ಹಾಸನ: ಸಕಲೇಶಪುರ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ 26 ವರ್ಷದ ಯುವ ಸಾಫ್ಟ್‌ವೇರ್ ಇಂಜಿನಿಯರ್ ಸಮರ್ಥ್ ಹೃದಯಾಘಾತದಿಂದ ಮೃತಪಟ್ಟ ಆಘಾತಕಾರಿ ಘಟನೆ ವರದಿಯಾಗಿದೆ.
ಸಮರ್ಥ್, ಕಾಫಿ ಬೆಳೆಗಾರರಾದ ಹೇಮಂತ್ ಮತ್ತು ಸರಳ ದಂಪತಿಯ ಪುತ್ರ, ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಕಳೆದ ಕೆಲವು ತಿಂಗಳುಗಳಿಂದ ‘ವರ್ಕ್ ಫ್ರಮ್ ಹೋಮ್’ ಸೌಲಭ್ಯದೊಂದಿಗೆ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ನಿನ್ನೆ ಸಂಜೆ, ಜಾವದವರೆಗೆ ಕೆಲಸ ಮಾಡಿದ ಸಮರ್ಥ್, ನೀರು ಕುಡಿದ ನಂತರ ಹಠಾತ್ ಕುಸಿದು ಬಿದ್ದಿದ್ದು, ತಕ್ಷಣವೇ ಕುಟುಂಬಸ್ಥರು ವೈದ್ಯರನ್ನು ಸಂಪರ್ಕಿಸಿದರು. ತಪಾಸಣೆ ನಡೆಸಿದ ವೈದ್ಯರು ಸಮರ್ಥ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಈ ಘಟನೆ ಕುಟುಂಬದವರಲ್ಲಿ ಆಘಾತ ಉಂಟುಮಾಡಿದ್ದು, ಅವರ ದುಃಖ ಆಳಕ್ಕೆ ತಲುಪಿದೆ. ಈ ಘಟನೆ 26 ವರ್ಷದ ಯುವಕನ ಆರೋಗ್ಯದ ಗಂಭೀರತೆಯನ್ನು ಅರಿಯುವ ಅಗತ್ಯತೆಯನ್ನು ಎತ್ತಿಹಿಡಿಯುತ್ತದೆ. ಸರ್ಕಾರಗಳು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸಣ್ಣ ವಯಸ್ಸಿಗೆ ಹೃದಯಘಾತಗಳು ಆಗುತ್ತಿರುವ ಕಾರಣಗಳನ್ನು ಮತ್ತು ಹೃದಯಾಘತಕ್ಕೆ ಗೊತ್ತಾಗುತ್ತಿರುವ ಜನತೆಯ ಸಮಸ್ಯೆಗಳನ್ನು ಕೂಡ ಪರಿಶೀಲಿಸಿ ಇಂತಹ ಆಘಾತಕಾರಿ ಘಟನೆಗಳನ್ನು ತನಿಖೆಗೆ ಒಳಪಡಿಸಿ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಿದೆ ಇಲ್ಲವಾದರೆ ಡಿಪಿ ಶುಗರ್ ಮತ್ತು ವಯಸ್ಸಾದ ಮೇಲೆ ಆಗುವ ಹೃದಯಾಘಾತಗಳು ಕಡಿಮೆ ವಯಸ್ಸಿನಲ್ಲಿ ಹೃದಯಾಘಾತಗಳು ಹೆಚ್ಚಾಗಿ ಹೆಚ್ಚು ಇನ್ನಷ್ಟು ಯುವಜನತೆಯನ್ನು ಕಳೆದುಕೊಳ್ಳಬೇಕಾಗುತ್ತದೆ.