Home ಆಟೋಟ ಸೋಲಿನ ಬಳಿಕ ಕಲಿಯುವ ಪಾಠಗಳಿವೆ!

ಸೋಲಿನ ಬಳಿಕ ಕಲಿಯುವ ಪಾಠಗಳಿವೆ!

0

ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತಿರುವ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಸೆಮಿಫೈನಲ್ ವರೆಗೂ ಕೂಡ ಭಾರತ ಅತಿ ಬಲಿಷ್ಠ ತಂಡ ಎನ್ನುತ್ತಿದ್ದರು ನೆನ್ನೆಯ ಪಂದ್ಯವನ್ನು ನೋಡಿದ ಬಳಿಕೆ ಟೀಕೆಗಳ ಸುರಿಮಳೆ ಗೈಯುತ್ತಿದ್ದಾರೆ. ಇನ್ನೇನು ಟೂರ್ನಿ ನಮ್ಮದೆ ಎನ್ನು ಹಂತಕ್ಕೆ ಬಂದು ಮುಗ್ಗರಿಸುತಿರುವುದು ಇದು ಮೂರನೆ ಬಾರಿ. ಟೂರ್ನಿ ಮೊದಲು ಮೂರು ಪಂದ್ಯಗಳಲ್ಲಿ ಆಕರ್ಷಕ ಪ್ರದರ್ಶನ ನೀಡಿದೆ ಪಾಕ್, ಬಾಂಗ್ಲಾ, ಜಿಂಬಾAಬ್ವೆ ತಂಡಗಳನ್ನು ಮಣಿಸಿ ಕೊನೆಯ ಹಂತಕ್ಕೆ ತಲುಪಿತ್ತು, ಭಾರತದ ನೆಟ್ ರನ್ ರೇಟ್ ನೋಡಿದರೆ +೧.೩೧೯ ರಷ್ಟಿದೆ ನ್ಯೂಲಿಲೆಂಡ್ ಮೊದಲ ಸ್ಥಾನದಲ್ಲಿದ್ದರೆ ಭಾರತ ರನ ರೇಟ್ ನಲ್ಲಿ ಎರಡೆ ಸ್ಥಾನದಲ್ಲಿದೆ. ಸೆಮಿಫೈನಲ್ ಹಂತಕ್ಕೆ ಬಂದು ಹೀಗೆ ಸೋಲಿನ್ನು ಕಂಡಿರುವುದು ಭಾರತ ತಂಡಕ್ಕೆ ಮತ್ತು ಬಿಸಿಸಿ ಗೆ ಎಚ್ಚರಿಕೆ ಸಂದೇಶವಾಗಿದೆ. ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡ ಬಿ.ಸಿ.ಸಿ.ಐ ಏಷ್ಯಾ ಕಪ್ ಮತ್ತು ವಿಶ್ವಕಪ್‌ನಲ್ಲಿ ಈ ರೀತಿಯ ಸೋಲುಗಳಿಂದ ಸೆಲೆಕ್ಷನ್ ಕಮಿಟಿ ದೊಡ್ಡ ಪಾಠ ಕಲಿಯಬೇಕಿದೆ. ವಯಸ್ಸಾದ ೩೦ ವರ್ಷಗಳಿಗೂ ಮೇಲ್ಪಟ್ಟ ಹೆಚ್ಚು ಆಟಗಾರರು ತಂಡದಲ್ಲಿ ಇದ್ದಾರೆ ಆದರೆ ಯುವ ಆಟಗಾರರಿಗೆ ಅವಕಾಶ ನೀಡುದೆ ಇರುವುದು ಕೂಡ ಇಂತಹ ಸೋಲುಗಳಿಗೆ ಕಾರಣಗಳಾಗುತ್ತವೆ.

ಪವರ್ ಪ್ಲೆನಲ್ಲಿ ನೀರಸ ಪ್ರದರ್ಶನ

ಭಾರತ ಟಾಸ್ ಸೋತದ್ದು ಕೂಡ ಪ್ರಮುಖ ಕಾರಣ ಮೊದಲ ಬ್ಯಾಟ್ ಮಾಡಲು ಬಂದ ರಾಹುಲ್ ಮತು ರೋಹತ್ ಶರ್ಮ ಇಬ್ಬರು ಕೂಡ ರನ್‌ಗಳಿಸಲು ಪರದಾಡಿದನ್ನು ನೋಡಬಹುದು ಟೂರ್ನಿಯ ಅಷ್ಟು ಪಂದ್ಯಗಳಲ್ಲಿ ಈ ಇಬ್ಬರು ಓಪನರ್‌ಗಳ ಕಳಪೆ ಪ್ರದರ್ಶನ ಎದ್ದು ಕಾಣುತ್ತಿz,ೆ ಸೆಮಿಸ್ ಪಂದ್ಯದಲ್ಲಿ ಮೊದಲು ಐದು ಓವರ್‌ಗಳಲ್ಲಿ ರನ್ ಬಾರದಿದ್ದದ್ದು ಮತು ೧೦ ಒರ‍್ಗಳಲ್ಲಿ ೬೦ ರನ್ನು ಕೂಡ ದಾಟದೆ ಇದ್ದದ್ದು ಕೂಡ ಸೋಲಿಗೆ ಕಾರಣವಾಗಿದೆ. ರಾಹುಲ್ ಟಿಟ್ವೆಂಟಿ ಪಂದ್ಯಗಳನ್ನು ಏಕದಿನ ಪಂದ್ಯಗಳನ್ನು ಆಡುವ ರೀತಿಯಲ್ಲ ಆಡಿರುವುದನ್ನು ಗಮನಿಸಬಹುದು ಇನ್ನು ರೋಹಿತ್ ಸಂಪೂರ್ಣ ವೈಫಲ್ಯವು ಸೋಲಿಗೆ ಕಾರಣ ಎನ್ನುಬಹುದು. ನಿಗದಿತ ೨೦ ಓರಗಳಲ್ಲಿ ಇನ್ನೂರಕ್ಕೂ ಹೆಚ್ಚು ರನ್‌ಗಳಿಸಬಹುದಿತ್ತು ಆದರೆ ಮೊದಲ ೧೦ ಓವರ್‌ಗಳಲ್ಲಿ ಓಪನ್‌ಗಳ ವೈಫಲ್ಯದಿಂದ ರನ್‌ಗಳಿಸಲು ಸಾದ್ಯವಾಗದ್ದದು ಕಾರಣವಾಗಿದೆ. ಇನ್ನು ಒನ್ಡೌನ್ ವಿರಾಟ್, ಸೂರ್ಯಕುಮಾರ್ ಮತು ಪಾಂಡ್ಯ ಇಡೀ ಟೂರ್ನಿಯಲ್ಲಿ ಅಧ್ಬುತ ಪ್ರದರ್ಶನ ನೀಡಿದ್ದಾರೆ. ಕೊನೆಯ ಎರಡು ಪಂದ್ಯಗಳಲ್ಲಿ ಕಾರ್ತಿಕ್‌ರವನ್ನು ಬದಲು ರಿಶಬ್ ಪಂತ್ ಆಡಿಸಿದ್ದು ಕೂಡ ಸರಿಯಾದ ಕ್ರಮವಲ್ಲ. ಕಾರ್ತಿಕ್ ಅವಕಾಶ ನೀಡಿದ್ದರೆ ಕೊನೆಯ ಪಂದ್ಯದಲ್ಲಿ ಆಡುವ ಭರವಸೆ ಇತ್ತು. ಈ ಬ್ಯಾಟಿಂಗ್ ಬೌಲಿಂಗ್ ಲೈನ್ ಆಪ್ ಸರಿಯಾದ ಕ್ರಮದಲ್ಲಿ ಇರಲಿಲ್ಲ ಇದಕ್ಕೆ ನೇರವಾಗಿ ರೋಹಿತ್ ಶರ್ಮ ಕಾರಣರಾಗುತ್ತಾರೆ. ಈ ಕಪ್ ಸೋತ ಬಳಿಕ ಧೋನಿ ನಾಯಕತ್ವ ನೆನಪಾಗುತ್ತದೆ ಏಕೆಂದರೆ ಅವರ ಚಾಣಕ್ಯತೆ ಮತು ಸಮಯಕ್ಕೆ ಸರಿಯಾದವರನ್ನು  ಆಡಿಸುವ ತಂತ್ರಗಾರಿಕಾ ಗೆಲುವುಗಳನ್ನು ನೆಪಿಸುತ್ತವೆ.

ಸ್ಪೀಡ್  ಬೌಲರ್, ಲೆಗ್ ಸ್ಪಿನರ್‌ಗಳ ಕೊರತೆ

ಜಸ್ಪಿçತ್ ಬೂಮ್ರಾ ಅನುಪಸ್ಥತಿಯಲ್ಲಿ ಶಮಿ ತಂಡ ಸೇರಿದರು ಕೂಡ ವಿಕೇಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ, ಇನ್ನೊಂದೆಡೆ ಭುವಿ, ಹರ್ಶದೀಪ್ ಅಕ್ಷರ್ ಪಟೇಲ್ ಸಮೇಸ್‌ನಲ್ಲಿ ಬೌಲ್ ಮಾಡಲು ಪರದಾಡಿ ರನ್ ನೀಡಿದ್ದು ಕೂಡ ಕಾಣಬಹುದು. ಮೊದಲ ಓವರ್ ನ್ಲಿ ಮೂರು ಬೌಂಡರಿ ಸಿಡಿಸಿದ ಬಟ್ಲರ್ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡದ್ದಲ್ಲದೆ ಅಲೆಕ್ಸ್ ಕೂಡ ಅದೇ ರೀತಿಯಲ್ಲಿ ಆಡಲು ಮುಂದಾಗಿ ಭಾರತದ ಎಲ್ಲಾ ಬೌಲರ್‌ಗಳ ಬೆವರಿಳಿಸಿದರು. ಇನ್ನು ಅಶ್ವಿನ್ ಮತ್ತು ಅಕ್ಷರ್ ಇಬ್ಬು ಕೂಡ ವಿಕೆಟ್ ಪಡೆಯದೆ ರನ್ ನೀಡಿದ್ದು ಕೂಡ ಸೋಲಿಗೆ ಕಾರಣ, ಚಹಲ್ ರಂತಹ ಲೆಗ್ ಸ್ಪಿನರ್ ಇಡೀ ಟೂನಿಯುದ್ದಕ್ಕು ಬೆಂಚು ಕಾಯಿಸಿದ್ದು ಅವಕಾಶವನ್ನೆ ನೀಡದೆ ಹೋದದ್ದು ಸೂಕ್ತವಾಗಿ ಬಳಸಿಕೊಳ್ಳಲಿಲ್ಲ. ಆಸ್ಟ್ರೇಲಿಯಾದಂತಹ ಪಿಚ್ ಗಳಲ್ಲಿ ಸ್ಪೀಡ್ ಬೌಲರ್‌ಗಳದ್ದೆ ದರ್ಬಾರು ಇಡಿ ಇತಿಹಾಸದಲ್ಲಿ ಭಾರತದ ಇಶಾಂತ್ ಶರ್ಮ, ಶ್ರೀಶಾಂತ್, ಉಮೇಶ್ ಯಾದವ್ ರಂತ ವೇಗಿಗಳು ಇಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಬ್ಬ ಯುವ ಆಟಗಾರ ಉಮ್ರಾನ್ ಮಾಲಿಕ್ ರನ್ನು ಆಯ್ಕೆ ಮಾಡಬಹುದಿತ್ತು ಏಕೆಂದರೆ ಡೊಮೆಸ್ಟಿಕ್ ಪಂದ್ಯಗಳಲ್ಲಿ ಮಿಂಚುತ್ತಿದ್ದಾರೆ ಮತ್ತು ಇವರ ವೇಗ ೧೫೭ ಕಿ.ಮಿ ಪಂದ್ಯಗಳಲ್ಲಿ ಆಡಿಸಿ ಒಳ್ಳೆಯ ಪ್ರದರ್ಶನ ಕಂಡಿದ್ದರೆ ಮುಂದುವರೆಸಬಹುದಿತಿ ಆದರೆ ಇಂತಹ ಪ್ರಯೋಗಳನ್ನು ಮಾಡದೆ ಹಿರಿಯ ಆಟಗಾಗರಿಗೆ ಮಣೆ ಹಾಕಿ ಕಪ್ ಕೈ ಚೆಲ್ಲಿದ್ದು ಕೋಟ್ಯಾಂಟರ ಅಭಿಮಾನಿಗಳಿಗೆ ಬೇಸರ ತಂದಿದೆ.

ರಮೇಶ್ ಹಾಸನ್ (ಪತ್ರಕರ್ತರು)

You cannot copy content of this page

Exit mobile version