Home ರಾಜ್ಯ ಬಾಗಲಕೋಟೆ ಆನ್ಲೈನ್ ಬೆಟ್ಟಿಂಗ್‌ ಆಟ ಲಕ್ಷಾಂತರ ರೂ ಸಾಲ – ಯುವಕ ಆತ್ಮಹ*ತ್ಯೆ

ಆನ್ಲೈನ್ ಬೆಟ್ಟಿಂಗ್‌ ಆಟ ಲಕ್ಷಾಂತರ ರೂ ಸಾಲ – ಯುವಕ ಆತ್ಮಹ*ತ್ಯೆ

ಬಾಗಲಕೋಟೆ : ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ ಗೆ (Online betting) ಯುವಕರ ಸಾವನ್ನಪ್ಪುತ್ತಿರುವ  (Crime) ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಬಾಗಲಕೋಟೆ (Bagalakot) ಜಿಲ್ಲೆಯ ಜಮಖಂಡಿ ಪಟ್ಟಣದ ಚೌಡಯ್ಯ ನಗರದಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು 21 ವರ್ಷದ ಯುವಕ ರಮೇಶ್ ಬಂಟನೂರು ಎಂದು ಗುರುತಿಸಲಾಗಿದೆ. ಮೃತ ಯುವಕ ಜಮಖಂಡಿಯ ಖಾಸಗಿ ಕಾಲೇಜಿನಲ್ಲಿ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿ, ಆನ್ಲೈನ್ ಬೆಟ್ಟಿಂಗ್‌ ಆಟಗಳಲ್ಲಿ ಗಮನಹರಿಸಿ ಲಕ್ಷಾಂತರ ರೂ. ಸಾಲದಲ್ಲಿ ಸಿಲುಕಿ ಆತ್ಮಹತ್ಯೆಗೆ ತೊಡಗಿದ್ದನು.

ಈ ಹಿಂದೆ ಕೂಡ ರಮೇಶ್ ಮಾಡಿದ ಸಾಲವನ್ನು ತಂದೆ ಎರಡು ಬಾರಿ ಕಷ್ಟ ಪಟ್ಟು ತೀರಿಸಿದ್ದರು. ಜೊತೆಗೆ ಇನ್ಮುಂದೆ ಯಾವುದೇ ಕಾರಣಕ್ಕೂ ಮತ್ತೆ ಆನ್ಲೈನ್ ಬೆಟ್ಟಿಂಗ್‌ ಆಡಬಾರದು ಎಂದು ಮಗನಿಗೆ ಬುದ್ದಿವಾದ ಹೇಳಿದ್ದರು. ಆದರೂ ಕೂಡ ಅದನ್ನು ಕಿವಿಗೆ ಹಾಕಿಕೊಳ್ಳದೆ ಮತ್ತೆ ಬೆಟ್ಟಿಂಗ್ ಆಡಿದ್ದಾನೆ.

ಈ ವೇಳೆ ಮತ್ತೆ ಸಾಲ ಹೆಚ್ಚಾಗಿ ಮತ್ತು ವೈಯಕ್ತಿಕ ಒತ್ತಡದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸುತ್ತಿದ್ದಾನೆ.

You cannot copy content of this page

Exit mobile version