ಹಾಸನ : ತಾಲೂಕಿನ ಆರ್.ಟಿ.ಓ. ಕಚೇರಿಯಲ್ಲಿ ದಲ್ಲಾಳಿ ಮೋಹನ್ ಶೆಟ್ಟಿಯವರ ಹುಟ್ಟುಹಬ್ಬವನ್ನು ಕಚೇರಿಯ ಸಮಯದಲ್ಲಿ ಆಚರಿಸಿದ್ದು, ಇದುವರೆಗೂ ಈ ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಿ ಅಮಾನತ್ತು ಮಾಡದಿರುವ ಕಾರಣ ಮುಂದೆ ವಿವಿಧ ಸಂಘಟನೆ ಒಟ್ಟು ಗೂಡಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಮಲೆನಾಡು ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಬಿ.ಎಸ್. ದರ್ಶನ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2025 ಜುಲೈ 11 ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಸಕಲೇಶಪುರ ಎಆರ್‌ಟಿಒ ಕಚೇರಿಯಲ್ಲಿ ಅಲ್ಲಿಯ ದಲ್ಲಾಳಿ ಮೋಹನ್ ಶೆಟ್ಟಿ ರವರ ಹುಟ್ಟುಹಬ್ಬವನ್ನು ಅಲ್ಲಿಯ ಅಧಿಕಾರಿಯದ ಮಧುರ ಹಾಗೂ ಕಚೇರಿಯ ಸಿಬ್ಬಂದಿಗಳು ಸೇರಿ ಅತ್ಯಂತ ವಿಜೃಂಭಣೆಯಿAದ ಅಂದರ ಹಾರ ತುರಾಯಿ ಕೇಕು ಕತ್ತರಿಸಿ ಸಂಭ್ರಮಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸುತ್ತಾರೆ ಎಂದು ದೂರಿದರು. ಈ ಒಂದು ಕಾರ್ಯದಿಂದ ಆ ದಿನ ಆರ್.ಟಿ.ಓ. ಕಚೇರಿಗೆ ಕೆಲಸಗಳಿಗೆಂದು ಬಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಸರ್ಕಾರಿ ಕಚೇರಿಯ ಸರ್ಕಾರಿ ಕರ್ತವ್ಯದ ಸಮಯದಲ್ಲಿ ಸರ್ಕಾರಿ ಸಮಯವನ್ನು ಹಾಗೂ ಕೆಲಸದ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಲೆನಾಡು ರಕ್ಷಣಾ ಸೇನೆ ಹಲವಾರು ಬಾರಿ ಒತ್ತಾಯಿಸಿದ್ದು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಹ ಮನವಿ ಸಲ್ಲಿಸಿದ್ದು, ಇದುವರೆಗೆ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡಿರುವುದಿಲ್ಲ ಎಂದರು.
ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದಲ್ಲಿ ಅವರ ಮೇಲಾಧಿಕಾರಿಗಳ ಕುಮ್ಮಕ್ಕು ಸಹ ಇರುವ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದು ಹಾಗೂ ಇದೇ ಅಧಿಕಾರಿ ಒಂದು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದು, ಅದರಲ್ಲಿ ಆ ವ್ಯಕ್ತಿಯಿಂದ ಕಚೇರಿಗೆ ಬೀಗ ಹಾಗೂ ಗೇಟ್ ಉಡುಗೊರೆ ನೀಡಿದು, ಆ ಒಂದು ಕಾರಣಕ್ಕೋಸ್ಕರ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದ್ದು, ಹಾಗೂ ಸನ್ಮಾನವನ್ನು ಮಾಡಲಾಗಿದೆ. ಸರ್ಕಾರಿ ಸಾರಿಗೆ ಕಚೇರಿಯಲ್ಲಿ ಪ್ರತಿ ಶುಕ್ರವಾರ ಲಕ್ಷಿ÷್ಮ ಪೂಜೆಯನ್ನು ಖಾಸಗಿ ಡ್ರೆವಿಂಗ್ ಶಾಲೆಗಳು ಮಾಡಿಕೊಂಡು ಬಂದಿದೆ ಎಂದು ಅವರೇ ಒಪ್ಪಿಕೊಂಡಿದ್ದು ಹಾಗೂ ಯೋಚನೆ ಮಾಡುವಷ್ಟರಲ್ಲಿ ಇದೆಲ್ಲವೂ ಆಗಿಹೋಗಿದೆ ಎಂದು ಉಡಾಫೆ ಉತ್ತರ ನೀಡುವ ಮೂಲಕ ಪತ್ರ ಬರೆದಿರುತ್ತಾರೆ ಎಂದು ಆರೋಪಿಸಿದರು. ಇದೆಲ್ಲ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಸರ್ಕಾರದ ಗಮನಕ್ಕೂ ಬಂದಿದ್ದು, ಆದ್ರೇ ಈವರೆಗೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿರುವುದಿಲ್ಲ ಹಾಗಾಗಿ ಮಲೆನಾಡು ರಕ್ಷಣಾ ಸೇನ ಹಾಸನ ಜಿಲ್ಲಾ ಘಟಕ ಸಕಲೇಶಪುರ ತಾಲೂಕು ಘಟಕ ಹಾಗೂ ಮಲೆನಾಡು ರಕ್ಷಣಾ ಸೇನೆ ರಾಜ್ಯ ಘಟಕ ಎಲ್ಲವೂ ಒಟ್ಟಿಗೆ ಸೇರಿ ಇದೇ ಶುಕ್ರವಾರದಂದು ಸಕಲೇಶಪುರ ತಾಲೂಕು ಕಚೇರಿ ಮುಂಭಾಗದಿAದ ಸ ಕಲೇಶಪುರ ಎಆರ್‌ಟಿಓ ಕಚೇರಿಯ ವರಿಗೆ ಬೃಹತ್ ಮೆರವಣಿಗೆ ಮೂಲಕ ಬಂದು ಕಚೇರಿಯ ಮುಂಭಾಗದಲ್ಲಿ ವಿಭಿನ್ನ ರೀತಿಯ ಕೇಕ್ ಕತ್ತರಿಸುವ ಮೂಲಕ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇವೆ ಹಾಗೂ ಎಲ್ಲಾ ಸಾರ್ವಜನಿಕರು ಹಾಗೂ ಕನ್ನಡಪರ ಜನಪರ ಸಂಘಟನೆಗಳು ಕೈಜೋಡಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ರಕ್ಷಣಾ ಸೇನೆ ಉಪಾಧ್ಯಕ್ಷ ಎಚ್.ಸಿ. ನಾಗೇಂದ್ರ ಹೊಸಕೋಲು, ಜಂಟಿ ಕಾರ್ಯದರ್ಶಿಯಾದ ಎಚ್.ಎಸ್. ಪಾಲಾಕ್ಷ, ಸಂಚಾಲಕ ಶರತ್ ಶೆಟ್ಟಿ, ಸಹ ಸಂಚಾಲಕ ಆನಂದ್ ಹಾಗೂ ಯುವರಾಜ್ ಇತರರು ಉಪಸ್ಥಿತರಿದ್ದರು.