Sunday, April 28, 2024

ಸತ್ಯ | ನ್ಯಾಯ |ಧರ್ಮ

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 17,79,239 ಮತದಾರರು: ಡಾ: ಕುಮಾರ

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಪ್ತಿಗೆ ಸಂಬಂಧಿಸಿದಂತೆ ಏಪ್ರಿಲ್ 4 ರಂದು ಪ್ರಕಟವಾಗಿರುವ ಅಂತಿಮ ಮತದಾರರ ಪಟ್ಟಿಯಂತೆ 17,79,239 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಮಳವಳ್ಳಿಯಲ್ಲಿ ಗಂಡು-126118 ಹೆಣ್ಣು-127487 , ತೃತೀಯ ಲಿಂಗಿಗಳು-23, ಒಟ್ಟು 253628 ಮತದಾರರಿದ್ದಾರೆ.

ಮದ್ದೂರಿನಲ್ಲಿ ಗಂಡು-104280, ಹೆಣ್ಣು-111443, ತೃತೀಯ ಲಿಂಗಿಗಳು-22, ಒಟ್ಟು 215745ಮತದಾರರಿದ್ದಾರೆ.

ಮೇಲುಕೋಟೆಯಲ್ಲಿ ಗಂಡು-100379, ಹೆಣ್ಣು-103010, ತೃತೀಯ ಲಿಂಗಿಗಳು-9, ಒಟ್ಟು 203398 ಮತದಾರರಿದ್ದಾರೆ.

ಮಂಡ್ಯದಲ್ಲಿ ಗಂಡು-111868, ಹೆಣ್ಣು-117759 ತೃತೀಯ ಲಿಂಗಿಗಳು- 36, ಒಟ್ಟು 229663 ಮತದಾರರಿದ್ದಾರೆ.

ಶ್ರೀರಂಗಪಟ್ಟಣ ಗಂಡು-106157, ಹೆಣ್ಣು-111427, ತೃತೀಯ ಲಿಂಗಿಗಳು- 44, ಒಟ್ಟು 217628 ಮತದಾರರಿದ್ದಾರೆ.

ನಾಗಮಂಗಲದಲ್ಲಿ ಗಂಡು-107760, ಹೆಣ್ಣು-108783, ತೃತೀಯ ಲಿಂಗಿಗಳು- 11, ಒಟ್ಟು 216554 ಮತದಾರರಿದ್ದಾರೆ.

ಕೃಷ್ಣರಾಜಪೇಟೆಯಲ್ಲಿ ಗಂಡು-111542,ಹೆಣ್ಣು-112284, ತೃತೀಯ ಲಿಂಗಿಗಳು- 11, ಒಟ್ಟು 223837 ಮತದಾರರಿದ್ದಾರೆ.

ಕೆ. ಆರ್ ನಗರದಲ್ಲಿ ಗಂಡು-108008, ಹೆಣ್ಣು-110766, ತೃತೀಯ ಲಿಂಗಿಗಳು- 12, ಒಟ್ಟು 218786 ಮತದಾರರಿದ್ದಾರೆ.

2076 ಮತಗಟ್ಟೆಗಳು

ಮತದಾನಕ್ಕಾಗಿ 2076 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಮಳವಳ್ಳಿ- 272, ಮದ್ದೂರು-254, ಮೇಲುಕೋಟೆ-264, ಮಂಡ್ಯ-262 ಮತ್ತು ಅಕ್ಸಿಲರಿ 2 ಒಟ್ಟು 264 , ಶ್ರೀರಂಗಪಟ್ಟಣ-249, ನಾಗಮಂಗಲ-260, ಕೃಷ್ಣರಾಜಪೇಟೆ-261, ಕೆ. ಆರ್ ನಗರ-252 ಮತಗಟ್ಟೆಗಳಿವೆ ಎಂದರು.

1037 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್
ಮಳವಳ್ಳಿ – 136, ಮದ್ದೂರು – 127, ಮೇಲುಕೋಟೆ – 132, ಮಂಡ್ಯ – 131, ಶ್ರೀರಂಗಪಟ್ಟಣ – 125, ನಾಗಮಂಗಲ – 130, ಕೃಷ್ಣರಾಜಪೇಟೆ – 130, ಕೆ. ಆರ್. ನಗರ – 126, ಒಟ್ಟು – 1037 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅನ್ನು ಅಳವಡಿಸಲಾಗುವುದು.

3644 ಮತದಾರರು ಮನೆಯಿಂದಲೇ ಮತದಾನ

85 ವರ್ಷ ಮೇಲ್ಪಟ್ಟ 2569 ಮತದಾರರು ಹಾಗೂ 1075 ವಿಕಲಚೇತನರು 12 ಡಿ ಮೂಲಕ ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ನೀಡಿರುತ್ತಾರೆ. ಇವರಿಗೆ ಮನೆಯಿಂದಲೇ ಮತದಾನ ಮಾಡಲು ಏಪ್ರಿಲ್ – 16,17,18 ರಂದು ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಚುನಾವಣೆಯಲ್ಲಿ ಯಾವುದೇ ಮತದಾರರಿಗೂ ಅಂಚೆ ಮತಪತ್ರದ ವ್ಯವಸ್ಥೆ ಇರುವುದಿಲ್ಲ ಎಂದರು.

ಮತದಾನ ದಿವಸದಂದು ವೇತನ ಸಹಿತ ರಜೆ:
ಏಪ್ರಿಲ್ 26 ರಂದು ಮತದಾನ ನಡೆಯಲಿದ್ದು, ಮತದಾನ ದಿನದಂದು ಮತ ಚಲಾಯಿಸಲು ಅನುಕೂಲವಾಗುವಂತೆ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕಾ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ – 1951 ರ ಕಲಂ 135 (ಬಿ ) ಅಡಿಯಲ್ಲಿ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲಾಗುವುದು ಎಂದರು.

ಮಾದರಿ ನೀತಿ ಜಾರಿಯಾದ ಮಾರ್ಚ್ 16 ರಿಂದ ಏಪ್ರಿಲ್ 07 ರವರೆಗೆ ರೂ. 1,05,38,990/- ನಗದು, ರೂ.1,04,76,699 ಮೌಲ್ಯದ ಮದ್ಯ, ರೂ. 2,17,040 ಮೌಲ್ಯದ ಡ್ರಗ್ಸ್ ಹಾಗೂ ರೂ. 40,000 ಮೌಲ್ಯದ 2000 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಚುನಾವಣೆಗೆ ಸಂಬಂಧಿಸಿದಂತೆ 5 ಸಹಾಯಕ ಚುನಾವಣಾಧಿಕಾರಿ, 7 ತಹಶೀಲ್ದಾರ್, 72 ಎಫ್.ಎಸ್.ಟಿ, 20 ವಿ.ಎಸ್.ಟಿ ತಂಡಗಳ ವಾಹನಗಳಿಗೆ ಒಟ್ಟು 104 ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಎಂದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಏಪ್ರಿಲ್ 26 ರಂದು ಪ್ರತಿ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಪ್ರಜಾಪ್ರಭುತ್ವದ ಮತದಾನ ಹಬ್ಬಕ್ಕೆ ಆಮಂತ್ರಣ ಎಂಬ ಆಹ್ವಾನ ಪ್ರತಿಗಳನ್ನು ಮುದ್ರಿಸಿ ಪ್ರತಿ ಕುಟುಂಬಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1824 ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಲು 2347 ಪಿಆರ್ ಒ ಗಳು, 2347 ಎ ಪಿ ಆರ್ ಒ ಗಳು, 4694 ಪಿಒಗಳು, 921 ಮೈಕ್ರೋ ವೀಕ್ಷಕರು, 56 ಹೋಮ್ ವೋಟಿಂಗ್ ಮೈಕ್ರೋ ವೀಕ್ಷಕರು ಒಟ್ಟು 10365 ಸಿಬ್ಬಂದಿಗಳನ್ನು ನೇಮಕ ಮಾಡಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು