Home ಬ್ರೇಕಿಂಗ್ ಸುದ್ದಿ AI ತಂತ್ರಜ್ಞಾನದ ಎಫೆಕ್ಟ್ಸ್ : ಗೂಗಲ್ ಸಂಸ್ಥೆಯಿಂದ 30,000 ಉದ್ಯೋಗಿಗಳು ಹೊರಬೀಳುವ ಸಾಧ್ಯತೆ

AI ತಂತ್ರಜ್ಞಾನದ ಎಫೆಕ್ಟ್ಸ್ : ಗೂಗಲ್ ಸಂಸ್ಥೆಯಿಂದ 30,000 ಉದ್ಯೋಗಿಗಳು ಹೊರಬೀಳುವ ಸಾಧ್ಯತೆ

0

ದಿ ಇನ್ಫರ್ಮೇಷನ್‌ ಮ್ಯಾಗಜಿನ್ ವರದಿಯ ಪ್ರಕಾರ, ಸರ್ಚ್ ದೈತ್ಯ Google ತನ್ನ 30,000 ಉದ್ಯೋಗಿಗಳನ್ನು ಹೊಂದಿರುವ ಜಾಹೀರಾತು ಮಾರಾಟ ಘಟಕದ ಹೆಚ್ಚಿನ ಭಾಗವನ್ನು ಮರುಸಂಘಟಿಸಲು ಮುಂದಾಗಿದೆ. ಇದು AI ತಂತ್ರಜ್ಞಾನವನ್ನು ಸಂಸ್ಥೆ ಬಹುತೇಕ ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಕಂಪನಿಯ ಇತ್ತೀಚಿನ ಬೆಳವಣಿಗೆಗಳಿಂದ ತಿಳಿದು ಬಂದಿದೆ.

ಈ ವರ್ಷದ ಆರಂಭದಲ್ಲಿ ಗೂಗಲ್ ಸಂಸ್ಥೆ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಕಂಪನಿಯ ಇತಿಹಾಸದಲ್ಲಿ ಅತಿದೊಡ್ಡ ಉದ್ಯೋಗ ಕಡಿತವಾಗಿದೆ. ವರದಿಯ ಪ್ರಕಾರ, ಜಾಹೀರಾತು ಮಾರಾಟ ಘಟಕದಲ್ಲಿನ ಹಲವು ಉದ್ಯೋಗಗಳನ್ನು ಅನಗತ್ಯಗೊಳಿಸಲಾಗುತ್ತಿದೆ. ಏಕೆಂದರೆ Google ಹೊಸ AI-ಆಧಾರಿತ ಪರಿಕರಗಳನ್ನು ಪರಿಚಯಿಸಿದೆ.

ಅದು ಗ್ರಾಹಕರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಉದ್ಯೋಗಿಗಳನ್ನು ಕಡಿತಗೊಳಿಸಿ, ಹೊಸ ಜಾಹೀರಾತುಗಳನ್ನು ಸ್ವಯಂಚಾಲಿತವಾಗಿ ಸೂಚಿಸಬಹುದು ಮತ್ತು ರಚಿಸಬಹುದಾಗಿದೆ. ವರದಿಯು ಡಿಜಿಟಲ್ ಜಾಹೀರಾತಿಗೆ ಸಂಬಂಧಿಸಿದ ಆದಾಯದ ಸ್ಟ್ರೀಮ್‌ಗಳ ಮೇಲೆ ಎಐಯ ರೂಪಾಂತರದ ಪರಿಣಾಮವನ್ನು ತೋರಿಸಿದೆ. ಈ ಕಾರ್ಯಗಳಲ್ಲಿ ಮಾನವ ಹಸ್ತಕ್ಷೇಪದ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂದು ವರದಿಯಾಗಿದೆ.

ದಿ ಇನ್ಫರ್ಮೇಷನ್ ವರದಿಯ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಲು Google ನಿರಾಕರಿಸಿದ್ದರೂ, ಅದರ ಜಾಹೀರಾತು ಮಾರಾಟ ವಿಭಾಗದಲ್ಲಿ ಪ್ರಮುಖ ಬದಲಾವಣೆಯಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

You cannot copy content of this page

Exit mobile version