Sunday, August 18, 2024

ಸತ್ಯ | ನ್ಯಾಯ |ಧರ್ಮ

ತೂಕ ಇಳಿಸಲು ರಾತ್ರಿಯೆಲ್ಲ ಕಸರತ್ತು ಮಾಡಿದ್ದ ವಿನೇಶಾ ‘ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್’ ಹೇಳುವ ನಿಯಮಗಳೇನು?

ವಿನೇಶಾ ಪೋಗಟ್‌ ಎಂಬ ದಿಟ್ಟೆಯಿಂದ ಇನ್ನೇನು ಚಿನ್ನದ ಪದಕ ಸಿಕ್ಕೇಬಿಟ್ಟಿತು ಎಂದು ಕಾತರದಿಂದ ಕಾಯುತ್ತಿರುವಾಗ ತೂಕದಲ್ಲಾದ ಸಣ್ಣ ಏರುಪೇರಿನಿಂದಾಗಿ ಚಿನ್ನದ ಪದಕ ತಪ್ಪಿರುವ ಸುದ್ದಿ ಹರಡುತ್ತಿದ್ದಂತೆ ಭಾರತದ ತುಂಬ ನಿರಾಶೆಯ ಕಾರ್ಮೋಡ ಕವಿದಂತಾಗಿದೆ.

ವಿನೇಶಾ ಪೊಗಟ್‌ ಮೊದಲೇ ಎಲ್ಲ ತಯಾರಿ ಮಾಡಿಕೊಳ್ಳಬೇಕಿತ್ತು. ತೂಕವನ್ನು ಪರಿಶೀಲಿಸಿಕೊಳ್ಳಬೇಕಿತ್ತು ಎಂಬುದು ಕೆಲವರ ವಾದವಾಗಿದೆ. ಆದರೆ, ತನ್ನ ತೂಕ ಹೆಚ್ಚಿರುವುದನ್ನು ಹಿಂದಿನ ರಾತ್ರಿಯೇ ಪರಿಶೀಲಿಸಿಕೊಂಡಿದ್ದ ವಿನೇಶಾ, ಹೆಚ್ಚಿನ ತೂಕವನ್ನು ರಾತ್ರಿಯೆಲ್ಲ ಕರಗಿಸಿಕೊಳ್ಳಲು ಹಲವಾರು ರೀತಿಯಲ್ಲಿ ಕಸರತ್ತು ಮಾಡಿದ್ದರು ಎಂದು ತಿಳಿದು ಬಂದಿದೆ.

ಈ ಮೊದಲು 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶಾ ಪೋಗಟ್‌, ಆ ವಿಭಾಗದಲ್ಲಿ ಮತ್ತೊಬ್ಬ ಸ್ಪರ್ಧಿ ಇದ್ದುದಕ್ಕಾಗಿ ತಾವು 50ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಒಪ್ಪಿದ್ದರು. ಹೀಗೆ ವಿಭಾಗವನ್ನು ಬದಲಿಸಿಕೊಂಡಿರುವುದು ಭಾರತಕ್ಕೆ ಚಿನ್ನದ ಪದಕ ಮಿಸ್‌ ಆಗಿರುವುದು ಕಾರಣ ಎಂಬ ವಾದಗಳು ಸಹ ಈಗ ಕೇಳಿ ಬರುತ್ತಿವೆ. .

ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯೂ) ನಿಯಮಗಳ ಪ್ರಕಾರ, ಒಬ್ಬ ಕುಸ್ತಿಪಟು ತೂಕ ಪರೀಕ್ಷೆಯಲ್ಲಿ ವಿಫಲರಾದರೆ, ತಕ್ಷಣವೇ ಅವರನ್ನು ಅನರ್ಹಗೊಳಿಸಲಾಗುತ್ತದೆ ಮತ್ತು ಕೊನೆಯ ಸ್ಥಾನದಲ್ಲಿ ಇರಿಸಲಾಗುತ್ತದೆ. ಪರಿಣಾಮವಾಗಿ, ವಿನೇಶ್ ಫೋಗಟ್ ಫೈನಲ್ ತಲುಪಿದ್ದರೂ ಯಾವುದೇ ಪದಕಕ್ಕೆ ಅರ್ಹರಾಗುವುದಿಲ್ಲ. ಫೈನಲ್ ಪಂದ್ಯದಲ್ಲಿ ಸೋತರೂ ಬೆಳ್ಳಿ ಪದಕ ಖಚಿತವಾಗಿತ್ತು.

ತೂಕ ಪರೀಕ್ಷೆಯಲ್ಲಿ ವಿಫಲಗೊಳ್ಳುವ ಬಗ್ಗೆ ಯುಡಬ್ಲ್ಯೂಡಬ್ಲ್ಯೂ ನಿಯಮಗ ಪ್ರಕಾರ, ಒಬ್ಬ ಅಥ್ಲೀಟ್ ತೂಕ-ಇನ್‌ಗೆ ಹಾಜರಾಗದಿದ್ದರೆ ಅಥವಾ ವಿಫಲವಾದರೆ ಅಂಥವರನ್ನು ಸ್ಪರ್ಧೆಯಿಂದ ಹೊರಹಾಕಲ್ಪಡುತ್ತಾರೆ ಮತ್ತು ಶ್ರೇಯಾಂಕವಿಲ್ಲದೆ ಅವರನ್ನು ಅವರನ್ನು ಕೊನೆಯ ಶ್ರೇಣಿಯಲ್ಲಿ ಇರಿಸಲಾಗುತ್ತದೆ.

ಈ ಬಗ್ಗೆ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ತೂಕದ ಹೊಂದಾಣಿಕೆಯ ಬಗ್ಗೆ ವಿವರಗಳನ್ನು ನೀಡಿಲ್ಲ. ಆದಾಗ್ಯೂ, ಬುಧವಾರ ಬೆಳಿಗ್ಗೆ ವಿನೇಶಾ ಫೋಗಟ್ 100-150 ಗ್ರಾಂ ಅಧಿಕ ತೂಕ ಹೊಂದಿದ್ದರು ಎಂದು ಅನೇಕ ವರದಿಗಳು ಹೇಳುತ್ತವೆ.

ಮಂಗಳವಾರ ಬೆಳಗ್ಗೆ ವಿನೇಶ್ ಫೋಗಟ್ 50 ಕೆಜಿ ಗರಿಷ್ಠ ಮಿತಿಯನ್ನು ತಲುಪಿದರು. ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಮತ್ತು ಜಪಾನ್‌ನ ಟೋಕಿಯೊ ಚಿನ್ನದ ಪದಕ ವಿಜೇತ ಯುಯಿ ಸುಸಾಕಿ ವಿರುದ್ಧ ಸೇರಿದಂತೆ ಮೂರು ಪಂದ್ಯಗಳನ್ನು ಗೆದ್ದರು, ಯಾವುದೇ ತೂಕ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ, ಬುಧವಾರ ಬೆಳಗ್ಗೆ ನಡೆದ ತೂಕ ಪರೀಕ್ಷೆಯಲ್ಲಿ ಅವರು ಅನುತ್ತೀರ್ಣರಾಗಿದ್ದಾರೆ.

ಕುಸ್ತಿ ನಿಯಮಗಳ ಆರ್ಟಿಕಲ್ 11, ಅಧ್ಯಾಯ 3 ರ ಪ್ರಕಾರ, ಎಲ್ಲಾ ಸ್ಪರ್ಧೆಗಳಿಗೆ, ಸಂಬಂಧಿತ ತೂಕದ ವಿಭಾಗದ ಪ್ರತಿ ಬೆಳಿಗ್ಗೆ ತೂಕವನ್ನು ಪರಿಶೀಲಿಸಲಾಗುತ್ತದೆ. ತೂಕ ಮತ್ತು ವೈದ್ಯಕೀಯ ನಿಯಂತ್ರಣವು 30 ನಿಮಿಷಗಳವರೆಗೆ ಇರುತ್ತದೆ. ಎರಡನೇ ದಿನ ಬೆಳಿಗ್ಗೆ, ಫೈನಲ್‌ಗಳಲ್ಲಿ ಭಾಗವಹಿಸುವ ಕುಸ್ತಿಪಟುಗಳು ಮಾತ್ರ ತೂಕ-ಇನ್‌ಗೆ ಹಾಜರಾಗಬೇಕು, ಇದು 15 ನಿಮಿಷಗಳವರೆಗೆ ಇರುತ್ತದೆ.

ನೇಶ್ ಫೋಗಟ್, ಅವರ ಚಿನ್ನದ ಪದಕದ ಸ್ಪರ್ಧಿ ಯುಎಸ್ಎಯ ಸಾರಾ ಹಿಲ್ಡೆಬ್ರಾಂಡ್ ಮತ್ತು ರೆಪೆಚೇಜ್ ವಿಜೇತರನ್ನು ಬುಧವಾರ ಬೆಳಿಗ್ಗೆ ತಮ್ಮ ಪದಕ ಪಂದ್ಯಗಳಿಗೆ ಮೊದಲು ಎರಡನೇ ಬಾರಿಗೆ ತೂಗಲಾಯಿತು. ಅಧಿಕ ತೂಕ ಕಂಡು ಬಂದ ನಂತರ ವಿನೇಶ್ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು.

ತೂಕ ಕರಗಿಸಿಕೊಳ್ಳಲು ಹರಸಾಹಸ: ತೂಕ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ತೂಕ ಇಳಿಸಲು ರಾತ್ರಿಯಿಡೀ ಶ್ರಮಿಸಿದ್ದಾರೆ. ಜಾಗಿಂಗ್, ಸ್ಕಿಪ್ಪಿಂಗ್ ಮತ್ತು ಸೈಕ್ಲಿಂಗ್ ಮಾಡಿದ್ದಾರೆ. ಈ ರೀತಿ ಮಾಡಿದರೂ ನಿರೀಕ್ಷಿತ ಫಲಿತಾಂಶ ಬರದ ಕಾರಣ, ಆಕೆಯ ಕೋಚ್ ಮತ್ತು ಸಿಬ್ಬಂದಿ ಸೇರಿ ವಿ, ಆಕೆಯ ಕೂದಲನ್ನೂ ಸಹ ಕತ್ತರಿಸಿದ್ದಾರೆ. ಇಷ್ಟೆಲ್ಲ ಪ್ರಯತ್ನಗಳನ್ನು ಮಾಡಿದರೂ ಅಂತಿಮ ಪರೀಕ್ಷೆಯ ವೇಳೆ 150 ಗ್ರಾಂ ಅಧಿಕ ತೂಕ ಹೊಂದಿದ್ದರು. ಹೀಗಾಗಿ ಒಲಿಂಪಿಕ್ಸ್​ ಸಂಘಟಕರು ಆಕೆಯನ್ನು ಅನರ್ಹಗೊಳಿಸಿದರು ಎಂದು ತಿಳಿದು ಬಂದಿದೆ.

ಆಸ್ಪತ್ರೆಗೆ ದಾಖಲು: ವಿನೇಶ್ ಅವರು ತೂಕವನ್ನು ಕಳೆದುಕೊಳ್ಳಲು ರಾತ್ರಿಯಿಡೀ ಜಾಗಿಂಗ್, ಸ್ಕಿಪ್ಪಿಂಗ್ ಮತ್ತು ಸೈಕ್ಲಿಂಗ್ ಮಾಡಿದ ಪರಿಣಾಮ ದೇಹ ಡೀಹೈಡ್ರೇಟ್​ ಆಗಿ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page