ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ನಾನು ತಡೆಯದೆ ಹೋಗಿದ್ದರೆ, ಭಾರತ ಮತ್ತು ಪಾಕ್ ನಡುವೆ ಅಣುಯುದ್ಧ ನಡೆದು ಕೋಟ್ಯಂತರ ಪ್ರಾಣಗಳು ಹೋಗುತ್ತಿದ್ದವು: ಡೊನಾಲ್ಡ್ ಟ್ರಂಪ್

PPeepal Media

Peepal Media ವಿದೇಶ

• 2 ನಿಮಿಷದ ಓದು

ನಾನು ತಡೆಯದೆ ಹೋಗಿದ್ದರೆ, ಭಾರತ ಮತ್ತು ಪಾಕ್ ನಡುವೆ ಅಣುಯುದ್ಧ ನಡೆದು ಕೋಟ್ಯಂತರ ಪ್ರಾಣಗಳು ಹೋಗುತ್ತಿದ್ದವು: ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಅಣುಯುದ್ಧವನ್ನು ತಡೆದಿದ್ದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಆ ಎರಡು ದೇಶಗಳ ನಡುವಿನ ಯುದ್ಧವನ್ನು ತಡೆಯುವ ಮೂಲಕ ಕೋಟ್ಯಂತರ ಜನರ ಪ್ರಾಣವನ್ನು ಉಳಿಸಿರುವುದಾಗಿ ಅವರು ಹೇಳಿದ್ದಾರೆ.

ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಅವರು ಮಂಗಳವಾರ ಶ್ವೇತಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಳೆದ ಒಂದು ವರ್ಷದಲ್ಲಿ ತಮ್ಮ ಸರ್ಕಾರ ಸಾಧಿಸಿದ ವಿಜಯಗಳನ್ನು ಅವರು ಮಾಧ್ಯಮಗಳಿಗೆ ವಿವರಿಸಿದರು. ಒಂದು ಹಂತದಲ್ಲಿ ತಮ್ಮ ಅಂದಾಜಿನ ಪ್ರಕಾರ ಭಾರತ ಮತ್ತು ಪಾಕ್ ಅಣುಬಾಂಬ್ ದಾಳಿ ನಡೆಸಲು ಸಿದ್ಧವಾಗಿದ್ದವು ಎಂದು ಟ್ರಂಪ್ ಹೇಳಿದ್ದಾರೆ.

10 ತಿಂಗಳಲ್ಲಿ 8 ಯುದ್ಧಗಳನ್ನು ನಿಲ್ಲಿಸಿರುವುದಾಗಿ ಅವರು ತಿಳಿಸಿದರು. ಎಂದಿಗೂ ಮುಗಿಯದ ಯುದ್ಧಗಳನ್ನು ತಡೆದಿದ್ದೇನೆ; ಕಾಂಬೋಡಿಯಾ-ಥೈಲ್ಯಾಂಡ್ ನಡುವೆ ಹಲವು ವರ್ಷಗಳಿಂದ ಯುದ್ಧ ನಡೆಯುತ್ತಿದೆ, ಕೊಸೊವೊ-ಸೆರ್ಬಿಯಾ, ಕಾಂಗೋ-ರುವಾಂಡಾ, ಭಾರತ-ಪಾಕ್ ನಡುವಿನ ಗಲಾಟೆಗಳನ್ನು ಬಗೆಹರಿಸಿರುವುದಾಗಿ ಅವರು ಬಹಿರಂಗಪಡಿಸಿದರು.

ಭಾರತ ಮತ್ತು ಪಾಕ್ ದೇಶಗಳ ನಡುವೆ ತೀವ್ರ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು, 8 ಯುದ್ಧ ವಿಮಾನಗಳು ಪತನಗೊಂಡಿದ್ದವು, ಒಂದು ಹಂತದಲ್ಲಿ ಆ ಎರಡು ದೇಶಗಳ ನಡುವೆ ಅಣುಬಾಂಬ್ ದಾಳಿ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಟ್ರಂಪ್ ಹೇಳಿದರು.

ಶ್ವೇತಭವನದ ಪ್ರೆಸ್ ಬ್ರೀಫಿಂಗ್ ರೂಮ್‌ನಲ್ಲಿ ಸುಮಾರು 105 ನಿಮಿಷಗಳ ಕಾಲ ಟ್ರಂಪ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಆ ಸಮಯದಲ್ಲಿ ಅವರು ಪದೇ ಪದೇ ಇಂಡೋ-ಪಾಕ್ ಯುದ್ಧವನ್ನು ನಿಲ್ಲಿಸಿರುವುದಾಗಿ ಪ್ರಸ್ತಾಪಿಸಿದರು. ಕೋಟಿಗಟ್ಟಲೆ ಜನರ ಪ್ರಾಣವನ್ನು ನೀವು ಉಳಿಸಿದ್ದೀರಿ ಎಂದು ಪಾಕ್ ಪ್ರಧಾನಿ ತಮ್ಮನ್ನು ಹೊಗಳಿದ್ದಾಗಿ ಟ್ರಂಪ್ ಮತ್ತೊಮ್ಮೆ ಸ್ಮರಿಸಿದರು.

ನೊಬೆಲ್ ಪ್ರಶಸ್ತಿ ಗೆದ್ದರೆ ಅಮೆರಿಕದ ಸಾಮಾನ್ಯ ಜನರ ಜೀವನ ಹೇಗೆ ಬದಲಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಟ್ರಂಪ್ ಉತ್ತರಿಸುತ್ತಾ, ಈಗಾಗಲೇ 8 ಯುದ್ಧಗಳನ್ನು ನಿಲ್ಲಿಸುವ ಮೂಲಕ ಕೋಟ್ಯಂತರ ಜನರ ಪ್ರಾಣವನ್ನು ಉಳಿಸಿದ್ದೇನೆ ಎಂದು ಹೇಳಿದರು.

ಭಾರತ ಮತ್ತು ಪಾಕ್ ನಡುವೆ ಯುದ್ಧವನ್ನು ನಿಲ್ಲಿಸುವ ಮೂಲಕ ಸುಮಾರು 20 ದಶಲಕ್ಷ (2 ಕೋಟಿ) ಜನರ ಪ್ರಾಣವನ್ನು ಉಳಿಸಿದಂತಾಗಿದೆ ಎಂದರು. ಬಹುಶಃ ಅದಕ್ಕಿಂತ ಹೆಚ್ಚು ಜನರ ಪ್ರಾಣ ರಕ್ಷಿಸಿರಬಹುದು ಎಂದರು.

ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ಸಾಧಿಸಿದ ವಿಜಯಗಳ ಬಗ್ಗೆ ಶ್ವೇತಭವನ ಒಂದು ಹೇಳಿಕೆ ಬಿಡುಗಡೆ ಮಾಡಿದೆ. ‘365 ದಿನಗಳಲ್ಲಿ 365 ವಿಜಯಗಳು’ ಎಂದು ಟ್ರಂಪ್ ಅವರ ಸಾಧನೆಗಳ ಬಗ್ಗೆ ಪುಸ್ತಕವನ್ನು ಬಿಡುಗಡೆ ಮಾಡಿದರು.

ಭಾರತ ಮತ್ತು ಪಾಕ್ ನಡುವೆ ಶಾಂತಿ ಒಪ್ಪಂದವನ್ನು ಕುದುರಿಸಿರುವುದಾಗಿ ಆ ಸಾಧನೆಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇಲ್ಲಿಯವರೆಗೆ ಸುಮಾರು 90ಕ್ಕೂ ಹೆಚ್ಚು ಬಾರಿ ಇಂಡೋ-ಪಾಕ್ ಯುದ್ಧವನ್ನು ನಿಲ್ಲಿಸಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಅಮೆರಿಕದ ಜೊತೆಗೆ ಹಲವು ದೇಶಗಳ ಪ್ರವಾಸದ ಸಮಯದಲ್ಲಿ ಅವರು ಈ ವಿಷಯವನ್ನು ಹೇಳುತ್ತಲೇ ಇದ್ದಾರೆ.

ಭಾರತ ಮತ್ತು ಪಾಕ್ ನಡುವೆ ಕದನ ವಿರಾಮ ಒಪ್ಪಂದ ಕುದುರಿರುವುದಾಗಿ ಮೇ 10ರಂದು ಟ್ರಂಪ್ ಘೋಷಿಸಿದ್ದು ತಿಳಿದಿರುವ ವಿಚಾರವೇ ಆಗಿದೆ.

ಆದರೆ ಭಾರತ ಮಾತ್ರ ಟ್ರಂಪ್ ಅವರ ಹೇಳಿಕೆಗಳನ್ನು ಖಂಡಿಸುತ್ತಿದೆ. ಪಾಕ್ ಜೊತೆಗಿನ ಸಂಘರ್ಷದಲ್ಲಿ ಮೂರನೇ ದೇಶದ ಪಾತ್ರವಿಲ್ಲ ಎಂದು ಹೇಳುತ್ತಿದೆ. ತಾನು ಹಲವು ಯುದ್ಧಗಳನ್ನು ನಿಲ್ಲಿಸಿದ್ದೇನೆ, ಅದಕ್ಕಾಗಿ ತನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕಿತ್ತು ಎಂದು ಅವರು ಹೇಳಿದರು.

ಇಸ್ರೇಲ್-ಇರಾನ್, ಈಜಿಪ್ಟ್-ಇಥಿಯೋಪಿಯಾ, ಅರ್ಮೇನಿಯಾ-ಅಜರ್ಬೈಜಾನ್ ನಡುವಿನ ಯುದ್ಧಗಳನ್ನು ಕೂಡ ನಿಲ್ಲಿಸಿರುವುದಾಗಿ ಅವರು ಹೇಳಿದರು. ಪ್ರತಿ ಯುದ್ಧಕ್ಕೂ ಒಂದು ನೊಬೆಲ್ ಪ್ರಶಸ್ತಿ ಬರಬೇಕು, ಆದರೆ ಹಾಗೆ ಹೇಳಲಾಗದು ಎಂದರು.

ಕೋಟ್ಯಂತರ ಜನರ ಪ್ರಾಣವನ್ನು ಉಳಿಸಿರುವುದಾಗಿ ತಿಳಿಸಿದರು. ಪ್ರತಿ ದೇಶದ ನಾಯಕರು ತಮಗೆ ನೊಬೆಲ್ ನೀಡಬೇಕೆಂದು ತಮ್ಮ ಹೆಸರನ್ನು ನಾಮನಿರ್ದೇಶನ ಮಾಡಿರುವುದಾಗಿ ಟ್ರಂಪ್ ನೆನಪಿಸಿಕೊಂಡರು.

ನೊಬೆಲ್ ಪ್ರಶಸ್ತಿ ನೀಡುವ ನಾರ್ವೆ ಬಗ್ಗೆ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದರು. ಆ ಪ್ರಶಸ್ತಿಯ ಮೇಲೆ ನಾರ್ವೆಗೆ ಸಂಪೂರ್ಣ ನಿಯಂತ್ರಣವಿದೆ ಎಂದರು. ನೊಬೆಲ್ ಪ್ರಶಸ್ತಿಯ ಮೇಲೆ ನಾರ್ವೆಗೆ ಹಿಡಿತವಿಲ್ಲ ಎಂದು ಯಾರೂ ಊಹಿಸಬಾರದು ಎಂದರು. ಆ ಪ್ರಶಸ್ತಿಯನ್ನು ನಿಯಂತ್ರಿಸುವ ಶಕ್ತಿ ನಾರ್ವೆಗೆ ಇದೆ ಎಂದರು.

8 ಯುದ್ಧಗಳನ್ನು ನಿಲ್ಲಿಸಿದ್ದೇನೆ, ಬಹುಶಃ ಯಾವ ದೇಶದ ಅಧ್ಯಕ್ಷರೂ ಇಷ್ಟು ಯುದ್ಧಗಳನ್ನು ಇತ್ಯರ್ಥಪಡಿಸಿರಲಿಕ್ಕಿಲ್ಲ ಎಂದರು. ನಾನೇನೂ ನೊಬೆಲ್ ಪ್ರಶಸ್ತಿಗಾಗಿ ಇವನ್ನೆಲ್ಲಾ ಮಾಡಿಲ್ಲ, ಕೇವಲ ಜನರ ಪ್ರಾಣಗಳನ್ನು ಉಳಿಸಲು ಮಾಡಿದ್ದೇನೆ ಎಂದು ಹೇಳಿದರು. ಕೊನೆಯ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದೇನೆ, ರಷ್ಯಾ-ಉಕ್ರೇನ್ ಸಂಘರ್ಷವನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.

ತಮಗೆ ನೊಬೆಲ್ ಪ್ರಶಸ್ತಿ ನೀಡಿದ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ಒಬ್ಬ ಒಳ್ಳೆಯ ವ್ಯಕ್ತಿ ಎಂದು ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದರು.

PPeepal Media

Peepal Media

Peepal Media · ವಿದೇಶ ವಿಭಾಗ

ಸಂಬಂಧಿತ ಸುದ್ದಿಗಳು