ಮಂಡ್ಯ: ಡಿಸೆಂಬರ್ 20 ರಿಂದ 22 ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನಿಷೇಧದಿಂದ ಉಂಟಾದ ವಿವಾದ ತಣ್ಣಗಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಸಧ್ಯ ಮಾಂಸಾಹಾರವನ್ನೂ ಆಹಾರದ ಖಾದ್ಯಗಳ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಹಲವು ಸಂಘಟನೆಗಳು ಧರಣಿಗೆ ಮುಂದಾಗಿವೆ.
ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಮಾನ ಮನಸ್ಕ ವೇದಿಕೆ ಕಾರ್ಯಕರ್ತರು ಸಾಹಿತ್ಯ ಸಮ್ಮೇಳನದಲ್ಲಿ ಬಾಟೂಟ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ʼಕೋಸಂಬರಿ ಜೊತೆ ಎಗ್ ಬುರ್ಜಿ ಇರಲಿ, ಹಪ್ಪಳದ ಜೊತೆ ಕೊರಬಾಡು, ಕಬಾಬ್ ಇರಲಿ. ಜೊತೆಗೆ ಬೋಟಿ ಗೊಜ್ಜು ಇರಲಿʼ ಎಂದು ಘೋಷಣೆ ಕೂಗಿ ಧರಣಿ ನಡೆಸಿದ್ದಾರೆ. ʼನೀವು ಬಾಡೂಟ ಕೊಡದಿದ್ದರೆ ನಾವೇ ಬಾಡೂಟ ಹಾಕಿಸುತ್ತೇವೆʼ ಎಂದು ಎಚ್ಚರಿಕೆ ನೀಡಿದ್ದಾರೆ.
ಸಮ್ಮೇಳನದಲ್ಲಿ ಮಾಂಸಾಸಹಾರ ನಿಷೇಧ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಭುವನೇಶ್ವರಿ ಪೂಜಿಸುವ ಜಾಗದಲ್ಲಿ ಮಾಂಸಹಾರಕ್ಕೆ ಅವಕಾಶವಿಲ್ಲವೆಂದು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಹೇಳಿದ್ದಾರೆ.