Home ಸಿನಿಮಾ ಯಶವಂತ್ ನಟನೆಯ ‘ವಿಕಿಪೀಡಿಯ’ ಆಗಸ್ಟ್ 26ಕ್ಕೆ ತೆರೆಗೆ

ಯಶವಂತ್ ನಟನೆಯ ‘ವಿಕಿಪೀಡಿಯ’ ಆಗಸ್ಟ್ 26ಕ್ಕೆ ತೆರೆಗೆ

0

ಸತ್ಯಂ ಶಿವಂ ಸುಂದರಂ, ಒಂದೂರಲ್ಲಿ ರಾಜರಾಣಿ, ಮಹಾದೇವಿ, ಶಾಂತಂಪಾಪಂ, ಯಾರೇ ನೀ‌ ಮೋಹಿನಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಯಶವಂತ್ ವಿಕಿಪೀಡಿಯ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ನೋಡುಗರ ಕುತೂಹಲ ಹೆಚ್ಚಿಸಿದೆ.

ಜಗತ್ತಿನಲ್ಲಿ ಎರಡು ರೀತಿ ಜನ ಇರ್ತಾರೆ. ಒಂದು ವಿಕಿಪೀಡಿಯದಲ್ಲಿ ಇಲ್ಲದೇ ಇರುವವರು. ಮತ್ತೊಬ್ರು ವಿಕಿಪೀಡಿಯಲ್ಲಿ ಇರುವವರು. ವಿಕಿಪೀಡಿಯದಲ್ಲಿ ಇಲ್ಲದೇ ಇರುವ ವಿಕಾಸ್ ತನ್ನ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ. ವಿಕಾಸ್ ಪಾತ್ರದಲ್ಲಿ ಯಶವಂತ್ ಅದ್ಭುತವಾಗಿ ನಟಿಸಿದ್ದು, ಇವರಿಗೆ ಜೋಡಿಯಾಗಿ ಆಶಿಕಾ ಸೋಮಶೇಖರ್ ಕಾಣಿಸಿಕೊಂಡಿದ್ದಾರೆ.

 ಟ್ರೇಲರ್ ಬಗ್ಗೆ ಮಾತನಾಡುವ ಯಶವಂತ್, ಪ್ರಪಂಚದಲ್ಲಿ ಎರಡು ರೀತಿ ಜನ ಅಲ್ಲ. ಮೂರು ರೀತಿ ಜನ ಇರ್ತಾರೆ. ಆ ಮೂರನೇಯವರೇ ನಾವು. ವಿಕಿಪೀಡಿಯದಲ್ಲಿ ತಮ್ಮ ಹೆಸರು ಬರಲು ಹೊರಟವರ ಗುಂಪಿಗೆ ನಾನು ನನ್ನ ತಂಡ ಸೇರುತ್ತದೆ ಅನಿಸುತ್ತದೆ. ಕಷ್ಟಪಟ್ಟು ಮೂರು ವರ್ಷ ಸಿ‌ನಿಮಾ ಮಾಡಿದ್ದೇವೆ. ಈ ತಿಂಗಳ 26ಕ್ಕೆ ತೆರೆಗೆ ಬರ್ತಿದೆ ಬೆಂಬಲ ನೀಡಿ ಎಂದರು.  ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ವಿಕಿಪೀಡಿಯ ಸಿನಿಮಾಗೆ ಸೋಮು ಹೊಯ್ಸಳ ಆಕ್ಷನ್ ಕಟ್ ಹೇಳಿದ್ದು, ಇದು ಇವರಿಗೆ ಚೊಚ್ಚಲ ಸಿನಿಮಾವಾಗಿದೆ. ಡ್ರಾಮಾ, ಎಮೋಷನಲ್, ಲವ್, ಸೆಂಟಿಮೆಂಟ್ ಎಲ್ಲದರ ಮಿಶ್ರಣ ವಿಕಿಪೀಡಿಯ ಚಿತ್ರಕ್ಕೆ ಚಿದಾನಂದ್ ಹೆಚ್ ಕೆ ಕ್ಯಾಮೆರಾ, ರಾಕೇಶ್ ಸಂಗೀತ, ರವಿಚಂದ್ರನ್ ಸಿ ಸಂಕಲನ ಸಿನಿಮಾಕ್ಕಿದೆ. ರಫ್ ಕಟ್ ಪ್ರೊಡಕ್ಷನ್ ನಡಿ ನಿರ್ಮಾಣವಾಗಿರುವ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಇದೇ ತಿಂಗಳ 26ಕ್ಕೆ ತೆರೆಗೆ ಬರ್ತಿದೆ.

You cannot copy content of this page

Exit mobile version