Thursday, June 13, 2024

ಸತ್ಯ | ನ್ಯಾಯ |ಧರ್ಮ

ಯಶಸ್ವಿಯಾಗಿ ಜರುಗಿತು ಮಕ್ಕಳೊಡನೆ ನಾವು ಬೃಹತ್‌ ಬೈಕ್‌ ಜಾಥಾ

ಚಿತ್ರದುರ್ಗ : ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ದಿನೇ ದಿನೇ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿರುವ ಕಾರಣ, ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಮೈಸೂರಿನ ಒಡನಾಡಿ ಸಂಸ್ಥೆ ಚಿತ್ರದುರ್ಗದಲ್ಲಿ ʼಮಕ್ಕಳೊಡನೆ ನಾವುʼ ಎಂಬ ಬೃಹತ್‌ ಬೈಕ್‌ ಜಾಥಾ ಪ್ರತಿಭಟನೆಯನ್ನು ನಡೆಸಲಾಯಿತು.

ಈ ಪ್ರತಿಭಟನೆಯನ್ನು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದ ಹಲವು ಜಿಲ್ಲೆಗಳಿಂದ ಸಂವೇದನಾ ಮನಸುಳ್ಳವರು ಒಂದೆಡೆ ಸೇರಿ ಬೃಹತ್‌ ಬೈಕ್‌ ಜಾಥಾವನ್ನು ಏರ್ಪಡಿಸಿದ್ದರು.

ಜಾಥಾವು ಚಿತ್ರದುರ್ಗದ ಕನಕ ಸರ್ಕಲ್‌ನ ಬರಗೇರಮ್ಮ ದೇವಸ್ಥಾನ ಹತ್ತಿರದ ಹೊಳಲ್ಕೆರೆ ರಸ್ತೆಯಿಂದ ಪ್ರಾರಂಭವಾಗಿ ನಗರದ ಬಾಲ ಭವನ ತಲುಪಿತು. ಈ ಪ್ರತಿಭಟನೆಯಲ್ಲಿ ಅನೇಕ ಚಿಂತಕರು, ಮಾನವೀಯ ಮೌಲ್ಯಗಳುಳ್ಳ ಕೆಲವರು ಹೆಣ್ಣು ಮಕ್ಕಳ ಪರವಾಗಿ ಮಾತನಾಡಿ “ಮಕ್ಕಳೊಡನೆ ನಾವು” ಬೃಹತ್‌ ಪ್ರತಿಭಟನೆಯನ್ನು ಯಶಸ್ವಿಯಾಗಿ ನಡೆಸಿದರು.

Related Articles

ಇತ್ತೀಚಿನ ಸುದ್ದಿಗಳು