Wednesday, October 23, 2024

ಸತ್ಯ | ನ್ಯಾಯ |ಧರ್ಮ

ಉಮರ್ ಖಾಲಿದ್ ಬಿಡುಗಡೆಗಾಗಿ ಆಗ್ರಹಿಸಿ ಬೆಂಗಳೂರಿಗರಿಂದ ಇಮೇಲ್ ಅಭಿಯಾನ

ರಾಜಕೀಯ ಕಾರ್ಯಕರ್ತ ಉಮರ್ ಖಾಲಿದ್ ಜೈಲುವಾಸದ ನಾಲ್ಕು ವರ್ಷಗಳ ನಂತರ, ದೇಶದಾದ್ಯಂತದ ಕಾರ್ಯಕರ್ತರ ಗುಂಪು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಮತ್ತು ಭಾರತದ ರಾಷ್ಟ್ರಪತಿಗಳನ್ನು ಉದ್ದೇಶಿಸಿ ಇಮೇಲ್ ಅಭಿಯಾನವನ್ನು ಪ್ರಾರಂಭಿಸಿದೆ.

ಅನೇಕ ಬೆಂಗಳೂರಿಗರು ಈ ಇಮೇಲ್‌ಗಳನ್ನು ಕಳುಹಿಸಿದ್ದಾರೆ.

ಖಾಲಿದ್ ಅವರ ಸಕಾಲಿಕ ಬಿಡುಗಡೆಗಾಗಿ ಜಾಮೀನು ಅರ್ಜಿಯ ತುರ್ತು ವಿಚಾರಣೆ, ಖಾಲಿದ್ ವಿರುದ್ಧದ ಆರೋಪಗಳನ್ನು ಮರು ಮೌಲ್ಯಮಾಪನ ಮಾಡುವುದು ಮತ್ತು 2020ರ ದೆಹಲಿ ಗಲಭೆಯ ಘಟನೆಗಳ ಬಗ್ಗೆ ಪಕ್ಷಪಾತವಿಲ್ಲದ ತನಿಖೆ ನಡೆಸುವಂತೆ ಆಗ್ರಹಿಸಿ ಈ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ಯುಎಪಿಎಯಂತಹ ಕಾನೂನುಗಳ ಮರುಮೌಲ್ಯಮಾಪನಕ್ಕೂ ಈ ಅಭಿಯಾನದಲ್ಲಿ ಆಗ್ರಹಿಸಲಾಗಿದೆ.

ಸಂಘಟಕರಲ್ಲಿ ಒಬ್ಬರಾದ, ಥಾಣೆಯ ವಿದ್ಯಾರ್ಥಿ ಕಾರ್ಯಕರ್ತ ಒಸಾಮಾ ರಾವಲ್, “ಯಾವುದೇ ಆಂದೋಲನದಲ್ಲಿ ಜನರನ್ನು ಸಂಘಟಿಸುವುದು ಬಹಳ ಮುಖ್ಯ” ಎಂದು ಹೇಳುತ್ತಾರೆ. ಒಂದು ತಿಂಗಳೊಳಗೆ 1 ಲಕ್ಷ ಇಮೇಲ್‌ಗಳನ್ನು ಕಳುಹಿಸುವ ಗುರಿಯನ್ನು ತಂಡ ಹೊಂದಿದೆ. ಸಿಜೆಐ ಮತ್ತು ರಾಷ್ಟ್ರಪತಿ ಕಚೇರಿಗಳು ಈ ಅಭಿಯಾನಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಯುಎಪಿಎ ಕಾನೂನಿನ ಅಡಿಯಲ್ಲಿ ಖಾಲಿದ್ ಅವರನ್ನು ಸೆಪ್ಟೆಂಬರ್ 13, 2020ರಂದು ಬಂಧಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page