ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಮಿತಿಯ 56ನೇ ಸಭೆ ಇಂದು ಆರಂಭಗೊಂಡಿದ್ದು, ದೇಶದ ವ್ಯಾಪಾರ ವಲಯ ಮತ್ತು ಗ್ರಾಹಕರು ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ. ಹಬ್ಬದ ಸಮಯದಲ್ಲಿ ಯಾವ ವಸ್ತುಗಳ ಬೆಲೆ ಇಳಿಯಲಿದೆ ಮತ್ತು ಯಾವ ವಸ್ತುಗಳು ದುಬಾರಿಯಾಗಲಿವೆ ಎಂಬ ಕುತೂಹಲ ಹೆಚ್ಚಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ “ದೀಪಾವಳಿ ಗಿಫ್ಟ್” ನೀಡುವ ರೀತಿಯಲ್ಲಿ ಜಿಎಸ್‌ಟಿ ಸುಧಾರಣೆಗಳಾಗಲಿವೆ ಎಂದು ಹೇಳಿದ್ದರು. ಅದರಿಂದಾಗಿ ಹಾಲಿ ಇರುವ ಶೇ 5, ಶೇ 12, ಶೇ 18 ಮತ್ತು ಶೇ 28 ರ ತೆರಿಗೆ ಹಂತಗಳನ್ನು ಸರಳಗೊಳಿಸುವ ಪ್ರಸ್ತಾಪ ಈ ಸಭೆಯಲ್ಲಿ ಚರ್ಚೆಗೆ ಬಂದಿದೆ.
ಅಗ್ಗವಾಗಲಿರುವ ವಸ್ತುಗಳು:-
- ದಿನನಿತ್ಯ ಬಳಕೆಯ ವಸ್ತುಗಳು:
ಪನ್ನೀರ್, ಪಿಟ್ಜಾ ಬ್ರೆಡ್, ಖಾಕ್ರ, ಹಣ್ಣಿನ ರಸ, ಎಳನೀರು, ಮಜ್ಜಿಗೆ, ಚೀಸ್, ಪಾಸ್ತಾ, ಐಸ್‌ಕ್ರೀಂ — ಶೇ 12ರಿಂದ ಶೇ 5ಕ್ಕೆ ಇಳಿಕೆ.
ಹಲ್ಲುಜ್ಜುವ ಪುಡಿ ಶೇ 12ರಿಂದ ಶೇ 5ಕ್ಕೆ, ಟೂತ್‌ಪೇಸ್ಟ್ ಶೇ 18ರಿಂದ ಶೇ 12ಕ್ಕೆ, ಶಾಂಪೂ, ಎಣ್ಣೆ, ಸೋಪುಗಳು ಶೇ 18ರಿಂದ ಶೇ 5ಕ್ಕೆ ಇಳಿಕೆ. - ವಾಹನ ಮತ್ತು ಭಾಗಗಳು:
1200 ಸಿಸಿ ಗಿಂತ ಕಡಿಮೆ ಸಾಮರ್ಥ್ಯದ ಕಾರುಗಳು, 350 ಸಿಸಿ ಒಳಗಿನ ಬೈಕ್‌ಗಳು ಮತ್ತು ಬಿಡಿಭಾಗಗಳ ತೆರಿಗೆ ಶೇ 28ರಿಂದ ಶೇ 18ಕ್ಕೆ ಇಳಿಕೆ. - ಹೋಟೆಲ್ ಮತ್ತು ಮನರಂಜನೆ:
₹7,500 ಒಳಗಿನ ಹೋಟೆಲ್ ಕೊಠಡಿ ಬಾಡಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆ.
ಹೋಟೆಲ್ ಮತ್ತು ಮನರಂಜನಾ ಕ್ಷೇತ್ರದ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆ. - ಔಷಧಿ ಮತ್ತು ವೈದ್ಯಕೀಯ ಸಾಧನಗಳು:
ಕ್ಯಾನ್ಸರ್ ಔಷಧಿಗಳ ಮೇಲೆ ಜಿಎಸ್‌ಟಿ ರದ್ದು, ಇತರ ಔಷಧಿ ಮತ್ತು ವೈದ್ಯಕೀಯ ಉಪಕರಣಗಳು ಶೇ 12ರಿಂದ ಶೇ 5ಕ್ಕೆ ಇಳಿಕೆ.
ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆ ತೆರಿಗೆ ವಿನಾಯಿತಿ. - ಕೃಷಿ ಕ್ಷೇತ್ರ:
ರಸಗೊಬ್ಬರಗಳಿಗೆ ಬಳಸುವ ರಾಸಾಯನಿಕಗಳು (ಸಲ್‌ಫ್ಯೂರಿಕ್ ಆಯಸಿಡ್, ನೈಟ್ರಿಕ್ ಆಯಸಿಡ್, ಅಮೋನಿಯಾ) ಶೇ 18ರಿಂದ ಶೇ 5ಕ್ಕೆ ಇಳಿಕೆ. - ಜವಳಿ ಕ್ಷೇತ್ರ:
ಸಿಂಥೆಟಿಕ್ ಯಾರ್ನ್, ಕೈಮಗ್ಗದ ನಾರಿನ ನೂಲು, ಕರಕುಶಲ ವಸ್ತುಗಳ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆ. - ಇತರೆ ವಸ್ತುಗಳು:
ಸೌರಶಕ್ತಿ ಕುಕ್ಕರ್, ಪೇಪರ್ ಎರೇಸರ್, ಭೂಪಟ, ಚಾರ್ಟ್, ನೋಟ್‌ಬುಕ್, ಅಟ್ಲಾಸ್, ಛತ್ರಿ — ಶೇ 12ರಿಂದ ಶೇ 5ಕ್ಕೆ ಇಳಿಕೆ.
ದುಬಾರಿಯಾಗಲಿರುವ ವಸ್ತುಗಳು
- ವಿಲಾಸಿ ಮತ್ತು ಹಾನಿಕಾರಕ ವಸ್ತುಗಳು:
ತಂಬಾಕು, ಪಾನ್ ಮಸಾಲಾ, ವಿಲಾಸಿ ವಾಹನಗಳ ಮೇಲೆ ಶೇ 40 ತೆರಿಗೆ ಮುಂದುವರಿಕೆ. - ಇಲೆಕ್ಟ್ರಿಕ್ ವಾಹನಗಳು (EV):
₹20 ಲಕ್ಷ ಮೇಲ್ಪಟ್ಟ ಇವಿ ವಾಹನಗಳು ಶೇ 5ರಿಂದ ಶೇ 18ಕ್ಕೆ ಏರಿಕೆ.
₹40 ಲಕ್ಷ ಮೇಲ್ಪಟ್ಟ ಇವಿ ವಾಹನಗಳಿಗೆ ಶೇ 40 ತೆರಿಗೆ. - ಕಲ್ಲಿದ್ದಲು:
ಶೇ 5ರಿಂದ ಶೇ 18ಕ್ಕೆ ಏರಿಕೆ — ಇದು ವಿದ್ಯುತ್ ಶುಲ್ಕದ ಮೇಲೆ ಪರಿಣಾಮ ಬೀರುವ ಸಾಧ್ಯತೆ. - ಉಡುಪುಗಳು:
₹2,500 ಮೇಲ್ಪಟ್ಟ ಸಿದ್ಧ ಉಡುಪುಗಳು ಶೇ 12ರಿಂದ ಶೇ 18ಕ್ಕೆ ಏರಿಕೆ.
ಜಿಎಸ್‌ಟಿ ಬದಲಾವಣೆಗಳಿಂದ ಸರ್ಕಾರಕ್ಕೆ ಸುಮಾರು ₹50 ಸಾವಿರ ಕೋಟಿ ರೂಪಾಯಿ ಆದಾಯ ನಷ್ಟ ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಆದರೂ, ಮಧ್ಯಮ ವರ್ಗದ ಗ್ರಾಹಕರಿಗೆ ಹಾಗೂ ವ್ಯಾಪಾರ ವಲಯಕ್ಕೆ ಇದು ಅನುಕೂಲವಾಗಲಿದೆ ಎಂದು ಸಮಿತಿಯು ನಿರೀಕ್ಷಿಸಿದೆ.