ಮೈಸೂರು: ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಪಕ್ಷದ ಪ್ರಮುಖ ನಾಯಕ, ಮಾಜಿ ಸಚಿವ ವಿ.ಸೋಮಣ್ಣ ಅವರು ಡಿಸೆಂಬರ್ 6ರ ನಂತರ ಮುಂದಿನ ರಾಜಕೀಯ ನಡೆಯನ್ನು ಬಹಿರಂಗಪಡಿಸುವುದಾಗಿ ಘೋಷಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಸೋಮಣ್ಣ ಕೇಸರಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಪ್ರಸ್ತುತ ವಿಜಯೇಂದ್ರ ಪಡೆದಿರುವ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಸೋಮಣ್ಣ ಕಣ್ಣಿಟ್ಟಿದ್ದರು.
ವಿಧಾನಸಭಾ ಚುನಾವಣೆಗೂ ಮುನ್ನ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮಣ್ಣ ಅವರಿಗೆ ಕಾಂಗ್ರೆಸ್ ನಲ್ಲಿ ಮುಖ್ಯ ಹುದ್ದೆ ನೀಡುವುದಾಗಿ ಹೇಳಿದ್ದರು. ಆದರೆ, ಸೋಮಣ್ಣ ಬಿಜೆಪಿಯಲ್ಲೇ ಉಳಿಯಲು ನಿರ್ಧರಿಸಿದ್ದರು.
ಸೋಮಣ್ಣ ಮತ್ತು ಶಿವಕುಮಾರ್ ಒಂದೇ ಪ್ರದೇಶಕ್ಕೆ ಸೇರಿದವರಾಗಿರುವ ಕಾರಣ ಡಿಕೆ ಶಿವಕುಮಾರ್ ನೀಡಿರುವ ಆಫರ್ ಈಗಲೂ ಚಾಲ್ತಿಯಲ್ಲಿದೆ ಎಂದು ಪಕ್ಷದ ಮೂಲಗೂ ಹೇಳಿವೆ
ಇಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಸೋಮಣ್ಣ, ಹಿರಿಯ ನಾಯಕರ ಮೇಲೆ ಪಕ್ಷವು ಸವಾರಿ ಮಾಡುತ್ತಿದೆ ಎನ್ನುವ ಪಕ್ಷದ ಹಿರಿಯ ನಾಯಕ ಲಿಂಬಾವಳಿಯವರ ಮಾತನ್ನು ತಾನು ಒಪ್ಪುವುದಾಗಿ ಸೋಮಣ್ಣ ತಿಳಿಸಿದರು.
“ಡಿಸೆಂಬರ್ 6ರ ನಂತರ, ನಾನು ಎಲ್ಲವನ್ನೂ ವಿವರವಾಗಿ ವಿವರಿಸುತ್ತೇನೆ. ಬಿಜೆಪಿಯಿಂದ ಹೇಗೆ ತೊಂದರೆಗೊಳಗಾಗಿದ್ದೇನೆ ಎನ್ನುವುದನ್ನು ಹೇಳುತ್ತೇನೆ. ರಾಜಕೀಯವೆನ್ನುವುದು ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಕಾರಣ ನಾಟಕ ಕಂಪನಿಯಲ್ಲ. ಆಂತರಿಕ ಹೊಂದಾಣಿಕೆಗಳಿದಲೇ ನಡೆಯುವುದಿಲ್ಲ. “ನನ್ನನ್ನು ಯಾರೂ ಸಂಪರ್ಕಿಸಿಲ್ಲ ಮತ್ತು ಅದೇ ರೀತಿ ನಾನು ಯಾರನ್ನೂ ಸಂಪರ್ಕಿಸಿಲ್ಲ” ಎಂದು ಅವರು ಹೇಳಿದರು.
ಸೋಮಣ್ಣ ಅವರನ್ನು ಚಾಮರಾಜನಗರ ಜಿಲ್ಲೆಯ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಮಾಡಲಾಗಿತ್ತು. ಒಂದು ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದಿದ್ದರು. ಎರಡೂ ಸ್ಥಾನಗಳಲ್ಲಿ ಸೋಲು ಅನುಭವಿಸಿದರು.
ಈ ಹಿಂದೆ ಅವರು ಬೆಂಗಳೂರಿನ ಗೋವಿಂದರಾಜ್ ನಗರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.ಪಕ್ಷದ ಒಳಗಿನ ರಾಜಕೀಯಕ್ಕೆ ಬಲಿಯಾದೆ ಎಂದರು.
ಜಾತಿ ಬೆಂಬಲವಿಲ್ಲದೆ ಗೆಲುವು ದಾಖಲಿಸಿದ ಕೆಲವೇ ರಾಜಕಾರಣಿಗಳಲ್ಲಿ ಸೋಮಣ್ಣ ಕೂಡ ಒಬ್ಬರು ಎಂಬುದು ಗಮನಾರ್ಹ.
ಗೋವಿಂದರಾಜನಗರ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದೆ. ಕಾಂಗ್ರೆಸ್ ಎದುರು ಬಿಜೆಪಿ ಇಲ್ಲಿ ಸ್ಥಾನ ಕಳೆದುಕೊಂಡಿತು. ಸೋಮಣ್ಣ ತುಮಕೂರಿನಲ್ಲಿ ಶೀಘ್ರದಲ್ಲೇ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.