ಫಿಲಿಫೈನ್ಸ್‌ನಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪದ ಪರಿಣಾಮ ಹಲವಾರು ಸಾವುನೋವು ಉಂಟಾಗಿದೆ. ತಡರಾತ್ರಿ ಸಂಭವಿಸಿದ ಭೂಕಂಪದಲ್ಲಿ ಜನರಿಗೆ ಅನಾಹುತ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ಸಿಗದ ಹಿನ್ನೆಲೆಯಲ್ಲಿ ಹೆಚ್ಚು ಸಾವುನೋವುಗಳಾಗಿವೆ.
ಮಂಗಳವಾರ ರಾತ್ರಿ ಸ್ಥಳೀಯ ಸಮಯ ರಾತ್ರಿ 10 ಗಂಟೆ ಸುಮಾರಿಗೆ ಮಧ್ಯ ಫಿಲಿಪೈನ್ಸ್‌ನಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಪಲೊಂಪನ್‌ನ ಪಶ್ಚಿಮಕ್ಕೆ ಸಮುದ್ರದಲ್ಲಿ ಸುಮಾರು 10 ಕಿಲೋಮೀಟರ್ ಆಳದಲ್ಲಿ ಕೇಂದ್ರಬಿಂದುವಾಗಿತ್ತು. ಈ ಕಂಪನವು ವಿಸಾಯನ್ ದ್ವೀಪಗಳಾದ್ಯಂತ ಬಲವಾದ ಕಂಪನಕ್ಕೆ ಕಾರಣವಾಯಿತು. ತೀವ್ರ ಕಂಪನದಿಂದ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರು ಪರಿಣಾಮ ಬೀರಿದ್ದಾರೆ ಎಂದು ಅಂದಾಜಿಸಲಾಗಿದೆ.
ಸೆಬು ಮತ್ತು ಲೇಟ್ ದ್ವೀಪಗಳ ಉತ್ತರ ಭಾಗಗಳಲ್ಲಿ ಪ್ರಬಲವಾದ ಪರಿಣಾಮ ಕಂಡುಬಂದಿದೆ. ಮುನ್ನೆಚ್ಚರಿಕೆಯಾಗಿ, ಸ್ಥಳೀಯ ಅಧಿಕಾರಿಗಳು ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿದ್ದಾರೆ ಮತ್ತು ಜನರು ಜಾಗರೂಕರಾಗಿರಲು ಒತ್ತಾಯಿಸಿದ್ದಾರೆ.
ತೀವ್ರ ಭೂಕಂಪದ ಪರಿಣಾಮ ನೂರಾರು ಜನರು ಅಪಘಾತದ ಪರಿಣಾಮ ತೀವ್ರ ಗಾಯಗೊಂಡಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ 25 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.