ಸಿಡ್ನಿ : ವಿಶ್ವಕಪ್ T20 ಟೂರ್ನಿಯ ಇಂದಿನ ಭಾರತ ನೆದರ್ಲೆಂಡ್ ಪಂದ್ಯದ ಮೊದಲ ಇನ್ನಿಂಗ್ಸ್ ನ ಅಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.
ಟಾಸ್ ಗೆದ್ದು ಬ್ಯಾಟ್ ಹಿಡಿದ ಭಾರತ ಮೊದಲ ಮೂರನೇ ಓವರ್ ನಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕಳೆದುಕೊಂಡಿತು. ನಂತರ ರೋಹಿತ್ ಗೆ ಜೊತೆಯಾದ ಕೊಹ್ಲಿ ತಮ್ಮ ಉತ್ತಮ ಜೊತೆಯಾಟದೊಂದಿಗೆ 73 ರನ್ ಸೇರಿಸದರು. 12 ನೇ ಓವರ್ ನಲ್ಲಿ ಕ್ಲಾಸೆನ್ ಕೈಗೆ ರೋಹಿತ್ ತನ್ನ ವಿಕೆಟ್ ಒಪ್ಪಿಸಿ ಹೋದಾಗ ಕೊಹ್ಲಿ ಜೊತೆಗೆ ನಿಂತ ಸೂರ್ಯಕುಮಾರ್ ಯಾದವ್ ತಮ್ಮ ಬಿರುಸಿನ ಆಟದೊಂದಿಗೆ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯನ್ನೇ ನೀಡಿದರು.
ಒಟ್ಟಾರೆ ರೋಹಿತ್, ಕೊಹ್ಲಿ, ಸೂರ್ಯಕುಮಾರ್ ಯಾದವ್ ತಲಾ ಅರ್ಧಶತಕಗಳನ್ನು ಬಾರಿಸುವುದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ 179 ರನ್ ಗಳನ್ನ ಗಳಿಸಿತು.