Saturday, November 30, 2024

ಸತ್ಯ | ನ್ಯಾಯ |ಧರ್ಮ

ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವಧಿ ಮುಗಿದ ಯಾವುದೇ ಔಷಧಿ ಬಳಸುತ್ತಿಲ್ಲ: ಡಾ ಆರ್ ಅಬ್ದುಲ್ಲಾ ಸ್ಪಷ್ಟನೆ

ಬಳ್ಳಾರಿ, ನ.30: ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವಧಿ ಮೀರಿದ ಯಾವುದೇ ಔಷಧಿಗಳನ್ನು ಸಾರ್ವಜನಿಕರಿಗೆ ವಿತರಣೆಯಾಗುತ್ತಿಲ್ಲ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಸ್ಪಷ್ಟನೆ ನೀಡಿದ್ದಾರೆ.


ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸಾಫ್ ಗ್ರೂಪ್‌ಗಳಲ್ಲಿ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವಧಿ ಮೀರಿದ ಔಷಧಿಗಳನ್ನು ವಿತರಿಸಲಾಗುತ್ತಿದ್ದು, ಅದರಲ್ಲೂ ಟ್ರೊಮೊಡೊಲ್ ಹೈಡ್ರೋಕ್ಲೋರಿಡ್ (50ಮಿ.ಲಿ) ಇಂಜೆಕ್ಷನ್ ಕೊಡಲಾಗಿದೆ ಎಂದು ಸುಳ್ಳು ಸುದ್ದಿ ಹರಡಿದ್ದು, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಸೂಚನೆಯಂತೆ, ಡಾ.ಅಬ್ದುಲ್ಲಾ ಅವರು ಶನಿವಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಔಷಧಿ ದಾಸ್ತಾನು ವಿಭಾಗ, ಇಂಜೆಕ್ಷನ್ ನೀಡುವ ಸ್ಥಳ ಮತ್ತು ವೈದ್ಯರು ರೋಗಿಗಳನ್ನು ಪರೀಕ್ಷಿಸುವ ಸ್ಥಳ ಪರಿಶೀಲಿಸಿದಾಗ ಯಾವುದೇ ಅವಧಿ ಮೀರಿದ ಔಷಧಿಗಳನ್ನು ನೀಡಿರುವ ಕುರಿತು ಮತ್ತು ದಾಸ್ತಾನು ವಿತರಣೆ ಮಾಡಿರುವ ಕುರಿತು ಯಾವುದೇ ದಾಖಲಾತಿಗಳಲ್ಲಿ ನಮೂದಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಉಲ್ಲೇಖ ಮಾಡಿರುವ ಔಷಧಿಯು ಪ್ರಸ್ತುತ ಅವಧಿ ಮೀರದೇ ಇರುವುದು ಕಂಡುಬಂದಿದೆ, ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅನಗತ್ಯವಾಗಿ ತಪ್ಪು ಮಾಹಿತಿ ನೀಡುವ ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ತಪ್ಪು ಮಾಹಿತಿ ಒದಗಿಸಬಾರದು.


ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಔಷಧಿ ಪಡೆಯುವಂತೆ ಮತ್ತು ಯಾವುದೇ ಅನುಮಾನವಿಲ್ಲದೇ ವೈದ್ಯರು ಸೂಚಿಸುವ ಔಷಧಿ ತೆಗೆದುಕೊಳ್ಳಲು ತಿಳಿಸಿದ್ದಾರೆ ಮತ್ತು ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವವರ ಬಗ್ಗೆ ತಕ್ಷಣವೇ ಮಾಹಿತಿ ನೀಡಲು ವಿನಂತಿಸಿದ್ದಾರೆ.


ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ ಜವಳಿ, ಪ್ರಸೂತಿ ತಜ್ಞರಾದ ಡಾ.ಆಶಿಯಾ ಬೇಗಮ್, ಔಷಧಿ ಅಧಿಕಾರಿ ಶೇಷಗಿರಿ ದಾನಿ, ಪ್ರಕಾಶ್, ಶ್ರೀನಿವಾಸರೆಡ್ಡಿ ಮುಂತಾದವರು ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page