ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಬುಧವಾರ ಅಧಿವೇಶನ ಆರಂಭವಾದ ಬೆನ್ನಲ್ಲೇ ಉಭಯ ಸದನಗಳನ್ನು ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ವಿವಿಧ ವಿಷಯಗಳ ಕುರಿತು 18 ಮುಂದೂಡಿಕೆ ನಿರ್ಣಯಗಳನ್ನು ಸ್ಪೀಕರ್ ತಿರಸ್ಕರಿಸಿದರು.
ಪ್ರತಿಪಕ್ಷದ ಸದಸ್ಯರು ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಅದಾನಿ ವಿಷಯದ ಬಗ್ಗೆ ಚರ್ಚೆ ನಡೆಸುವಂತೆ ಪ್ರತಿಭಟಿಸಿದರು. ಇದರೊಂದಿಗೆ ಮೇಲ್ಮನೆಯನ್ನು ಬೆಳಗ್ಗೆ 11.30ಕ್ಕೆ ಮತ್ತು ನಂತರ ಮರುದಿನಕ್ಕೆ ಮುಂದೂಡಲಾಯಿತು.
ಮತ್ತೊಂದೆಡೆ, ಅದಾನಿ ಹಗರಣದ ಬಗ್ಗೆ ಚರ್ಚಿಸಲು ಲೋಕಸಭೆಯಲ್ಲಿ ಪ್ರತಿಭಟನೆಗಳು ಮುಂದುವರೆದವು. ಬೆಳಿಗ್ಗೆ 11.00 ಗಂಟೆಗೆ ಆರಂಭವಾದ ಸಭೆಯನ್ನು ಮಧ್ಯಾಹ್ನ 12.00 ಗಂಟೆಗೆ ಮುಂದೂಡಲಾಯಿತು. ಸದನ ಮತ್ತೆ ಸೇರಿದ ನಂತರವೂ ಅದಾನಿ ಪ್ರಕರಣದ ಕುರಿತು ಚರ್ಚೆ ನಡೆಸುವಂತೆ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದರಿಂದ ಸ್ಪೀಕರ್ ಸದನವನ್ನು ನಾಳೆಗೆ ಮುಂದೂಡಿದರು.