Thursday, June 20, 2024

ಸತ್ಯ | ನ್ಯಾಯ |ಧರ್ಮ

ಭಾರತಮಾತೆಯನ್ನೇಕೆ ಅವಮಾನಿಸುತ್ತೀರಿ ಮೋದಿಯವರೇ? – ಸುಬ್ರಮಣಿಯನ್ ಸ್ವಾಮಿ

ಸೌತ್‌ ಆಫ್ರಿಕಾದ ಜೊಹನ್ಸ್‌ಬರ್ಗ್‌ (Johannesburg) ನಲ್ಲಿ ನಡೆದ ಬ್ರಿಕ್ಸ್‌ ಸಮ್ಮೇಳನದಲ್ಲಿ (BRICS Summit) ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) , ಸೌತ್‌ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಫೋಸ (Cyril Ramaphosa) ಹಾಗೂ ಹಾಗೂ ಇತರರೊಂದಿಗೆ ಕುಳಿತುಕೊಳ್ಳುವಾಗ ತಡವರಿಸುವ ವಿಡಿಯೋ ವೈರಲ್‌ ಆಗಿತ್ತು.

ಇದರ ಫೋಟೋವೊಂದನ್ನು ರಿಟ್ವೀಟ್‌ ಮಾಡಿರುವ ಬಿಜೆಪಿ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿ (Subramanian Swamy ) “ ಚೀನಾ LACಯನ್ನು ದಾಟಿ ಲಡಾಕ್‌ನ 4069 ಚದರ ಕಿಲೋಮೀಟರ್ ನುಂಗಿದ ಬಗ್ಗೆ ಮೋದಿ ಮಾತನಾಡದ ಕಾರಣ ಕ್ಸಿ (ಚೀನಾ ಅಧ್ಯಕ್ಷ) ತಾವು ಕುಳಿತುಕೊಂಡು ಮೋದಿಯವರಿಗೆ ಕುಳಿತುಕೊಳ್ಳಲು ಸೂಚಿಸಿದರು. ಮೋದಿಯವರು ಭಾರತ ಮಾತೆಗೆ ಈ ರೀತಿ ಏಕೆ ಅವಮಾನಿಸುತ್ತಾರೆ?” ಎಂದು ಟ್ವೀಟ್‌ ಮಾಡಿದ್ದಾರೆ.

ಸಭೆಯಲ್ಲಿ ಚೀನಾ ಅಧ್ಯಕ್ಷ ಮತ್ತು ಇತರರು ಕುಳಿತುಕೊಂಡಾಗ ಪ್ರಧಾನಿ ಮೋದಿ ತಡವರಿಸಿದಂತೆ ಮಾಡುತ್ತಾರೆ. ಈ ವಿಡಿಯೋವನ್ನು ಅನೇಕರು ಟ್ವೀಟರ್‌ ನಲ್ಲಿ ಹಂಚಿಕೊಂಡಿದ್ದರು.


https://twitter.com/Swamy39/status/1696049078319382570?s=20

Related Articles

ಇತ್ತೀಚಿನ ಸುದ್ದಿಗಳು