ಜಾತಿ ಪಟ್ಟಿಯಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ 14 ಜಾತಿಗಳನ್ನು ಕೈಬಿಡಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸ್ಪಷ್ಟ ಪಡಿಸಿದೆ. ಜಾತಿಯ ಮುಂದೆ ಇದ್ದಂತಹ ಕ್ರಿಶ್ಚಿಯನ್ ಪದ ಜಾತಿಗಣತಿ ಹಿನ್ನೆಲೆಯಲ್ಲಿ ತೀವ್ರ ವಿರೋಧಕ್ಕೆ ಕಾರಣವಾದ ನಂತರ ಆ ಜಾತಿಗಳನ್ನು ಕೈಬಿಡಲಾಗಿದೆ ಎಂದು ಆಯೋಗ ತಿಳಿಸಿದೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಹಿಂದುಳಿದ ವರ್ಗಗಳ ಆಯೋಗವು, ದಿನಾಂಕ:23-09-20250 ಪತ್ರದ ಮೂಲಕ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳಾದ ಛಲವಾದಿ ನಾರಾಯಣಸ್ವಾಮಿ (ವಿಧಾನ ಪರಿಷತ್ ವಿಪಕ್ಷ ನಾಯಕರು), ಎ.ನಾರಾಯಣಸ್ವಾಮಿ (ಕೇಂದ್ರದ ಮಾಜಿ ಸಚಿವರು) ಹಾಗೂ ವಿ. ಸುನಿಲ್ ಕುಮಾರ್(ಬಿ.ಜೆ.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕರು) ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಈ ಕೆಳಕಂಡ ಜಾತಿಗಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸೇರಿಸಬಾರದು ಎಂದು ಆಗ್ರಹಿಸಿರುತ್ತಾರೆ ಎಂದಿದೆ.
ಆದಿ ಆಂಧ್ರ ಕ್ರಿಶಿಯನ್
ಆದಿದ್ರಾವಿಡ ಕ್ರಿಶ್ಚಿಯನ್
ಬುಡುಗ ಜಂಗಮ ಕ್ರಿಶ್ಚಿಯನ್
ಲಮಾಣಿ ಕ್ರಿಶ್ಚಿಯನ್
ಮಾದಿಗ ಕ್ರಿಶ್ಚಿಯನ್
ಮಾಲಾ ಕ್ರಿಶ್ಚಿಯನ್
ವಡ ಕ್ರಿಶ್ಚಿಯನ್
ಆದಿ ಕರ್ನಾಟಕ ಕ್ರಿಶ್ಚಿಯನ್
ಬಂಜಾರ ಕ್ರಿಶ್ಚಿಯನ್
ಹೊಲೆಯ ಕ್ರಿಶ್ಚಿಯನ್
ಲಂಬಾಣಿ ಕ್ರಿಶ್ಚಿಯನ್
ಮಹಾ ಕ್ರಿಶ್ಚಿಯನ್
ಪರಯ ಕ್ರಿಶ್ಚಿಯನ್
ವಾಲ್ಮೀಕಿ ಕ್ರಿಶ್ಚಿಯನ್
ಮೇಲೆ ತೋರಿಸಲಾದ 14 ಜಾತಿಗಳ ಕುರಿತು ದಿನಾಂಕ: 23-09-2025 ರಂದು ನಡೆದ ಆಯೋಗದ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಿ ಪರಿಶೀಲಿಸಲಾಯಿತು.
ದಿನಾಂಕ:22-08-2025 ರಂದು ಪತ್ರಿಕೆಗಳಲ್ಲಿ ಸಲಹೆ ಕೋರಿ ಪುಕಟಿಸಿರುವ ಜಾತಿ ಪಟ್ಟಿಯಲ್ಲಿ ಈ ಜಾತಿಗಳ ಹೆಸರು ನಮೂದಾಗಿತ್ತು. ನಂತರ ಸ್ವೀಕರಿಸಿರುವ ಸಲಹೆ ಮತ್ತು ಚರ್ಚೆಯ ನಂತರ ಮೇಲಿನ ಜಾತಿಗಳು ಸೇರಿದಂತೆ ಹಲವು ಜಾತಿಗಳ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಕೈಬಿಟ್ಟು ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಆದಾಗ್ಯೂ, ಸಮೀಕ್ಷಾ ಕೈಪಿಡಿ-2025 ರ ಪುಟ ಸಂಖ್ಯೆ:57 ರಿಂದ 89 ರವರೆಗಿನ 1561 ಜಾತಿಗಳ ಪಟ್ಟಿಯಲ್ಲಿ ಹಾಗೂ EDCS ಸಂಸ್ಥೆಯು ಸಿದ್ಧಪಡಿಸಿರುವ ಸಮೀಕ್ಷಾ ಆಪ್‌ನಲ್ಲಿ ಅಳವಡಿಸಿರುವ ಜಾತಿ ಪಟ್ಟಿಯ Drop-down ನಲ್ಲಿಯೂ ಸಹ ಮೇಲ್ಕಂಡ 14 ಜಾತಿಗಳು ಸೇರಿರುವುದಿಲ್ಲವೆಂಬ ಅಂಶವನ್ನು ಖಚಿತಪಡಿಸಿಕೊಳ್ಳಲಾಗಿದೆ. ಮೇಲಿನ ಸೃಷ್ಟಿಕರಣವನ್ನು ಸಾರ್ವಜನಿಕರ ಮಾಹಿತಿಗಾಗಿ ಈ ಮೂಲಕ ಪಕಟಿಸಲಾಗಿದೆ ಎಂದಿದೆ.