Home ಬ್ರೇಕಿಂಗ್ ಸುದ್ದಿ ಮಹಾರಾಷ್ಟ್ರದಲ್ಲಿ ಖಾಸಗಿ ಉದ್ಯೋಗಿಗಳ ಕೆಲಸದ ಅವಧಿ 9 ರಿಂದ 10 ಗಂಟೆಗೆ ಏರಿಕೆ

ಮಹಾರಾಷ್ಟ್ರದಲ್ಲಿ ಖಾಸಗಿ ಉದ್ಯೋಗಿಗಳ ಕೆಲಸದ ಅವಧಿ 9 ರಿಂದ 10 ಗಂಟೆಗೆ ಏರಿಕೆ

0

ಮುಂಬೈ: ಮಹತ್ವದ ಕಾರ್ಮಿಕ ಸುಧಾರಣಾ ಕ್ರಮವಾಗಿ, ಮಹಾರಾಷ್ಟ್ರ ಸಚಿವ ಸಂಪುಟವು ಖಾಸಗಿ ವಲಯದ ಉದ್ಯೋಗಿಗಳ ದೈನಂದಿನ ಕೆಲಸದ ಸಮಯವನ್ನು 9 ಗಂಟೆಯಿಂದ 10 ಗಂಟೆಗಳವರೆಗೆ ಹೆಚ್ಚಿಸಲು ಅನುಮೋದನೆ ನೀಡಿದೆ.ಇದಕ್ಕೂ ಮೊದಲು ಕರ್ನಾಟಕ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ತ್ರಿಪುರ ರಾಜ್ಯಗಳು ಇದೇ ರೀತಿಯ ತಿದ್ದುಪಡಿ ಮಾಡಿದ್ದು, ಇದೀಗ ಮಹಾರಾಷ್ಟ್ರದಲ್ಲೂ ಈ ಬದಲಾವಣೆಯನ್ನು ಜಾರಿಗೆ ತರಲಾಗುತ್ತಿದೆ.

ಈ ತಿದ್ದುಪಡಿ 1948ರ ಕಾರ್ಖಾನೆಗಳ ಕಾಯ್ದೆ ಮತ್ತು 2017ರ ಮಹಾರಾಷ್ಟ್ರ ಅಂಗಡಿ ಹಾಗೂ ಕಂಪನಿಗಳ ಕಾಯ್ದೆಯಲ್ಲಿ ಮಾಡಲಾಗುತ್ತಿದ್ದು, ಕೈಗಾರಿಕೆಗಳಲ್ಲಿ ಗರಿಷ್ಠ ಬೇಡಿಕೆ ಅಥವಾ ಕಾರ್ಮಿಕರ ಕೊರತೆಯ ಸಂದರ್ಭಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಉತ್ಪಾದನೆ ನಡೆಸಲು ಅನುಕೂಲವಾಗಲಿದೆ.


ಮುಖ್ಯ ಬದಲಾವಣೆಗಳು

  • ಕೆಲಸದ ಸಮಯ: 9 ಗಂಟೆಯಿಂದ 10 ಗಂಟೆಗಳವರೆಗೆ ಹೆಚ್ಚಳ.
  • ಒಟ್ಟಾರೆ ಮಿತಿ: ದೈನಂದಿನ ಗರಿಷ್ಠ ಕೆಲಸದ ಸಮಯ 12 ಗಂಟೆಗಳವರೆಗೆ ವಿಸ್ತರಣೆ.
  • ವಿಶ್ರಾಂತಿ ವಿರಾಮ: 5 ಗಂಟೆಗಳ ಬದಲಿಗೆ 6 ಗಂಟೆಗಳ ನಂತರ ವಿಶ್ರಾಂತಿ ಪಡೆಯಲು ಅವಕಾಶ.
  • 20 ಕ್ಕಿಂತ ಹೆಚ್ಚು ಕಾರ್ಮಿಕರಿರುವ ಸಂಸ್ಥೆಗಳು: ಈ ತಿದ್ದುಪಡಿ ಕಡ್ಡಾಯ.
  • 20 ಕ್ಕಿಂತ ಕಡಿಮೆ ಕಾರ್ಮಿಕರಿರುವ ಸಂಸ್ಥೆಗಳು: ನೋಂದಣಿ ಪ್ರಮಾಣಪತ್ರ ಅಗತ್ಯವಿಲ್ಲ, ಆದರೆ ಸರಳ ಮಾಹಿತಿ ಪ್ರಕ್ರಿಯೆಯ ಮೂಲಕ ಅಧಿಕಾರಿಗಳಿಗೆ ತಿಳಿಸಬೇಕು.
  • ಅಧಿಕಾವಧಿ ಸಂಬಳ: ಕಾರ್ಮಿಕರಿಗೆ ಹೆಚ್ಚುವರಿ ಸಮಯಕ್ಕೆ ಸರಿಯಾದ ಸಂಬಳವನ್ನು ಖಚಿತಪಡಿಸುವ ವ್ಯವಸ್ಥೆ.

You cannot copy content of this page

Exit mobile version