ನವದೆಹಲಿ : ಆನ್‌ಲೈನ್‌ನಲ್ಲಿ (Online) ಆಹಾರವನ್ನು (Food) ಆರ್ಡರ್ ಮಾಡುವ ಗ್ರಾಹಕರು ಈಗ ಮೊದಲಿಗಿಂತ ಹೆಚ್ಚು ಪಾವತಿಸಬೇಕಾಗುತ್ತದೆ. ಆನ್‌ಲೈನ್ ಆಹಾರ ವಿತರಣಾ ಕಂಪನಿ ಝೊಮ್ಯಾಟೋ (Zomato) ತನ್ನ ಸೇವೆಗಳಿಗೆ ಪ್ಲಾಟ್‌ಫಾರ್ಮ್ ಶುಲ್ಕವನ್ನು ಶೇಕಡಾ 20 ರಷ್ಟು ಹೆಚ್ಚಿಸಿದೆ.
ಝೋಮ್ಯಾಟೋ ಈಗ ಪ್ರತಿ ಆರ್ಡರ್‌ಗೆ ಪ್ಲಾಟ್‌ಫಾರ್ಮ್ ಶುಲ್ಕವಾಗಿ 12 ರೂ.ಗಳನ್ನು ವಿಧಿಸಲಿದೆ, ಇದು ಮೊದಲು 10 ರೂ.ಗಳಷ್ಟಿತ್ತು. ಹಬ್ಬದ ಋತು ಪ್ರಾರಂಭವಾಗುವ ಮೊದಲು ತನ್ನ ಪ್ರತಿಯೊಂದು ಆರ್ಡರ್ ಅನ್ನು ಹೆಚ್ಚು ಲಾಭದಾಯಕವಾಗಿಸುವ ಮತ್ತು ಕಂಪನಿಯ ಲಾಭವನ್ನು ಹೆಚ್ಚಿಸುವ ಗುರಿಯೊಂದಿಗೆ ಕಂಪನಿಯು ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿದೆ. ಝೊಮ್ಯಾಟೋ ವಿಧಿಸುವ ಪ್ಲಾಟ್‌ಫಾರ್ಮ್ ಶುಲ್ಕವು ಒಂದು ರೀತಿಯ ಸೇವಾ ಶುಲ್ಕವಾಗಿದ್ದು, ಇದನ್ನು ಕಂಪನಿಯ ಪ್ಲಾಟ್‌ಫಾರ್ಮ್ ಬಳಸುವುದಕ್ಕಾಗಿ ವಿಧಿಸಲಾಗುತ್ತದೆ. ಏಪ್ರಿಲ್ 2023 ರಿಂದ ಆಹಾರವನ್ನು ಆರ್ಡರ್ ಮಾಡಲು ಝೊಮ್ಯಾಟೊ ತನ್ನ ಬಳಕೆದಾರರಿಂದ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿತು. ಆ ಸಮಯದಲ್ಲಿ, ಝೊಮ್ಯಾಟೊ ತನ್ನ ಬಳಕೆದಾರರಿಂದ ಪ್ರತಿ ಆರ್ಡರ್‌ಗೆ ಪ್ಲಾಟ್‌ಫಾರ್ಮ್ ಶುಲ್ಕವಾಗಿ ಕೇವಲ 2 ರೂ.ಗಳನ್ನು ಮಾತ್ರ ವಿಧಿಸುತ್ತಿತ್ತು. ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ಕಂಪನಿಯು ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹಲವು ಪಟ್ಟು ಹೆಚ್ಚಿಸಿದೆ, ಇದರಿಂದಾಗಿ ಅದು ಈಗ 2 ರೂ.ಗಳಿಂದ 12 ರೂ.ಗಳಿಗೆ ಏರಿದೆ.
ಪ್ರತಿಸ್ಪರ್ಧಿ ಸ್ವಿಗ್ಗಿ ಕೂಡ ಇತ್ತೀಚೆಗೆ ತನ್ನ ಪ್ಲಾಟ್ ಫಾರ್ಮ್ ಶುಲ್ಕವನ್ನು 12 ರೂ.ಗಳಿಂದ 14 ರೂ.ಗಳಿಗೆ ಹೆಚ್ಚಿಸಿದ ಬೆನ್ನಲ್ಲೇ ಈ ಏರಿಕೆ ಮಾಡಲಾಗಿದೆ. ಆರ್ಡರ್‌ಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಯ್ದ ಪಿನ್ ಕೋಡ್‌ಗಳಲ್ಲಿ ಜಿಎಸ್‌ಟಿ ಸೇರಿದಂತೆ ಈ ಏರಿಕೆ ಕಂಡುಬಂದಿದೆ. ಈ ಹೆಚ್ಚಳ ತಾತ್ಕಾಲಿಕವಾಗಿದ್ದು, ಬೇಡಿಕೆ ಸ್ಥಿರವಾದ ನಂತರ ಅದನ್ನು ಹಿಂದಕ್ಕೆ ಪಡೆಯಬಹುದು ಎಂದು ಈ ಮೂಲಗಳು ತಿಳಿಸಿದೆ.