ಆಸ್ಪತ್ರೆ ಮುಂಭಾಗ 3 ದಿನಗಳಿಂದ ಕಾರಿನಲ್ಲೇ ಇದ್ದ ಶವ!

ದಕ್ಷಿಣ ಕನ್ನಡ : ಆಸ್ಪತ್ರೆಯೊಂದರ ಮುಂದೆ ಪಾರ್ಕ್‌ ಮಾಡಿದ್ದ ಕಾರಿನಲ್ಲಿ 30 ವರ್ಷದ ಗೌರೀಶ್‌ ಎಂಬ ಯುವಕನ ಶವ ಪತ್ತೆಯಾಗಿರುವ ಘಟನೆ  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ದಲ್ಲಿ ನಡೆದಿದೆ.

ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದ ಗೌರೀಶ್‌ ಕಳೆದ 3 ದಿನಗಳಿಂದ  ಹಿಂದೆ ಗುರುವಾರ ಸಂಜೆ ಸುಳ್ಯದ ಸರ್ಕಾರಿ ಆಸ್ಪತ್ರೆಯ ಮುಂದೆ ತನ್ನ ಕಾರನ್ನು ಪಾರ್ಕ್‌ ಮಾಡಿದ್ದು, ಆ ಕಾರಿನಲ್ಲೇ ಮೃತ ಪಟ್ಟಿದ್ದಾನೆ . ಅವನ ಮೃತ ದೇಹ 3 ದಿನಗಳ ಕಾಲ ಕಾರಿನಲ್ಲಿಯೇ ಉಳಿದ ಕಾರಣ, ಹೆಣ ಕೊಳೆತು ವಾಸನೆ ಬರತೊಡಗಿತ್ತು. ಕಾರಿನ ಸಮೀಪದ ಆಸ್ಪತ್ರೆಯ ಬಳಿಯಿದ್ದವರು ಕಾರನ್ನು ನೋಡಿದಾಗ ಬಾತುಕೊಂಡಿರುವ ಮೃತದೇಹ ಪತ್ತೆಯಾಗಿದ್ದು ಅದನು ನೋಡಿದವರು ಸ್ಥಳೀಯ ಪೊಲೀಸ್‌ ಠಾಣೆಗೆ ವಿಷಯ ತಿಳಿಸಿದ್ದಾರೆ

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಲ್ಲಿನ ಪೊಲೀಸ್‌ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ವ್ಯಕ್ತಿ 3 ದಿನಗಳ ಹಿಂದೆಯೇ ಸತ್ತಿದ್ದಾನೆ. ಇವನ ಅತಿಯಾದ ಕುಡಿತದ ಕಾರಣದಿಂದಲೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ನೋಡಿ :🔸 ಹಿಂದಿ ಹೇರಿಕೆ ; ಕೇಂದ್ರ ಸರ್ಕಾರದಿಂದ ಹಿಂಬಾಗಿಲ ರಾಜಕಾರಣ

Related Articles

ಇತ್ತೀಚಿನ ಸುದ್ದಿಗಳು