ಹೂಸ್ಟನ್ : ಹೆಲಿಕಾಪ್ಟರ್ ವೊಂದು ರೇಡಿಯೋ ಟವರ್ ಒಂದಕ್ಕೆ ಅಪ್ಪಳಿಸಿದ ಘಟನೆ ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.
ಅಪಘಾತದ ದೃಶ್ಯವನ್ನು ಹತ್ತಿರದ ಭದ್ರತಾ ಕ್ಯಾಮೆರಾಗಳು ಸೆರೆಹಿಡಿದಿವೆ. ಅಪಘಾತದ ನಂತರದ ಪರಿಸ್ಥಿತಿಯನ್ನು ಸ್ಥಳೀಯರು ತಮ್ಮ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಖಾಸಗಿ ಕಂಪನಿಗೆ ಸೇರಿದ ಆರ್ 44 ಹೆಲಿಕಾಪ್ಟರ್ ರೇಡಿಯೋ ಸ್ಟೇಷನ್‌ಗೆ ಅಪ್ಪಳಿಸಿತು.
ರೇಡಿಯೋ ಟವರ್ ಬಳಿ ಗ್ಯಾಸ್ ಟ್ಯಾಂಕ್ ಜೊತೆಗೆ ವಸತಿ ಕಟ್ಟಡಗಳಿದ್ದು, ಅದೃಷ್ಟವಶಾತ್ ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ಹೂಸ್ಟನ್ ಮೇಯರ್ ಜಾನ್ ವಿಟ್‌ಮೈರ್ ಹೇಳಿದ್ದಾರೆ. ರೇಡಿಯೋ ಟವರ್ ಕುಸಿದ ನಂತರ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಫೆಡರಲ್ ಏವಿಯೇಷನ್ ಡಿಪಾರ್ಟ್ಮೆಂಟ್ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.