ಬೆಚ್ಚಿಬಿದ್ದ ಬೆಂಗಳೂರು; ಯುವತಿ ಕೊಲೆಗೈದು 20 ತುಂಡು ಮಾಡಿ ಫ್ರಿಡ್ಜ್ ನಲ್ಲಿ ಇಟ್ಟ ಪಾತಕಿ

ದೆಹಲಿಯ ಶ್ರದ್ಧಾ ವಾಕರ್‌ ಹತ್ಯೆ ಮರೆಯುವ ಮುನ್ನವೇ ಅದೇ ಮಾದರಿಯ ಹತ್ಯೆ ಮತ್ತೊಮ್ಮೆ ಸ್ವಸ್ಥ ಸಮಾಜವನ್ನು ಬೆಚ್ಚಿಬೀಳಿಸಿದೆ. ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು 20 ತುಂಡು ಮಾಡಿ, ಫ್ರಿಡ್ಜ್‌ನಲ್ಲಿ ಶೇಖರಣೆ ಮಾಡಿಟ್ಟ ಆಘಾತಕಾರಿ ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ. ಕರ್ನಾಟಕದ ರಾಜಧಾನಿ ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ.

ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣ ಆಶ್ರಮದಲ್ಲಿ ಯುವಕನೊಬ್ಬ ಮೂರನೇ ಅಂತಸ್ತಿನಲ್ಲಿ ಯುವತಿಯನ್ನು ಕೊಲೆ ಮಾಡಿ, ನಂತರ ಆಕೆಯ ದೇಹವನ್ನು 20 ತುಂಡುಗಳನ್ನು ಮಾಡಿ ಫ್ರಿಡ್ಜ್‌ನಲ್ಲಿ ಶೇಖರಣೆ ಮಾಡಿಟ್ಟಿದ್ದಾನೆ. ಕೊಲೆಯಾದ ಯುವತಿ ಅಂತರರಾಜ್ಯದವರಾಗಿದ್ದಾರೆ ಎಂದು ತಿಳಿದುಬಂದಿದೆ.

15ರಿಂದ 20ದಿನಗಳ ಹಿಂದೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವೈಯಾಲಿಕಾವಲ್‌ ಪೊಲೀಸರು ಭೇಟಿ ನೀಡಿ, ತನಿಖೆ ನಡೆಸಿದ ನಂತರ ಪ್ರೀತಿ ವಿಚಾರಕ್ಕೆ ಯುವತಿಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲೇ ಇರುವ ಯುವತಿಯ ಸಂಬಂಧಿಕರು ಮನೆಗೆ ಬಂದು ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ಕೂಡಲೇ ಪೊಲೀಸನವರಿಗೆ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು