Wednesday, July 16, 2025

ಸತ್ಯ | ನ್ಯಾಯ |ಧರ್ಮ

ಯಡವಟ್ಟಿನ ನಂತರ ಎಚ್ಚೆತ್ತ ಸರ್ಕಾರ ; 21 ಸಮಿತಿಗಳ ಆಯ್ಕೆ ವಾಪಸ್

ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಯಲ್ಲಿ ಸಾಲು ಸಾಲು ಯಡವಟ್ಟುಗಳನ್ನು ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗ ಎಚ್ಚೆತ್ತುಕೊಂಡಂತಿದೆ. ನಿನ್ನೆಯ ದಿನ ಇಲಾಖೆಗೆ ಅಡಿಯಲ್ಲಿ 21 ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷ ಸದಸ್ಯರ ಆಯ್ಕೆ ನಂತರ ಇಂದು ಆ ಆಯ್ಕೆಯನ್ನು ಇಲಾಖೆ ವಾಪಸ್ ಪಡೆದುಕೊಂಡಿದೆ.

ಪ್ರಮುಖವಾಗಿ 8 ತಿಂಗಳ ಹಿಂದೆಯೇ ಮೃತಪಟ್ಟಿರುವ ಪೂರ್ಣಚಂದ್ರ ತೇಜಸ್ವಿಯವರ ಹೆಂಡತಿ, ಸಾಹಿತಿ ಶ್ರೀಮತಿ ರಾಜೇಶ್ವರಿಯವರನ್ನು ಟ್ರಸ್ಟ್ ನ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದರ ಜೊತೆಗೆ ಪೂರ್ಣಚಂದ್ರ ತೇಜಸ್ವಿಯವರ ಹೆಸರಿನ ಪ್ರತಿಷ್ಠಾನಕ್ಕೆ ಚಿಂತಕರಾದ ನರೇಂದ್ರ ರೈ ದೇರ್ಲ ಅವರನ್ನು ಹೇಳದೇ ಕೇಳದೆ ಆಯ್ಕೆ ಮಾಡಿದ್ದು ಮತ್ತು ಆಯ್ಕೆ ನಂತರ ಅವರು ಆ ಜವಾಬ್ದಾರಿಯನ್ನು ನಿರಾಕರಿಸಿದ್ದು ಹೆಚ್ಚು ಚರ್ಚೆಯಾಗಿತ್ತು.

ಸಧ್ಯ ತೀವ್ರ ಮುಖಭಂಗವಾದ ನಂತರ ಸರ್ಕಾರ ಈ ಆಯ್ಕೆಯನ್ನು ವಾಪಸ್ ಪಡೆದುಕೊಂಡಿದೆ. ಸರ್ಕಾರ ಇಂತಹ ಸಮಿತಿಗಳಲ್ಲಿ ಯೋಗ್ಯರನ್ನು, ಅರ್ಹರನ್ನು ಕೂರಿಸಿದ್ದರೆ ಇಂತಹ ಪ್ರಮಾದ ಆಗುತ್ತಿರಲಿಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page