ಬೆಂಗಳೂರು: 2024 ರಲ್ಲಿ ಭಾರತದಲ್ಲಿ ಯೂಟ್ಯೂಬ್ ವೀಡಿಯೊ ಸ್ಟ್ರೀಮಿಂಗ್ ಸೇವೆಗಳು ಪ್ರಮುಖ ಮುಂಚೂಣಿಯಲ್ಲಿದೆ ಎಂದು ವೀಡಿಯೊ ಉದ್ಯಮದ ಸದ್ಯದ ಪರಿಸ್ಥಿತಿಯ ಬಗೆಗಿನ ವರದಿಯು ಬಹಿರಂಗಪಡಿಸಿದೆ.
ಬಿಸಿನೆಸ್ ಸ್ಟ್ಯಾಂಡರ್ಡ್‌ನ ವರದಿಯ ಪ್ರಕಾರ , ಯೂಟ್ಯೂಬ್ ಅತಿದೊಡ್ಡ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿ ಉಳಿದಿದೆ ಮತ್ತು ಭಾರತದಲ್ಲಿ 14,300 ಕೋಟಿ ಆದಾಯವನ್ನು ಗಳಿಸಿದೆ. ಇದರ ನಂತರ ನಂತರ ಮೆಟಾ, ಜಿಯೋಸ್ಟಾರ್ ಮತ್ತು ನೆಟ್‌ಫ್ಲಿಕ್ಸ್ ಗಳಿವೆ.
ಏಷ್ಯಾ ಪೆಸಿಫಿಕ್ ವೀಡಿಯೊ ಮತ್ತು ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯ ಕುರಿತು ಮೀಡಿಯಾ ಪಾರ್ಟ್‌ನರ್ಸ್ ಏಷ್ಯಾದ 2025 ರ ವರದಿಯು ಪ್ರಮುಖ ಬೆಳವಣಿಗೆಗಳು ಮತ್ತು ಉದ್ಯಮ ಕ್ಷೇತ್ರದ ಗಮನಾರ್ಹ ಬದಲಾವಣೆಗಳನ್ನು ಬಹಿರಂಗಪಡಿಸಿದೆ. 2027 ರ ವೇಳೆಗೆ ಸ್ಟ್ರೀಮಿಂಗ್ ವ್ಯವಸ್ಥೆ ಭಾರತ ಮತ್ತು ಚೀನಾಗಳಲ್ಲಿ ಇರುವ ಟಿವಿಯನ್ನು ಹಿಂದಿಕ್ಕಲಿದೆ. ಎಪಿಎಸಿ ವೀಡಿಯೊ ಉದ್ಯಮದ ಆದಾಯದಲ್ಲಿ ಸ್ಟ್ರೀಮಿಂಗ್ ನಿಂದ ಬರುವ ಆದಾಯದ ಪಾಲು 2024 ರಲ್ಲಿ ಇದ್ದ 44% ರಿಂದ 2029 ರ ವೇಳೆಗೆ 54% ಕ್ಕೆ ಏರಲಿದೆ ಎಂದು ಅದು ಹೇಳಿದೆ.
ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ , 2024 ರಲ್ಲಿ ಸಬ್‌ಸ್ಕ್ರಿಪ್ಶನ್-ಚಾಲಿತ ವೀಡಿಯೊ ಆನ್ ಡಿಮ್ಯಾಂಡ್ (SVoD) ಮಾರುಕಟ್ಟೆಯು ಸಹ 2024 ರಲ್ಲಿ ಪುಟಿದೆದ್ದಿತು, ಅಂದಾಜು 15 ಮಿಲಿಯನ್ ಚಂದಾದಾರರು ಬಂದಿದ್ದರು. ಭಾರತದಲ್ಲಿ ಒಟ್ಟು ಸ್ಟ್ರೀಮಿಂಗ್ ವೀಡಿಯೊ ಚಂದಾದಾರರ ಸಂಖ್ಯೆಯನ್ನು 125 ಮಿಲಿಯನ್‌ಗೆ ಏರಿದೆ.
ಆನ್‌ಲೈನ್ ವೀಡಿಯೊ ಮಾರುಕಟ್ಟೆಯು ಕಳೆದ ಕೆಲವು ವರ್ಷಗಳಿಂದ ಕ್ಷಿಪ್ರ ಏರಿಕೆಗೆ ಸಾಕ್ಷಿಯಾಗಿದೆ.
ಭಾರತವು ವೀಡಿಯೊ ಸ್ಟ್ರೀಮಿಂಗ್‌ಗೆ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಉದ್ಯಮದ ಆದಾಯದ ಬೆಳವಣಿಗೆಯನ್ನು 26% ರಷ್ಟು ಹೆಚ್ಚಿಸಿದೆ. ಭಾರತದ ನಂತರ ಚೀನಾ (23%), ಜಪಾನ್ (15%), ಆಸ್ಟ್ರೇಲಿಯಾ (11%), ಕೊರಿಯಾ (9%) ಮತ್ತು ಇಂಡೋನೇಷ್ಯಾ (5%) ದೇಶಗಳಿವೆ. ಒಟ್ಟಾರೆಯಾಗಿ, ಈ ಪ್ರಮುಖ ಮಾರುಕಟ್ಟೆಗಳು ಹೆಚ್ಚುತ್ತಿರುವ ವೀಡಿಯೊ ಉದ್ಯಮದ ಆದಾಯದ ಬೆಳವಣಿಗೆಯಲ್ಲಿ ಸರಿಸುಮಾರು 90% ನಷ್ಟು ಭಾಗವನ್ನು ಹೊಂದಿವೆ ಎಂದು MPA ವರದಿ ಬಹಿರಂಗಪಡಿಸಿದೆ.
ಏಷ್ಯಾ ಪೆಸಿಫಿಕ್‌ನಾದ್ಯಂತ ಹೆಚ್ಚುತ್ತಿರುವ ಬೆಳವಣಿಗೆಯಲ್ಲಿ ವಲಯದ 5.5 ಶತಕೋಟಿ ಅಮೇರಿಕನ್ ಡಾಲರ್‌ನ ಅರ್ಧದಷ್ಟು ಕೊಡುಗೆ ನೀಡುವ ಪ್ರೀಮಿಯಂ ವಿಡಿಯೋ ವಲಯದಲ್ಲಿ ಭಾರತವು ಬೆಳವಣಿಗೆಯನ್ನು ಮುನ್ನಡೆಸುತ್ತದೆ ಎಂದು ವರದಿ ಮುನ್ಸೂಚನೆ ನೀಡಿದೆ.
ಈ ಮಧ್ಯೆ, ಆನ್‌ಲೈನ್ ವೀಡಿಯೊವು ಭಾರತದಲ್ಲಿ ದೃಢವಾದ 16% CAGR ಬೆಳವಣಿಗೆಯನ್ನು ನೋಡುವ ನಿರೀಕ್ಷೆಯಿದೆ. ಇದು ಸಾಂಪ್ರದಾಯಿಕ ಟಿವಿಯ ವಿನಾಶವು ಹೆಚ್ಚು ದೂರವಿಲ್ಲ ಎಂಬುದನ್ನು ಸಾರುವಂತಿದೆ.