ತಮಿಳುನಾಡು : ನೆಚ್ಚಿನ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ವಿರುದ್ದ ಅಪಹಾಸ್ಯ ಮಾಡಿದ್ದ ಸ್ನೇಹಿತನನ್ನು ಹುಚ್ಚು ಅಭಿಮಾನದಿಂಧ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಅರಿಯಾಲೂರು ಜಿಲ್ಲೆಯ ಪೋಯೂರು ಗ್ರಾಮದಲ್ಲಿ ನಡೆದಿದ್ದು, ವಿರಾಟ್ ಕೊಹ್ಲಿಯನ್ನು ಬಂಧಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಶುರುವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡು ದೈತ್ಯ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ ಈ ಅಭಿಮಾನ
ಎಸ್‌ಐಸಿಸಿಒ ಕಂಪನಿಯಲ್ಲಿ ಕೆಲಸ ಮಾಡತ್ತಿದ್ದ ವಿಘ್ನೇಶ್(24) ಮತ್ತು ದರ್ಮರಾಜ್ ಎಂಬ ಇಬ್ಬರು ಸ್ನೇಹಿತರಲ್ಲಿ ತಮ್ಮ ತಮ್ಮ ನೆಚ್ಚಿನ ಕ್ರಿಕೆಟಿಗರ ಬಗ್ಗೆ ಚರ್ಚೆ ಉಂಟಾಗಿತ್ತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರಲ್ಲಿ ಯಾರು ಉತ್ತಮರು ಎಂಬ ಪ್ರಶ್ನೆ ಹಾಕಿಕೊಂಡು ಪರಸ್ಪರ ವಾದಗಳನ್ನು ನಡೆಸಿದ್ದರು. ಆ ನಂತರ ಧರ್ಮರಾಜ್‌ನಿಗೆ ಅವನ ನೆಚ್ಚಿನ ನಟ ವಿರಾಟ್ ಕೊಹ್ಲಿಯ ಬಗ್ಗೆ ಅಪಹಾಸ್ಯ ಮಾಡುವಂತೆ ವಿಘ್ನೇಶ್ ಮಾತನಾಡಿ, ಗೇಲಿ ಮಾಡಿದ್ದನು. ಇದರಿಂದ ಕೋಪಗೊಂಡ ಧರ್ಮರಾಜ್ ತನ್ನ ಹುಚ್ಚು ಅಭಿಮಾನದಿಂದ ವಿಷ್ನೇಶ್‌ನನ್ನು ಬಾಟಲ್ ಮತ್ತು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ವಿಘ್ನೇಶ್‌ನನ್ನು ಕೊಲೆ ಮಾಡಿದ್ದಾರೆ. ಈ ಘಟನೆ ಗುರುವಾರದಂದು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದರೂ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಈ ವಿಷಯ ತಿಳಿದ ಪೊಲೀಸರು ಆರೋಪಿಯಾದ ಧರ್ಮರಾಜ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ನಡಿಸಿದ್ದಾರೆ. ಬಂಧಿತ ನೀಡಿರುವ ಹೇಳಿಕೆ ಪ್ರಕಾರ, ಒಟ್ಟಿಗೆ ಕುಡಿಯಲು ಹೋದ ಸಂದರ್ಭದಲ್ಲಿ ನಡೆದಂತಹ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯಗೊಂಡಿರುವುದು ತಿಳಿದುಬಂದಿದೆ. ಪೊಲೀಸ್ ಅಧಿಕಾರಿಗಳು ಹೇಳಿರುವ ಪ್ರಕಾರ, ಮಾಲೂರು ಸಮೀಪ ಇರುವ ಎಸ್‌ಐಡಿಸಿಒ (ಸಿಡ್ಕೋ) ಕೈಗಾರಿಕಾ ಪ್ರದೇಶದಲ್ಲಿನ ತೆರೆದ ಸ್ಥಳವೊಂದರಲ್ಲಿ ಈ ಘಟನೆ ಸಂಭವಿಸಿದೆ.
ಕ್ರಿಕೆಟಿಗರ ಬಗ್ಗೆ ಪರಸ್ಪರ ಚರ್ಚೆ ಉಂಟಾಗಿದ್ದು, ಅಪಹಾಸ್ಯ ಮಾಡಿದ್ದ ಕಾರಣ ಬಂಧಿತ ಆರೋಪಿ ಎಸ್. ಧರ್ಮರಾಜ್ ಜೊತೆಗೆ ಹೊಡೆದಾಟ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಧರ್ಮರಾಜ್, ಬಾಟಲಿಯಿಂದ ಇರಿದು ವಿಘ್ನೇಶ್‌ನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇಷ್ಟೆಲ್ಲಾ ಆಗುವುದಕ್ಕೆ ನಿಜವಾದ ಕಾರಣ ಧರ್ಮರಾಜ್ ಅಲ್ಲ, ವಿರಾಟ್ ಕೊಹ್ಲಿಯ ಮೇಲಿನ ಅಭಿಮಾನ ಎಂದು ಮೊದಲು ವಿರಾಟ್ ಕೊಹ್ಲಿಯನ್ನು ಬಂಧಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಶುರುವಾಗಿದೆ.