Home ರಾಜಕೀಯ ಮಹಿಳಾ ಮೀಸಲಾತಿ ಮಸೂದೆ ಸೋಲುತ್ತದೆ ಎಂದು ತಿಳಿದಿದ್ದರೂ ಮಂಡಿಸಲಾಯಿತೇ? ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸಲು...

ಮಹಿಳಾ ಮೀಸಲಾತಿ ಮಸೂದೆ ಸೋಲುತ್ತದೆ ಎಂದು ತಿಳಿದಿದ್ದರೂ ಮಂಡಿಸಲಾಯಿತೇ? ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸಲು ಸಂಚು ನಡೆಸಲಾಯಿತೇ?

0

ಅಗತ್ಯವಿರುವ ಬಹುಮತ ಇಲ್ಲದಿದ್ದರೂ, ಲೋಕಸಭೆಯಲ್ಲಿ 131ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮೋದಿ ಸರ್ಕಾರ ಏಕೆ ಮಂಡಿಸಿತು? ಕ್ಷೇತ್ರ ಪುನರ್ ವಿಂಗಡಣೆಯೊಂದಿಗೆ (Delimitation) ಮಹಿಳಾ ಮಸೂದೆಯನ್ನು ಜೋಡಿಸಿದರೆ ವಿರೋಧ ಪಕ್ಷಗಳು ಒಪ್ಪುವುದಿಲ್ಲ ಎಂದು ತಿಳಿದಿದ್ದರೂ, ಮತದಾನಕ್ಕೆ ಸಿದ್ಧವಾಗಿದ್ದು ಏಕೆ? ಮಹಿಳೆಯರನ್ನು ಅವಮಾನಿಸಲೆಂದೇ ಕೇಂದ್ರ ಸರ್ಕಾರ ಈ ರೀತಿ ಮಾಡಿದೆಯೇ? ಎಂಬ ಚರ್ಚೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿವೆ.

ನೆಟ್ಟಿಗರ ವಿಶ್ಲೇಷಣೆಯ ಪ್ರಕಾರ, ಸಂವಿಧಾನ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವಾಗಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. 543 ಸದಸ್ಯರ ಬಲವಿರುವ ಲೋಕಸಭೆಯಲ್ಲಿ ಸದ್ಯ ಎನ್‌ಡಿಎ ಕೂಟಕ್ಕೆ 293 ಸದಸ್ಯರ ಬಲವಿದೆ. 131ನೇ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಕನಿಷ್ಠ 360 ಸದಸ್ಯರ ಬೆಂಬಲ ಬೇಕು. ಆದರೆ ಬಿಜೆಪಿಯ ಬಳಿ ಆ ಸಂಖ್ಯಾಬಲವಿಲ್ಲ.

ಮತದಾನದ ಸಮಯದಲ್ಲಿ ಸದನದಲ್ಲಿ 528 ಸದಸ್ಯರು ಉಪಸ್ಥಿತರಿದ್ದರು. ಅಂತಹ ಸಂದರ್ಭದಲ್ಲಿ ಬಹುಮತದ ಸಂಖ್ಯೆ 352ಕ್ಕೆ ಇಳಿಯುತ್ತದೆ. ಆದರೂ, ಎನ್‌ಡಿಎ ಬಳಿ ಇರುವ 293 ಸದಸ್ಯರ ಬಲ ಮಸೂದೆ ಅಂಗೀಕಾರಕ್ಕೆ ಸಾಕಾಗುವುದಿಲ್ಲ. ಇದು ತಿಳಿದಿದ್ದರೂ ಮೋದಿ ಸರ್ಕಾರ ಮತದಾನಕ್ಕೆ ಮುಂದಾಗಿದೆ ಎಂದರೆ, ಮಹಿಳಾ ಮಸೂದೆ ಗೆಲ್ಲುವುದಿಲ್ಲ ಎಂದು ಗೊತ್ತಿದ್ದೇ ಬಿಜೆಪಿ ರಾಜಕೀಯ ಆಟವಾಡಿದೆ ಮತ್ತು ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

You cannot copy content of this page

Exit mobile version