ಗೋವಾ: ಜಲ್ ಜೀವನ್ ಮಿಷನ್ ಅಡಿಯಲ್ಲಿ 7 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗೋವಾದಲ್ಲಿ ʼಹರ್ ಘರ್ ಜಲ್ ಉತ್ಸವ್ʼ ಕುರಿತು ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಇಲ್ಲಿಗೆ 7 ದಶಕಗಳು ಕಳೆದರು ದೇಶದಲ್ಲಿ ಕೇವಲ 3 ಕೋಟಿ ಗ್ರಾಮೀಣ ಕುಟುಂಬಗಳು ಪೈಪ್‌ಲೈನ್ ನೀರಿನ ವ್ಯವಸ್ಥೆ ಹೊಂದಿದ್ದವು, ನಮ್ಮ ಸರ್ಕಾರವು ಕೇವಲ 3 ವರ್ಷಗಳಲ್ಲಿ 7 ಕೋಟಿ ಮನೆಗಳಿಗೆ ನೀರಿನ ಸೌಲಭ್ಯ ಒದಗಿಸಿರುವುದು ಸಾಮಾನ್ಯ ಸಾಧನೆಯಲ್ಲ ಎಂದರು.