ಬೇಲೂರು: ಪುರಸಭೆ ಆವರಣದಲ್ಲಿರುವ ಗಣೇಶ ವಿಗ್ರಹಕ್ಕೆ ಚಪ್ಪಲಿ ಇಡುವ ಮೂಲಕ ನಡೆದ ಅವಮಾನ ಘಟನೆಯ ಖಂಡನೆಗೆ ಪ್ರತಿಯಾಗಿ ಇಂದು ಬೇಲೂರು ಪಟ್ಟಣದಲ್ಲಿ ಸ್ವಯಂಪ್ರೇರಿತ ಬಂದ್ ಪಾಲನೆ ಆಗುತ್ತಿದೆ.
ಬಂದ್ ವಿವರ
ಹಿಂದೂಪರ ಸಂಘಟನೆಗಳ ಕರೆ ಮೇರೆಗೆ ವ್ಯಾಪಾರಸ್ಥರು ಅಂಗಡಿಗಳು, ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ.ಬೆಳಿಗ್ಗೆ 10:30ಕ್ಕೆ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಘಟನೆಯ ಹಿನ್ನೆಲೆ
ಸೆಪ್ಟೆಂಬರ್ 20ರ ರಾತ್ರಿ ಹಾಸನ ವಿಜಯನಗರದ ಲೀಲಮ್ಮ ಎಂಬ ಮಹಿಳೆ ದೇವಾಲಯಕ್ಕೆ ನುಗ್ಗಿ ಗಣೇಶ ವಿಗ್ರಹಕ್ಕೆ ಚಪ್ಪಲಿ ಇಟ್ಟಿದ್ದಾಳೆ. ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸುತ್ತಿದ್ದಾರೆ. ಘಟನೆಯ ಹಿಂದೆ ಪ್ರೇರಣೆ ಇದ್ದೇ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ. ಪಟ್ಟಣದಲ್ಲಿ ಶಾಂತಿ ಕಾಪಾಡಲು ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.