ಬೆಂಗಳೂರು: ಇಂದು ಬೆಳಗ್ಗೆ 10:15ಕ್ಕೆ ಬಂಗಾರದ ಮನುಷ್ಯ ಚಿತ್ರದ ಹಾಡು ʼಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ…” ಎಂದು ಕರ್ನಾಟಕ ಬಜೆಟ್ ಭಾಷಣ (Karnataka Budget 2024) ಆರಂಭಿಸಿದ ಸಿಎಂ ಸಿದ್ದರಾಮಯ್ಯ ಅವರು ಸದನದಲ್ಲಿ ಬಿಜೆಪಿ ನಾಯಕರ ಗದ್ದಲ, ಘೋಷಣೆಗಳ ನಡುವೆಯೂ ಬಜೆಟ್ ಭಾಷಣ (budget speech)) ಮುಂದುವರೆಸಿದ್ದಾರೆ. ಈ ವರ್ಷದ ಬಜೆಟ್ ಗಾತ್ರ ₹ 3,71,383 ಕೋಟಿ.
ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ 15ನೇ ಬಜೆಟ್ ಭಾಷಣದಲ್ಲಿ, ತಮ್ಮ ಸರ್ಕಾರದ ಭರವಸೆಗಳನ್ನು ಟೀಕಿಸಿದ್ದಕ್ಕಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಮಹಿಳಾ ಶರಣೆ ಆಯ್ದಕ್ಕಿ ಲಕ್ಕಮ್ಮ ಅವರ ವಚನವನ್ನು ಉಲ್ಲೇಖಿಸಿದರು. “ಖಾತ್ರಿ ಯೋಜನೆಗಳ ಮೇಲೆ ನನಗೆ ನಂಬಿಕೆಯಿದೆ, ಕೇಂದ್ರವು ವಿಫಲವಾಗಿರುವುದನ್ನು ನಾವು ಮಾಡಿದ್ದೇವೆ,” ಎಂದು ಅವರು ಹೇಳಿದರು.
7.50 ಕೋಟಿ ವೆಚ್ಚದಲ್ಲಿ ಕೆಫೆ ಸಂಜೀವಿನಿ ಹೆಸರಿನ 50 ಮಹಿಳಾ ಕೆಫೆಗಳನ್ನು ಈ ವರ್ಷ ರಾಜ್ಯಾದ್ಯಂತ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕ್ಯಾಂಟೀನ್‌ಗಳು ಗ್ರಾಮೀಣ ಪ್ರದೇಶದ ಜನರ ಬೇಡಿಕೆ ಮತ್ತು ಪೂರೈಕೆಯ ಕೊರತೆಯನ್ನು ನೀಗಿಸುತ್ತದೆ, ಆರೋಗ್ಯಕರ ಮತ್ತು ರುಚಿಕರ ಆಹಾರ ಹಾಗೂ ಸಾಂಪ್ರದಾಯಿಕ ಸ್ಥಳೀಯ ಪಾಕಪದ್ಧತಿಯಲ್ಲಿ ಮಾಡಿದ ಆಹಾರವನ್ನು ಈ ಕೆಫೆಯಲ್ಲಿ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.