ಸೌಜನ್ಯಳಿಗೆ ನ್ಯಾಯ ಸಿಗುವ ತನಕ ಧರ್ಮಸ್ಥಳಕ್ಕೆ ಹೋಗಲ್ಲ: ದುನಿಯಾ ವಿಜಯ್‌

ಬೆಂಗಳೂರು: ಕನ್ನಡ ನಟ ದುನಿಯಾ ವಿಜಯ್‌ ತಾನು ಸೌಜನ್ಯ ವಿಷಯದಲ್ಲಿ ನ್ಯಾಯ ಸಿಗುವವರೆಗೆ ಧರ್ಮಸ್ಥಳಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಫೇಸ್ಬುಕ್‌ ಪೋಸ್ಟ್‌ ಹಾಕಿರುವ ಅವರು “ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ.

ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು – ಬುದ್ಧ” ಎಂದು ಬರೆದಿದ್ದಾರೆ.

https://m.facebook.com/story.php?story_fbid=pfbid0xNQgWm9SzadNhcKoM1URGgjch5tQ737nYMY2KWy87PXKxfLZBzXNJWhH3hexArrVl&id=100044389120871&sfnsn=wiwspwa&mibextid=RUbZ1f

ರಾಜ್ಯಾದ್ಯಂತ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ವಿಷಯದಲ್ಲಿ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು