ಗಾಜಾ ಮೇಲಿನ ಇಸ್ರೇಲ್ ದಾಳಿ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಶುಕ್ರವಾರ ಗಾಜಾ ನಗರದಲ್ಲಿ ನಡೆದ ಹಿಂಸಾತ್ಮಕ ಘಟನೆಯಲ್ಲಿ 70 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದರು.
ಇಸ್ರೇಲಿ ಪಡೆಗಳು ಯೋಜಿತ ಹತ್ಯಾಕಾಂಡ ನಡೆಸಿವೆ ಎಂದು ಹಮಾಸ್ ಅಧಿಕಾರಿಗಳು ಹೇಳಿದ್ದಾರೆ. ಇಸ್ರೇಲಿ ಪಡೆಗಳು ಪೂರ್ವ ಗಾಜಾ ನಗರ, ಪಶ್ಚಿಮ ಮತ್ತು ದಕ್ಷಿಣ ನೆರೆಹೊರೆಗಳಲ್ಲಿ ಗುಂಡು ಹಾರಿಸಿದವು ಎಂದು ಅವರು ಹೇಳಿದರು. ಹಮಾಸ್ ಸರ್ಕಾರಿ ಮಾಧ್ಯಮ ಕಚೇರಿಯ ಮಹಾನಿರ್ದೇಶಕ ಇಸ್ಮಾಯಿಲ್ ಅಲ್ ತೌಬ್ತಾ ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ.