ಪ್ರಮುಖ ಕೈಗಾರಿಕೋದ್ಯಮಿ ಪ್ರತಿಷ್ಠಿತ ವರ್ದಮಾನ್ ಗ್ರೂಪ್ ಮಾಲಿಕರಾದ ಶ್ರೀಪಾಲ್ ಓಸ್ವಾಲ್ ಅವರಿಗೆ 7 ಕೋಟಿ ರೂಪಾಯಿ ವಂಚಿಸಿದ ಆರೋಪಿ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಆನ್‌ಲೈನ್ ಮೂಲಕ ವಂಚಿಸಲಾದ ಆರೋಪಿಗಳಿಂದ ಈಗಾಗಲೇ 5.25 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಲೂಧಿಯಾನ ಪೊಲೀಸ್ ಆಯುಕ್ತ ಕುಲದೀಪ್ ಸಿಂಗ್ ಚಾಹಲ್ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿ ಹೆಚ್ಚುವರಿ ಗ್ಯಾಂಗ್ ಸದಸ್ಯರನ್ನು ಗುರುತಿಸಿದ್ದಾರೆ. ಎಲ್ಲರೂ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಬಂದವರು ಮತ್ತು ಅವರನ್ನು ಬಂಧಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಂಚಕರು ವರ್ಧಮಾನ್ ಗ್ರೂಪ್ ಮಾಲೀಕ ಓಸ್ವಾಲ್ ಅವರ ಬ್ಯಾಂಕ್ ಖಾತೆಯಿಂದ 7 ಕೋಟಿ ರೂ ಕೊಳ್ಳೆ ಹೊಡೆದಿದ್ದರು.
ಇಡೀ ಪ್ರಕರಣ ಒಂದು ಸಿನಿಮೀಯ ಮಾದರಿಯಲ್ಲಿ ನಡೆದಿದೆ. ಬಂಧಿತ ವ್ಯಕ್ತಿಗಳಲ್ಲಿ ಒಬ್ಬರು ಸಿಬಿಐ ಅಧಿಕಾರಿಯಂತೆ ನಟಿಸಿದ್ದಾರೆ. ಓಸ್ವಾಲ್ ಅವರ ಮೇಲೆ ನಕಲಿ ಬಂಧನ ವಾರಂಟ್ ಅನ್ನು ಅವರ ಮುಂದೆ ಇಟ್ಟಿದ್ದಾರೆ ಮತ್ತು ಓಸ್ವಾಲ್ ಅವರು ಅದನ್ನು ಪಾಲಿಸದಿದ್ದರೆ ಡಿಜಿಟಲ್ ಬಂಧನಕ್ಕೆ ಬೆದರಿಕೆ ಹಾಕಿದ್ದರು.
ಓಸ್ವಾಲ್ ಅವರ ದೂರಿನ ಮೇರೆಗೆ ಸೈಬರ್ ಸೆಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು 48 ಗಂಟೆಗಳಲ್ಲಿ ಶಂಕಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಇಬ್ಬರನ್ನು ಅಸ್ಸಾಂನ ಗುವಾಹಟಿ ಮೂಲದ ಅಟಾನೂ ಚೌಧರಿ ಮತ್ತು ಆನಂದ್ ಕುಮಾರ್ ಚೌಧರಿ ಎಂದು ಗುರುತಿಸಲಾಗಿದೆ.
ಈ ಘಟನೆಯ ಹಿಂದೆ ಒಂದು ವಾರದೊಳಗೆ ಈ ಪ್ರದೇಶದಲ್ಲಿ ವರದಿಯಾದ ಸೈಬರ್ ವಂಚನೆಯ ಎರಡನೇ ಪ್ರಮುಖ ಪ್ರಕರಣವಾಗಿದೆ. ಈ ಹಿಂದೆ, ಸ್ಥಳೀಯ ಕೈಗಾರಿಕೋದ್ಯಮಿ ರಜನೀಶ್ ಅಹುಜಾ ಅವರಿಗೆ ಇದೇ ರೀತಿಯಾಗಿ ಆನ್‌ಲೈನ ಸುಲಿಗೆ ಪಾವತಿಗೆ ಸಂಬಂಧಿಸಿದಂತೆ ಇದೇ ರೀತಿಯ ನಕಲಿ ಬಂಧನ ವಾರಂಟ್ ಮೂಲಕ ಬೆದರಿಕೆ ಹಾಕಿ 1.01 ಕೋಟಿ ರೂಪಾಯಿ ವಂಚಿಸಲಾಗಿದೆ.