕು ಅವರ ಆಯ್ಕೆ ಎಂಬ ಸತ್ಯ ಅರಿವಿಗೆ ಬಂದು ಖುಷಿಯೂ ಆಯಿತು” ಎಂದು ಲಿಟ್‌ಮನ್ ಮೊಮ್ಮಗಳು ಸಾರಾ ಲಿಟಮನ್ ಹೇಳಿದ್ದಾರೆ.
ಮಾರ್ಜೋರಿ ಮತ್ತು ಬರ್ನಿ ಲಿಟ್‌ಮನ್ ಇವರಿಬ್ಬರಿಗೂ ಇದು ಎರಡನೇ ಮದುವೆ. ಕುಟುಂಬಸ್ಥರೆಲ್ಲರೂ ಸೇರಿ ಮೇ 19 ರಂದು ಕಾನೂನುಬದ್ಧವಾಗಿ ಶತಾಯುಸಿ ಜೋಡಿಗೆ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು @pubity ಎಂಬ ಇನ್‌ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಆ ಫೋಟೋ ಇಲ್ಲಿದೆ ನೊಡಿ. ನೆಟ್ಟಿಗರು ನವ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.