ನವದೆಹಲಿ : ಹರಿಯಾಣದ (Haryana) ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 26ರಂದು ಮೇಲ್ವಿಚಾರಕರು ಮಹಿಳಾ ಸ್ವಚ್ಛತಾ ಕಾರ್ಮಿಕರ ಮೇಲೆ ಲೈಂಗಿಕ ದೌರ್ಜನ್ಯ (Sexual harassment) ಎಸಗಿದ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ವಕೀಲರ ಸಂಘ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme court) ಇಂದು (ನ.28) ವಿಚಾರಣೆ ನಡೆಸಿದೆ.
ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಮುಟ್ಟು ಆಗಿದೆ ಎಂಬುದನ್ನು ಸಾಬೀತುಪಡಿಸಲು ಖಾಸಗಿ ಅಂಗದ ಫೋಟೊ ತೋರಿಸಬೇಕು ಎಂದು ಒತ್ತಾಯಪಡಿಸಿದ ಆರೋಪ ಕೇಳಿಬಂದಿತ್ತು. ಈ ವರ್ತನೆ ಕೀಳು ಮನಃಸ್ಥಿತಿಯನ್ನು ತೋರಿಸುತ್ತದೆ. ಕರ್ನಾಟಕದಲ್ಲಿ ಮುಟ್ಟಿನ ರಜೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗಿದ್ರೆ ಮುಟ್ಟು ಆಗಿರುವುದರ ಪುರಾವೆ ಕೇಳುತ್ತಾರೆಯೇ..? ಎಂದು ಬಿ.ವಿ.ನಾಗರತ್ನ ಹೇಳಿದ್ದಾರೆ.
ನಮಗೆ ಮುಟ್ಟಿನ ಕಾರಣ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳಿದಾಗ, ಅದನ್ನು ಸಾಬೀತುಪಡಿಸಲು ಖಾಸಗಿ ಅಂಗದ ಫೋಟೊ ತೆಗೆದು ತೋರಿಸುವಂತೆ ಮೇಲ್ವಿಚಾರಕರು ಒತ್ತಾಯಿಸಿದ ಆರೋಪ ಕೇಳಿಬಂದಿದೆ. ಇದೊಂದು ಕ್ರಿಮಿನಲ್ ಪ್ರಕರಣವಾಗಿದ್ದು, ಗಂಭೀರ ಗಮನಹರಿಸಬೇಕಾದ ವಿಷಯ ಎಂದು ಹಿರಿಯ ವಕೀಲ ವಿಕಾಸ್ ಸಿಂಗ್ ವಾದಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಡಿ.15 ಕ್ಕೆ ಮುಂದೂಡಿಕೆ ಮಾಡಲಾಗಿದೆ.
