ನವದೆಹಲಿ : ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದುವುದಾಗಿ ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೋಹ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಈ ಬಗ್ಗೆ ಬಿಸಿಸಿಐ ಸುಳಿವು ನೀಡಿತ್ತು.

14 ವರ್ಷದ ಹಿಂದೆ ನಾನು ಟೆಸ್ಟ್ ಕ್ರಿಕೆಟ್ ನಲ್ಲಿ ಆಡಲು ಶುರುಮಾಡಿದೆ. ಈ ಪಯಣ ಇಲ್ಲಿಯವರೆಗೂ ಕರೆತರುವುದೆಂದು ನಾನೆಂದೂ ಊಹಿಸಿರಲಿಲ್ಲ. ಅದು ನನ್ನನ್ನು ಪರೀಕ್ಷಿಸಿತು. ರೂಪಿಸಿತು. ಹಾಗೂ ನನ್ನ ಜೀವನವಿಡೀ ನೆನಪಿಡಬಹುದಾದ ಪಾಠ ಕಲಿಸಿತು.
ಬಿಳಿಯ ವಸ್ತ್ರದಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದು ನನಗಂತೂ ತೀರಾ ವೈಯಕ್ತಿಕ, ಭಾವನಾತ್ಮಕ ಸಂಗತಿ. ಖಾಲಿ ಸ್ಟೇಡಿಯಂ. ಹಲವು ದಿಗನಳ ಆಟ, ಯಾರೂ ನೆನೆಪಿಟ್ಟುಕೊಳ್ಳದ ಸಣ್ಣ ಸಂಗತಿಗಳು. ಆದರೆ ನಾನೆಂದಿಗೂ ನಿಮ್ಮ ಜೊತೆ ಇರುವೆ ಎಂದು ವಿರಾಟ್ ಕೋಹ್ಲಿ ಟ್ವೀಟ್ ಮಾಡಿದ್ದಾರೆ.