Home ಬೆಂಗಳೂರು ಉತ್ತರ ಕರ್ನಾಟಕ ಮಂದಿನಾ ಯಾವಾಗ ಉದ್ಧಾರ ಮಾಡ್ತೀರಾ? ಬೊಮ್ಮಾಯಿ ವಿರುದ್ಧ ಆಕ್ರೋಶ

ಉತ್ತರ ಕರ್ನಾಟಕ ಮಂದಿನಾ ಯಾವಾಗ ಉದ್ಧಾರ ಮಾಡ್ತೀರಾ? ಬೊಮ್ಮಾಯಿ ವಿರುದ್ಧ ಆಕ್ರೋಶ

0

ಬೆಂಗಳೂರು: ಉತ್ತರ ಕರ್ನಾಟಕದ ಮಂದಿನಾ ಯಾವಾಗ ಉದ್ಧಾರ ಮಾಡ್ತೀರಾ ಎಂದು ಸೆಮಿಕಂಡಕ್ಟರ್‌ ಉದ್ದಿಮೆಗೆ ಭರವಸೆ ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಉತ್ತರ ಕರ್ನಾಟಕದ ಮಂದಿ ಕಿಡಿಕಾರಿದ್ದಾರೆ.

ಈ ಹಿಂದೆಯೇ, ಮೈಸೂರಿನಲ್ಲಿ ಕೈಗಾರಿಕೋದ್ಯಮ ಬೆಳವಣಿಗೆಗೆ ಬೇಕಾದ ಸಕಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಸಿದ್ದವಿದ್ದು, ಮುಂದಿನ ಎರಡಿ ವರ್ಷಗಳಲ್ಲಿ ಹೊಸದಾಗಿ 500 ಸ್ಟಾರ್ಟ್‌ ಅಪ್‌ ಕಾರ್ಯಾರಂಭ ಮಾಡಲಿವಿ. ಮೈಸೂರಿನಲ್ಲಿ ಸ್ಥಾಪನೆಯಾಗುತ್ತಿರುವ ಸೆಮಿಕಂಡಕ್ಟರ್‌ ಫ್ಯಾಭ್‌ ವಲಯಕ್ಕೆ 200 ಎಕರೆ ಭೂಮಿ ನೀಡಲಾಗಿದ್ದು, ಜೊತೆಗೆ ಹೆಚ್ಚುವರಿಯಾಗಿ 250 ಎಕರೆ ಭೂಮಿ ಮೀಸಲಿಡಲಾಗಿದೆ. ರಾಜ್ಯದಲ್ಲಿ ಚಿಪ್‌ ತಯಾರಿಕೆ ಆಗಬೇಕೆಂದು ಸರ್ಕಾರದ ಸಂಕಲ್ಪವಾಗಿದೆ ಎಂದೆಲ್ಲಾ ಚರ್ಚೆಯಾಗುತ್ತಿತ್ತು.

ಈ ಕುರಿತು ಟ್ಚೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ʼರಾಜ್ಯದ ಐಟಿಬಿಟಿ ಕ್ಷೇತ್ರಕ್ಕೆ ಮತ್ತೊಂದು ಗರಿಮೆ. ದೇಶದಲ್ಲೇ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಸೆಮಿಕಂಡಕ್ಟರ್‌ ಉದ್ದಿಮೆ ನಿರ್ಮಾಣವಾಗುವ ಭರವಸೆಯನ್ನು ಬಸವರಾಜ ಬೊಮ್ಮಾಯಿಯವರು ನೀಡಿದ್ದಾರೆ. $3 ಬಿಲಿಯನ್ ವೆಚ್ಚದ ಫ್ಯಾಭ್‌ ಫೆಬ್ರವರಿಯಲ್ಲಿ ಸ್ಥಾಪನೆಗೊಳ್ಳುವ ಸಾಧ್ಯತೆಯಿದ್ದು, ಮೈಸೂರಿನಲ್ಲಿ ಬೃಹತ್‌ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಗರಿಗೆದರಿದೆʼ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಟ್ವೀಟಿಗರು, ʼಎಲ್ಲಾ ಯೋಜನೆಗಳನ್ನು ಮೈಸೂರು ಕರ್ನಾಟಕ ಭಾಗಗಳಲ್ಲೇ ಅಭಿವೃದ್ಧಿ ಮಾಡ್ತಾ ಉತ್ತರ ಕರ್ನಾಟಕವನ್ನು ಮರೆತು ಹೋಗಿದ್ದೀರಾ. ಇಲ್ಲಿನ ಎಷ್ಟೋ ಯುವಕರಿಗೆ ಕೆಲಸ ಕೊಡಿಸುವ ಯೋಜನೆಯನ್ನು ಮಾಡಿ ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಅಭಿವೃದ್ಧಿ ಮಾಡುತ್ತಿರುವ ಹಾಗೆ ನಮ್ಮ ಉತ್ತರ ಕರ್ನಾಟಕವನ್ನು ಯಾವಾಗ ಉದ್ಧಾರ ಮಾಡ್ತೀರಾ? ಇಲ್ಲ ಅಂದ್ರೆ ಉತ್ತರ ಕರ್ನಾಟಕದ ಹೆಸರು ಹೇಳಿಕೊಂಡು ನೀವು ಉದ್ಧಾರ ಆಗ್ತೀದಿರಾ ಅಷ್ಟೇ ಎಂದು ಉತ್ತರ ಕರ್ನಾಟಕದ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.



You cannot copy content of this page

Exit mobile version