Friday, June 21, 2024

ಸತ್ಯ | ನ್ಯಾಯ |ಧರ್ಮ

ಟಿಕೆಟ್‌ ವಂಚನೆ ಪ್ರಕರಣ: ಮತ್ತೆ ಬೆಳಕಿಗೆ ಶ್ರುತಿ ತುಂಬ್ರಿಯ ಸರ್ವೇ ಹಗರಣ

ಬೆಂಗಳೂರು: ಚೈತ್ರಾ ಕುಂದಾಪುರ ನೇತ್ರತ್ವದ ಟಿಕೆಟ್‌ ಹಗರಣವು ದಿನಕ್ಕೊಂದು ರೆಕ್ಕೆ-ಪುಕ್ಕ ಬೆಳೆಸಿಕೊಳ್ಳುತ್ತಿದ್ದು ಒಬ್ಬೊಬ್ಬರನ್ನೇ ತನ್ನ ಸೆಳವಿನೊಳಗೆ ಎಳೆದುಕೊಳ್ಳತೊಡಗಿದೆ.

ಇಂದು ಬೆಳಗ್ಗೆ ಸೋಪಿನ ನೊರೆ ಬಾಯಿಗೆ ಹಚ್ಚಿಕೊಂಡು ಫಿಟ್ಸ್‌ ಪ್ರಹಸನ ಮುಗಿದ ನಂತರ ಈಗ ಮತ್ತೊಂದು ಪ್ರಕರಣ ಹೊರಬಿದ್ದಿದೆ. ಕೆಲವು ತಿಂಗಳುಗಳ ಹಿಂದೆ ಅಭ್ಯರ್ಥಿಗಳ ಪರ ಸರ್ವೇ ಮಾಡಿಸಿಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆಂದು ಬಿಜೆಪಿ ವಲಯದಲ್ಲೇ ಜಗಳ ನಡೆದು ಮುಗಿದು ಹೋದ ಪ್ರಕರಣ ಈಗ ಮತ್ತೆ ಜೀವ ತಳೆದು ನಿಂತಿದೆ.

ಈ ವಿಷಯದಲ್ಲಿ ಗೋವಿಂದ ಬಾಬು ಪೂಜಾರಿಯವರಿಗೂ ವಂಚನೆ ಎಸಗಿರುವುದು ಈಗ ಬೆಳಕಿಗೆ ಬಂದಿದೆ. ಶ್ರುತಿ ತುಂಬ್ರಿ ಎನ್ನುವ ಮಹಿಳೆಯು ಬಿಜೆಪಿಗೆ ಸರ್ವೆ ಮಾಡಿ ಕೊಡುವ ಸಂಸ್ಥೆಯ ಬಳಿ ನಿಮಗೂ ನಿಮ್ಮ ಪರವಾಗಿ ಬರುವಂತೆ ಸರ್ವೇ ಮಾಡಿಸಿಕೊಡುತ್ತೇನೆ ಎಂದು ಹಣ ಕೇಳಿರುವುದು ತನಿಖೆಯ ವೇಳೆ ತಿಳಿದುಬಂದಿದೆ.

ಈ ಶ್ರುತಿ ತುಂಬ್ರಿ ಹಾಗೂ ಚೈತ್ರಾ ಆತ್ಮೀಯ ಗೆಳೆಯರಾಗಿದ್ದು ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡತೊಡಗಿವೆ. ಸದರಿ ಶ್ರುತಿಯು ಈ ಹಿಂದೆ ಬಿಜೆಪಿಯ ಐಟಿ ಸೆಲ್ಲಿನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.

ಈಕೆಯು ಪಕ್ಷದ ಕೇಂದ್ರ ನಾಯಕರು ನಮ್ಮ ಸರ್ವೆ ನೋಡುತ್ತಾರೆ. ಬಿಜೆಪಿ ಹೈಕಮಾಂಡ್‌ ನಾಯಕರು ಇರ್ತಾರೆ ಎಂದಿದ್ದ ಶ್ರುತಿ. ಸರ್ವೆಗಾಗಿ ಮುಂಗಡವಾಗಿ ಮೂರು ಲಕ್ಷ ಹಣ ಪಡೆದಿದ್ದ ಶ್ರುತಿ. ಸರ್ವೆ ಟೀಂನಲ್ಲಿ ಕೆಲವ್ರನ್ನು ಹೈಜಾಕ್‌ ಮಾಡಿದ್ದೇನೆ. ಗೋವಿಂದಬಾಬು ಪರ ಸರ್ವೆ ಬರುವಂತೆ ಮಾಡ್ತೇನೆ ಎಂದಿದ್ದಳು.

ಮತ್ತು ಹಾಗೆ ಹೇಳುವ ಮೂಲಕ ಹಣಕಾಸಿನ ಡೀಲ್‌ ಕೂಡಾ ಮಾಡಿಕೊಂಡಿರುವುದು ಮತ್ತು ಗೋವಿಂದ ಬಾಬು ಪೂಜಾರಿಯ ಕಡೆಯವರ ಬಳಿ ಮೂರು ಲಕ್ಷ ರೂಪಾಯಿಗಳ ಅಡ್ವಾನ್ಸ್‌ ಕೇಳುತ್ತಿರುವುದನ್ನು ಈಗ ಮತ್ತೊಮ್ಮೆ ವೈರಲ್‌ ಆಗಿರುವ ಆಡಿಯೋದಲ್ಲಿ ಕೇಳಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು