Saturday, April 27, 2024

ಸತ್ಯ | ನ್ಯಾಯ |ಧರ್ಮ

ರೂ.2000 ನೋಟುಗಳ ವಿನಿಮಯದ ಗಡುವನ್ನು ವಿಸ್ತರಿಸುವ ಚಾನ್ಸ್‌ ಇದೆಯೇ?

ಇನ್ನೂ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳದವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸ್ವಲ್ಪ ರಿಲೀಫ್ ನೀಡಲು ಚಿಂತನೆ ನಡೆಸುತ್ತಿದೆಯಂತೆ.

2000 ನೋಟುಗಳ ವಿನಿಮಯದ ಗಡುವು ನಾಳೆ (ಸೆಪ್ಟೆಂಬರ್ 30) ಕೊನೆಗೊಳ್ಳಲಿದೆ. ಆದರೆ, ಇತ್ತೀಚಿನ ರಜಾ ದಿನಗಳು ಮತ್ತು ಹಬ್ಬ ಹರಿದಿನಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತಿಂಗಳ ಅಂತ್ಯದವರೆಗೆ 2000 ರೂಪಾಯಿ ನೋಟುಗಳ ವಿನಿಮಯದ ಗಡುವನ್ನು ವಿಸ್ತರಿಸಲು ಆರ್‌ಬಿಐ ಚಿಂತನೆ ನಡೆಸುತ್ತಿದೆ ಎಂದು ಪ್ರಮುಖ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ನಾಳೆ ಬೆಳಗ್ಗೆಯೊಳಗೆ ಈ ಕುರಿತು ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

ನಿಮ್ಮ ಬಳಿ ಇನ್ನೂ ರೂ. 2,000 ನೋಟುಗಳಿದ್ದರೆ ಈಗಲೇ ಬ್ಯಾಂಕಿಗೆ ಕೊಟ್ಟು ಮಾಡಿ ವಿನಿಮಯ ಮಾಡಿಕೊಳ್ಳಿ. ಗಡುವಿನೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಏಕೆಂದರೆ ಸೆಪ್ಟೆಂಬರ್ 30ರ ನಂತರ ಜನರ ರೂ. 2000 ನೋಟುಗಳ ಸ್ಥಿತಿ ಏನಾಗಬಹುದು ಎನ್ನುವುದರ ಬಗ್ಗೆ ಆರ್‌ಬಿಐ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಸೆಪ್ಟೆಂಬರ್ 30ರ ನಂತರವೂ ರೂ. 2,000 ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯಲಿವೆ ಎಂದು ಆರ್‌ಬಿಐ ಹೇಳಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಅಂದರೆ 2000 ರೂಪಾಯಿ ನೋಟುಗಳು ಅವಧಿ ಮುಗಿದ ನಂತರವೂ ಮಾನ್ಯವಾಗಿರುತ್ತವೆ. ಆದರೆ ಆ ನೋಟುಗಳು ವಹಿವಾಟಿಗೆ ಉಪಯೋಗವಾಗುವುದಿಲ್ಲ. ವಾಯಿದೆ ಮೀರಿದ ನಂತರ ಅವುಗಳನ್ನು ನೇರವಾಗಿ ಆರ್‌ಬಿಐನಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು. ಆದರೆ ಇದಕ್ಕಾಗಿ ನಿಗದಿತ ಗಡುವಿನೊಳಗೆ (ಸೆಪ್ಟೆಂಬರ್ 30) ಬ್ಯಾಂಕುಗಳಲ್ಲಿ ಏಕೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲಾಗಲಿಲ್ಲ ಎಂಬ ಬಗ್ಗೆ ವಿವರ ನೀಡಬೇಕು.

Related Articles

ಇತ್ತೀಚಿನ ಸುದ್ದಿಗಳು