ಸಿಲ್ಹೆಟ್: ಮಹಿಳಾ ಟಿ-20 ಏಷ್ಯಾ ಕಪ್ ಭಾರತ ಮತ್ತು ಥಾಯ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ವನಿತೆಯರ ತಂಡವು 9 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿ, ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ, ಉತ್ತಮ ಪ್ರದರ್ಶನ ನೀಡುವುದರ ಮೂಲಕ ಅತಿಥೇಯ ಥಾಯ್ಲೆಂಡ್ ತಂಡವನ್ನು ಕೇವಲ 37 ರನ್‌ಗಳಿಗೆ ಆಲ್ ಔಟ್ ಮಾಡಿ ಹೊಸ ದಾಖಲೆ ಸೃಷ್ಟಿಸಿದರು.
ಸುಲಭ ಗೆಲುವಿಗೆ ಕಾರಣವಾದ ಭಾರತ ವನಿತೆಯರ ಉತ್ತಮ ಬೌಲಿಂಗ್ ಪ್ರದರ್ಶನ
ಈ ಪಂದ್ಯದಲ್ಲಿ ದೀಪ್ತಿ ಶರ್ಮಾ 4 ಓವರ್‌ಗಳಿಗೆ 10 ರನ್ ನೀಡಿ 2 ವಿಕೆಟ್ ಪಡೆದುಕೊಂಡರೆ, ಸ್ನೇಹ ರಾಣಾ ಅವರು 4 ಓವರ್‌ಗಳಿಗೆ 9 ರನ್ ನೀಡಿ 3 ವಿಕೆಟ್ ಪಡೆದುಕೊಂಡಿದ್ದಾರೆ. ಉಳಿದಂತೆ ಮೇಘನಾ ಸಿಂಗ್ ಅವರು 2.1 ಓವರ್‌ಗೆ 6 ರನ್ ನೀಡಿ 1 ವಿಕೆಟ್, ರಾಜೇಶ್ವರಿ ಗಾಯಕವಾಡ 3 ಓವರ್‌ಗಳಿಗೆ 8 ರನ್ ನೀಡಿ 2 ವಿಕೆಟ್ ಪಡೆದುಕೊಳ್ಳುವುದರ ಮೂಲಕ ಥಾಯ್ಲೆಂಡ್ ವನಿತೆಯರನ್ನು ಹೆಚ್ಚು ರನ್ ಗಳಿಸದಂತೆ ಮಾಡಿ ಪೆವಿಲಿಯನ್ ಸೇರುವಂತೆ ಮಾಡಿದರು.
ನಂತರ 38 ರನ್‌ಗಳ ಗುರಿ ಬೆನ್ನತ್ತಿದ ಭಾರತ ವನಿತೆಯರು ನಿಧಾನಗತಿಯಲ್ಲಿ ಆಟವಾಡಿ 6 ಓವರ್ಗಳಿಗೆ 1 ವಿಕೆಟ್ ಕಳೆದು ಕೊಂಡು 40ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದರು.
ಈ ಮೂಲಕ ಪಂದ್ಯ ಶ್ರೇಷ್ಠೆ ಪ್ರಶಸ್ತಿಯನ್ನು ಸ್ನೇಹ ರಾಣಾ( 9/3) ಅವರು ತಮ್ಮದಾಗಿಸಿಕೊಂಡಿದ್ದಾರೆ.