Home ಬ್ರೇಕಿಂಗ್ ಸುದ್ದಿ  ಸೈಟ್ ಜಟಾಪಟಿ ಪೊಲೀಸರ ವಿರುದ್ಧವೇ ಯಶ್ ತಾಯಿ ದೂರು

 ಸೈಟ್ ಜಟಾಪಟಿ ಪೊಲೀಸರ ವಿರುದ್ಧವೇ ಯಶ್ ತಾಯಿ ದೂರು

0

ಹಾಸನ : ಯಶ್ ತಾಯಿ ಪುಷ್ಪ ಸೈಟ್ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ  ಮತ್ತೆ ಎಸ್‌ಪಿ ಕಚೇರಿಗೆ ಆಗಮಿಸಿದ ಯಶ್ ತಾಯಿ ಪುಷ್ಪಾ ಅವರು ಪೊಲೀಸರು ಈ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ. ಹಾಗಾಗಿ ಫೆ. 11 ರಂದು ಕೋರ್ಟ್‌ನಲ್ಲಿ ಸ್ಟೇ ಸಿಕ್ಕಿದ ಹಿನ್ನೆಲೆಯಲ್ಲಿ ಎಸ್‌ಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದೇನೆ ಎಂದಿದ್ದಾರೆ.

ಹಾಸನ ಎಸ್‌ಪಿಗೆ ದೂರು ನೀಡಲು ಆಗಮಿಸಿದ ಪುಷ್ಪಾ ಅವರು,  ಘಟನೆ ಸಂಬಂಧಿಸಿದಂತೆ ತಕ್ಷಣ ದೂರು ನೀಡಿದ್ದೆ, ಆದರೂ ಪೊಲೀಸರು ಕ್ರಮ ವಹಿಸಲಿಲ್ಲ. ಬಡಾವಣೆ ಪೊಲೀಸರು ರೌಡಿಸಂ ಮತ್ತು ಭೂ ಮಾಫಿಯಾದವರಿಗೆ ಸಹಕಾರ ಮಾಡುತ್ತಿದ್ದಾರೆ. ನನ್ನ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ಒಡೆದಿದ್ದಾರೆ. ಈ ಸಂಬಂಧ ಇಲ್ಲಿಯವರೆಗೆ ಯಾವುದೇ ಕ್ರಮವನ್ನ ವಹಿಸಿಲ್ಲ ಎಂದು ಹೇಳಿದ್ದಾರೆ. ಕಾಂಪೌಂಡ್ ಒಡೆಯಲು ಬಂದಿದ್ದ ಜೆಸಿಬಿ, ಟಿಪ್ಲರ್ ಗಳನ್ನ ಇಲ್ಲಿಯವರೆಗೂ ಜಪ್ತಿ ಮಾಡಿಲ್ಲ. ಇದು ಅಸಂಜ್ಞೆಯ ಎಂದು ದೂರು ದಾಖಲಿಸಿಕೊಂಡಿದ್ದಾರೆ. ಸಂಜ್ಞೆಯ ಎಂಬುದಕ್ಕೆ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಇವೆ.  ಪೊಲೀಸರು ಭೂ ಮಾಫಿಯಾದವರ ಜೊತೆ ಶಾಮೀಲಾಗಿ ಹೀಗೆ ಮಾಡಿದ್ದಾರೆ
ಎಂದು ದೂರಿನಲ್ಲಿ ಉಲ್ಲೇಖಿಸಿ ಪೊಲೀಸರು ನ್ಯಾಯ ಕೊಡಿಸಲು ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.

ತಮ್ಮ ನಿವೇಶನ ತನಗೆ ಸೇರಿದ್ದೆಂದು ಕೋರ್ಟ್ ಆದೇಶ ಹಿಡಿದು ಬಂದಿದ್ದ ದೇವರಾಜು ಅವರು, 2025 ರ ಏಪ್ರಿಲ್ 16 ಆದೇಶದಂತೆ ಕಾಂಪೌಂಡ್ ತೆರವು ಮಾಡಿದ್ದಾರೆ. ಕೋರ್ಟ್ ಆದೇಶ ಇಲ್ಲದಿದ್ದರೂ ಸೈಟ್ ತಮ್ಮದೆಂದು ಅತಿಕ್ರಮಣ ಮಾಡಲಾಗಿದೆ. ಆದರೆ  ಕೋರ್ಟ್‌ ಏಪ್ರಿಲ್‌. 16 ರ ಆದೇಶಕ್ಕೆ ತಡೆ ನೀಡಿದೆ ಎಂದು ಆರೋಪಿಸಿದ್ದಾರೆ. ಇನ್ನೂ ಈ ಪ್ರಕರಣದ ಸಂಬಂಧ ನಡೆದ ಜಟಾಪಟಿಯ ವೀಡಿಯೋ ಹೊಂದಿದ ಪೆನ್ ಡ್ರೈವ್, ಪ್ರಕರಣದ ಆದೇಶ ಪ್ರತಿ ಹಾಗೂ ತಾವು ಸೈಟ್ ಖರೀದಿ ಮಾಡಿದ ಬಗ್ಗೆ ಕ್ರಯ ಪತ್ರಗಳ ದಾಖಲೆ ಜೊತೆ ಎಸ್‌ಪಿ ಕಚೇರಿಗೆ ಭೇಟಿ ನೀಡಿ   ಯಶ್ ತಾಯಿ ಪುಷ್ಪಾ ಅವರು ದೂರು ಸಲ್ಲಿಸಿದ್ದಾರೆ.

ಸೈಟ್ ಫೈಟ್: ಬಡಾವಣೆ ಠಾಣೆ ಇನ್ಸ್ ಪೆಕ್ಟರ್ ವಿರುದ್ಧವೇ ಎಸ್‌ಪಿ ದೂರು ಕೊಟ್ಟ ನಟ ಯಶ್ ತಾಯಿ

ಎಲ್ಲಾ ದಾಖಲೆಗಳನ್ನು ಕೊಟ್ಟು, ಅವರು  ತೊಂದರೆ ಕೊಡುತ್ತಿದ್ದರು. ಯಾಕೆ ಅವರನ್ನು ಅರೆಸ್ಟ್ ಯಾಕೆ ಮಾಡಿಲ್ಲ, ಯಾಕೆ ಮಾಡುತ್ತಿಲ್ಲ. ನಮ್ಮದೂ ಏನಾದರೂ ತಪ್ಪಿದ್ದರೆ ಪೇಪರ್ ನಲ್ಲಿ ಸೈಟ್ ಬರೆದುಕೊಡುತ್ತೇವೆ. ಏಕಾಏಕಿ ಬಂದು ನಮ್ಮ ಮನೆ ಕಾಂಪೌಂಡ್ ಒಡೆದುಹಾಕಿದ್ದಾರೆ. ನ್ಯಾಯಾಲಯದ ಆದೇಶ ಆಗೋವರೆಗೂ ಇರೋ ಮನೆಗೂ ತೊಂದರೆ ಮಾಡುತ್ತಿದ್ದಾರೆ. ಅದರೆ ಬಗ್ಗೆ ಯಾಕೆ ನೀವು ಕ್ರಮ ವಹಿಸಿಲ್ಲ ಎಂದು ಎಸ್‌ಪಿ ಅವರನ್ನು ಕೇಳಿದ್ದೇನೆ ಎಂದು ತಿಳಿಸಿದ್ದಾರೆ.

You cannot copy content of this page

Exit mobile version