ಗಾಜಾ ನರಮೇಧ ಮತ್ತು ಪ್ರಧಾನಿ ಮೋದಿ ಮೌನ: ಸೋನಿಯಾ ಗಾಂಧಿ ಎತ್ತಿರುವ ಗಂಭೀರ ಪ್ರಶ್ನೆಗಳೇನು?

“..ಜಗತ್ತೇ ಇಸ್ರೇಲ್ ವಿರುದ್ಧ ತಿರುಗಿ ಬಿದ್ದಿರುವಾಗ, ಭಾರತದ ನಿಲುವು ಏನು? ಸೋನಿಯಾ ಗಾಂಧಿಯವರು ಹೇಳುವ ಪ್ರಕಾರ, “ಭಾರತ ಮಾತ್ರ ಮೌನದ ಏಕಾಂಗಿ ಧ್ವನಿಯಾಗಿ ಉಳಿದಿದೆ.”.. ವಿಆರ್ ಕಾರ್ಪೆಂಟರ್ ಅವರ ವಿಮರ್ಶಾ ಲೇಖನ.. ತಪ್ಪದೇ ಓದಿ

ಜಗತ್ತಿನಾದ್ಯಂತ ಒಂದು ಭೀಕರ ಯುದ್ಧ ನಡೆಯುತ್ತಿದೆ. ಸಾವಿರಾರು ಮುಗ್ಧ ಜೀವಗಳು ಬಲಿಯಾಗುತ್ತಿವೆ. ಇಡೀ ಪ್ರಪಂಚವೇ ಇದರ ಬಗ್ಗೆ ಮಾತನಾಡುತ್ತಿದೆ, ಪ್ರತಿಭಟಿಸುತ್ತಿದೆ. ಆದರೆ, ‘ವಿಶ್ವಗುರು’ ಆಗುವ ಹಾದಿಯಲ್ಲಿದೆ ಎನ್ನಲಾಗುವ ನಮ್ಮ ಭಾರತ ಮಾತ್ರ ಈ ವಿಚಾರದಲ್ಲಿ ಕಲ್ಲಿನಂತಹ ಮೌನಕ್ಕೆ ಜಾರಿದೆ. ಹೌದು, ಇದು ಗಾಜಾ-ಇಸ್ರೇಲ್ ಯುದ್ಧದ ಕಥೆ. ಈ ಭೀಕರ ನರಮೇಧದ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ತೀವ್ರವಾಗಿ ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ಒಂದು ಅತ್ಯಂತ ಆಳವಾದ ಮತ್ತು ಖಾರವಾದ ಸಂಪಾದಕೀಯ ಲೇಖನವನ್ನು ಬರೆದಿದ್ದಾರೆ. ಇದು ಕೇವಲ ಒಂದು ರಾಜಕೀಯ ಆರೋಪವಲ್ಲ, ಬದಲಾಗಿ ನಮ್ಮ ದೇಶದ ವಿದೇಶಾಂಗ ನೀತಿ, ಮಾನವೀಯತೆ ಮತ್ತು ಇತಿಹಾಸದ ಬಗ್ಗೆ ಕೇಳಲಾದ ಒಂದು ದೊಡ್ಡ ಪ್ರಶ್ನೆಯಾಗಿದೆ. ಸೋನಿಯಾ ಗಾಂಧಿ ಅವರು ನೀಡಿರುವ ಅಂಕಿ-ಅಂಶಗಳು ಮತ್ತು ಜಾಗತಿಕ ಮಟ್ಟದ ಉದಾಹರಣೆಗಳ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

ವಿಶ್ವಸಂಸ್ಥೆಯ ವರದಿ ಮತ್ತು ಬೆಚ್ಚಿಬೀಳಿಸುವ ಅಂಕಿ-ಅಂಶಗಳು
ಸೋನಿಯಾ ಗಾಂಧಿಯವರು ತಮ್ಮ ಲೇಖನವನ್ನು ಶುರು ಮಾಡುವುದೇ ವಿಶ್ವಸಂಸ್ಥೆಯ ಒಂದು ಅತ್ಯಂತ ಗಂಭೀರವಾದ ವರದಿಯೊಂದಿಗೆ ಸೆಪ್ಟೆಂಬರ್ 2025 ರಲ್ಲಿ, ‘UN Independent International Commission of Inquiry’ ಒಂದು ಸ್ಪಷ್ಟವಾದ ನಿರ್ಧಾರಕ್ಕೆ ಬಂದಿತ್ತು: ಇಸ್ರೇಲ್ ಅಧಿಕಾರಿಗಳು ಗಾಜಾದಲ್ಲಿ ಪ್ಯಾಲೆಸ್ತೀನಿಯರ ವಿರುದ್ಧ ‘ಜೆನೊಸೈಡ್’ ಅಂದರೆ ಸಂಪೂರ್ಣ ನರಮೇಧ ಮಾಡುತ್ತಿದ್ದಾರೆ ಎಂದು. ಇದರ ಮುಂದುವರಿದ ಭಾಗವಾಗಿ, ಜೂನ್ 2026 ರಲ್ಲಿ ಇದೇ ಆಯೋಗ ಇನ್ನೊಂದು ರಿಪೋರ್ಟ್ ಕೊಟ್ಟಿದೆ. ವಿಶೇಷವೆಂದರೆ, ಈ ಆಯೋಗದ ನೇತೃತ್ವ ವಹಿಸಿರುವುದು ನಮ್ಮದೇ ಭಾರತದ ನಿವೃತ್ತ ನ್ಯಾಯಮೂರ್ತಿ ಎಸ್. ಮುರಳೀಧ‌ರ್ ಅವರು!

ನ್ಯಾಯಮೂರ್ತಿ ಮುರಳೀಧರ್ ಅವರ ಈ 94 ಪುಟಗಳ ವರದಿ ಓದಿದರೆ ಎಂಥವರ ಕರುಳೂ ಹಿಂಡುತ್ತದೆ. ಗಾಜಾದಲ್ಲಿ ಕನಿಷ್ಠ 20000 ಮುಗ್ಧ ಮಕ್ಕಳನ್ನು ಕೊಲ್ಲಲಾಗಿದೆ. ಇನ್ನು 44000 ಮಕ್ಕಳು ಗಾಯಗೊಂಡಿದ್ದಾರೆ; ಅದರಲ್ಲಿ ಬಹುಪಾಲು ಮಕ್ಕಳು ತಮ್ಮ ತಮ್ಮ ಇಡೀ ಇಡೀ ಜೀವನವನ್ನು ಅಂಗವೈಕಲ್ಯದಿಂದ ಅಂಗವೈಕಲ್ಯ ಕಳೆಯಬೇಕಾಗಿದೆ. ಈ ಯುದ್ಧದಲ್ಲಿ ಸತ್ತವರ ಮತ್ತು ಗಾಯಗೊಂಡವರ ಪೈಕಿ 27 ಪ್ರತಿಶತ ಕೇವಲ ಮಕ್ಕಳೇ ಇದ್ದಾರೆ. ಸತ್ತ ಅನೇಕ ಗಂಡು ಮಕ್ಕಳ ತಲೆ ಮತ್ತು ಕುತ್ತಿಗೆಗೆ ಗುಂಡು ಹಾರಿಸಲಾಗಿದೆ.

ಗಾಜಾದಲ್ಲಿರುವ 97% ಶಾಲೆಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಲಾಗಿದೆ. ಮಕ್ಕಳ ಆಸ್ಪತ್ರೆಗಳು ಸೇರಿದಂತೆ ಬಹುತೇಕ ಎಲ್ಲಾ ಹೆಲ್ತ್ಕೇರ್ ಸಿಸ್ಟಮ್ ಅನ್ನು ನಾಶ ಮಾಡಲಾಗಿದೆ. ಇದರಿಂದಾಗಿ ಗರ್ಭಿಣಿಯರಿಗೆ ಚಿಕಿತ್ಸೆ ಸಿಗದೆ, ಗರ್ಭಪಾತ ಮತ್ತು ಹೆರಿಗೆಯ ಸಮಸ್ಯೆಗಳು ಬರೋಬ್ಬರಿ 300% ಹೆಚ್ಚಾಗಿವೆ.

ಸೇಡಿನ ಹೆಸರಿನಲ್ಲಿ ಇಸ್ರೇಲ್ ಕ್ರೌರ್ಯ
2.5 ವರ್ಷಗಳ ಹಿಂದೆ ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಮಾಡಿದ ದಾಳಿ ಖಂಡಿತವಾಗಿಯೂ ಹೇಡಿತನದ ಮತ್ತು ಒಪ್ಪಿಕೊಳ್ಳಲಾಗದ ಕೃತ್ಯ. ಆದರೆ, ಅದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ಮಾಡುತ್ತಿರುವ ಪ್ರತಿದಾಳಿ ಕ್ರೌರ್ಯದ ಪರಮಾವಧಿ. ಇಸ್ರೇಲ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಕ್ಯಾಬಿನೆಟ್ ನಾಯಕರು ಗಾಜಾದ ‘ಸಂಪೂರ್ಣ ದಿಗ್ವಂಧನ’ ಮತ್ತು ‘ಸಂಪೂರ್ಣ ವಿನಾಶ’ಕ್ಕೆ ಕರೆ ನೀಡಿದ್ದಾರೆ. ಪ್ಯಾಲೆಸ್ತೀನಿಯರನ್ನು “ಪ್ರಾಣಿಗಳು” ಎಂದು ಕರೆದು, ಅವರಿಗೆ “ಬದುಕುವ ಹಕ್ಕೇ ಇಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಲಕ್ಷಾಂತರ ಜನರು ಗಾಜಾ ಬಿಟ್ಟು ಓಡಿಹೋಗುವುದೇ ಇಸ್ರೇಲ್‌ನ ನಿಜವಾದ ಗೆಲುವು ಎಂದು ಅವರು ವ್ಯಾಖ್ಯಾನಿಸಿದ್ದಾರೆ. ಉದ್ದೇಶ ಇಷ್ಟು ಸ್ಪಷ್ಟವಿದ್ದರೂ, ವಾಷಿಂಗ್ಟನ್‌ನಲ್ಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಇಸ್ರೇಲ್‌ನ ಈ ಕ್ರೂರ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದೆ.

ಎಚ್ಚೆತ್ತ ಜಗತ್ತು: ಇಸ್ರೇಲ್ ವಿರುದ್ಧ ತಿರುಗಿಬಿದ್ದ ರಾಷ್ಟ್ರಗಳು
ಅಮೆರಿಕದ ಅಡ್ಡಗಾಲಿನಿಂದಾಗಿ ವಿಶ್ವಸಂಸ್ಥೆ ದೊಡ್ಡ ಆಕ್ಷನ್ ತೆಗೆದುಕೊಳ್ಳಲು ಸಾಧ್ಯವಾಗದೇ ಇರಬಹುದು. ಆದರೆ ಜಗತ್ತಿನ ಆತ್ಮಸಾಕ್ಷಿ ಈಗ ಎಚ್ಚೆತ್ತುಕೊಂಡಿದೆ. ದಶಕಗಳ ಕಾಲ ಪ್ಯಾಲೆಸ್ತೀನ್ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದ್ದ ಫ್ರಾನ್ಸ್, ಯುಕೆ, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಈಗ ಪ್ಯಾಲೆಸ್ತೀನ್ ಅನ್ನು ಸ್ವತಂತ್ರ ರಾಷ್ಟ್ರ ಎಂದು ಎಂದು ಗುರುತಿಸಲು ಮುಂದಾಗಿವೆ. ಭಾರತದ ಜೊತೆ ವಸಾಹತುಶಾಹಿ ವಿರೋಧಿ ಹೋರಾಟದ ಇತಿಹಾಸವನ್ನು ಹಂಚಿಕೊಂಡಿರುವ ದಕ್ಷಿಣ ಆಫ್ರಿಕಾ ಒಂದು ಹೆಜ್ಜೆ ಮುಂದೆ ಹೋಗಿ, ಇಸ್ರೇಲ್ ಅನ್ನು ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಎಳೆದು ತಂದಿದೆ.

ಯುರೋಪಿನ ಹಲವು ದೇಶಗಳು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಮಾರಾಟ ಮಾಡುವುದನ್ನು ಬ್ಯಾನ್ ಮಾಡಿವೆ. ಲ್ಯಾಟಿನ್ ಅಮೆರಿಕದ ಅನೇಕ ರಾಷ್ಟ್ರಗಳು ಸೇರಿದಂತೆ ಜಪಾನ್ ಮತ್ತಿತರ ದೇಶಗಳು ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನೇ ಕಡಿದುಕೊಂಡಿವೆ. ಇಂಟರ್ನ್ಯಾಷನಲ್ ಕ್ರಿಮಿನಲ್‌ ಕೋರ್ಟ್‌ ಇಸ್ರೇಲ್‌ನ ರಾಜಕೀಯ ನಾಯಕರ ವಿರುದ್ಧ ಅರೆಸ್ಟ್ ವಾರಂಟ್ ಕೂಡ ಹೊರಡಿಸಿದೆ.

ಮೌನಕ್ಕೆ ಶರಣಾದ ಭಾರತ ಮತ್ತು ನ್ಯಾ. ಮುರಳೀಧರ್ ವರ್ಗಾವಣೆಯ ನೆನಪು
ಜಗತ್ತೇ ಇಸ್ರೇಲ್ ವಿರುದ್ಧ ತಿರುಗಿ ಬಿದ್ದಿರುವಾಗ, ಭಾರತದ ನಿಲುವು ಏನು? ಸೋನಿಯಾ ಗಾಂಧಿಯವರು ಹೇಳುವ ಪ್ರಕಾರ, “ಭಾರತ ಮಾತ್ರ ಮೌನದ ಏಕಾಂಗಿ ಧ್ವನಿಯಾಗಿ ಉಳಿದಿದೆ.” ಜಸ್ಟಿಸ್ ಮುರಳೀಧರ್ ಅವರ ವರದಿ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸುತ್ತಿದ್ದರೆ, ಮೋದಿ ಸರ್ಕಾರ ಮಾತ್ರ ಮೌನಕ್ಕೆ ಜಾರಿದೆ. 2020 ರ ದೆಹಲಿ ಗಲಭೆಯ ಸಮಯದಲ್ಲಿ ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ಆಕ್ಷನ್ ತೆಗೆದುಕೊಳ್ಳದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದ ಇದೇ ಇದೇ ಜಸ್ಟಿಸ್ ಮುರಳೀಧರ್ ಅವರನ್ನು, ರಾತ್ರೋರಾತ್ರಿ ದೆಹಲಿ ಹೈಕೋರ್ಟ್‌ನಿಂದ ವರ್ಗಾವಣೆ ಮಾಡಲಾಗಿದ್ದನ್ನು ರಾತೋರಾತ್ರಿ ದೆಹಲಿ ಹೈಕೋರ್ಟ್‌ನಿಂದ ತಗಿದ್ದನ್ನು ಲೇಖನದಲ್ಲಿ ನೆನಪಿಸಲಾಗಿದೆ. ಭಾರತ ಒಂದು ಕಾಲದಲ್ಲಿ ತನ್ನ ರಾಷ್ಟ್ರೀಯ ಸಾರ್ವಭೌಮತೆ ಮತ್ತು ಶೋಷಿತ ರಾಷ್ಟ್ರಗಳ ಪರವಾಗಿ ನಿಲ್ಲುವುದರಲ್ಲಿ ಜಗತ್ತಿಗೇ ಮಾದರಿಯಾಗಿತ್ತು. ಆದರೆ ಇಂದು ನಾವು ಗ್ಲೋಬಲ್ ಸೌತ್ ದೇಶಗಳ ಜನರ ಕಷ್ಟಗಳ ಬಗ್ಗೆ ಕಣ್ಮುಚ್ಚಿ ಕೂತಿದ್ದೇವೆ.

5 ವರ್ಷದ ಕಂದಮ್ಮ ‘ಹಿಂದ್ ರಜಬ್’ ಕಣ್ಣೀರ ಕಥೆ
ಈ ಯುದ್ಧದ ಭೀಕರತೆಯನ್ನು ವಿವರಿಸಲು ಲೇಖನದಲ್ಲಿ 5 ವರ್ಷದ ಪುಟ್ಟ ಬಾಲಕಿ ಹಿಂದ್ ರಜಬ್ ಉದಾಹರಣೆಯನ್ನು ಸೋನಿಯಾ ಗಾಂಧಿಯವರು ನೀಡಿದ್ದಾರೆ. ಗಾಜಾ ಸಿಟಿಯಿಂದ ತನ್ನ ಕುಟುಂಬದ ಜೊತೆ ಕಾರಿನಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದಾಗ, ಇಸ್ರೇಲ್ ಪಡೆಗಳು ಆಕೆಯ ಕಾರಿನ ಮೇಲೆ ಬರೋಬ್ಬರಿ 335 ರೌಂಡ್ಸ್ ಗುಂಡು ಹಾರಿಸುತ್ತವೆ. ಆಕೆಯ 6 ಜನ ಕುಟುಂಬ ಸದಸ್ಯರು ಅಲ್ಲೇ ಸಾವನ್ನಪ್ಪುತ್ತಾರೆ. ಆಕೆಯನ್ನು ರಕ್ಷಿಸಲು ಬಂದ ಇಬ್ಬರು ವೈದ್ಯಕೀಯ ಸಿಬ್ಬಂದಿ ಮತ್ತು ಆ ಪುಟ್ಟ ಬಾಲಕಿಯನ್ನು ಕೊನೆಗೆ ಬರ್ಬರವಾಗಿ ಕೊಲ್ಲಲಾಗುತ್ತದೆ.”

ಆಘಾತಕಾರಿ ವಿಚಾರವೆಂದರೆ, ಇಸ್ರೇಲ್‌ನ ‘ಸೆನ್ಸಿಟಿವಿಟಿ’ಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಘಟನೆಯ ಬಗ್ಗೆ ಮಾಡಿದ ಸಿನಿಮಾವನ್ನು ಭಾರತದಲ್ಲಿ ತಿಂಗಳುಗಳ ಕಾಲ ಬ್ಯಾನ್ ಮಾಡಲಾಗಿತ್ತು. ಸಾರ್ವಜನಿಕರ ತೀವ್ರ ಒತ್ತಡದ ನಂತರವಷ್ಟೇ ಅದನ್ನು ರಿಲೀಸ್ ಮಾಡಲು ಬಿಡಲಾಯಿತು.

ವಿದೇಶಾಂಗ ನೀತಿಯಲ್ಲಿನ ಎಡವಟ್ಟು: ಪಾಕಿಸ್ತಾನಕ್ಕೆ ಸಿಕ್ಕ ಅವಕಾಶ!
ಮೋದಿಯವರ ಈ ಮೌನ ಕೇವಲ ನೈತಿಕವಾಗಿ ಮಾತ್ರ ತಪ್ಪಲ್ಲ. ಇದು ಜಿಯೋಪಾಲಿಟಿಕ್ಸ್ ಮತ್ತು ‘ನ್ಯಾಷನಲ್‌ ಇಂಟರೆಸ್ಟ್’ (ರಾಷ್ಟ್ರೀಯ ಹಿತಾಸಕ್ತಿ) ದೃಷ್ಟಿಯಿಂದಲೂ ಒಂದು ಐತಿಹಾಸಿಕ ಪ್ರಮಾದ. ಇಡೀ ಜಗತ್ತು ಇಸ್ರೇಲ್‌ನಿಂದ ದೂರ ಸರಿಯುತ್ತಿರುವಾಗ, ಭಾರತ ಮಾತ್ರ ಇಸ್ರೇಲ್‌ನ ಸ್ಟ್ರಾಟಜಿಕ್ ಕಕ್ಷೆಯೊಳಗೆ ಇನ್ನಷ್ಟು ಆಳವಾಗಿ ಸಿಲುಕಿಕೊಳ್ಳುತ್ತಿದೆ. ಇಸ್ರೇಲ್ ಇರಾನ್ ಮೇಲೆ ಯುದ್ಧ ಸಾರುವ ಕೇವಲ ಕೆಲವೇ ದಿನಗಳ ಮುಂಚೆ ಪ್ರಧಾನಿ ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡಿದ್ದು ದಿಗ್ಧಮೆ ಹುಟ್ಟಿಸುವ ನಿರ್ಧಾರ.

ನಮ್ಮ ಈ ನಡೆಯಿಂದಾಗಿ ನಾವು ಪ್ಯಾಲೆಸ್ತೀನ್, ಇರಾನ್ ಮತ್ತು ಮಧ್ಯಪ್ರಾಚ್ಯದ ನಮ್ಮ ಐತಿಹಾಸಿಕ ಮಿತ್ರರಾಷ್ಟ್ರಗಳನ್ನು ದೂರ ಮಾಡಿಕೊಂಡಿದ್ದೇವೆ. ಇವೆಲ್ಲದರ ನಡುವೆ, ದಶಕಗಳಿಂದ ಉಗ್ರರಿಗೆ ಆಶ್ರಯ ನೀಡುತ್ತಾ ಬಂದಿರುವ ಪಾಕಿಸ್ತಾನದಂತಹ ದೇಶ, ಇಂದು ಈ ಯುದ್ಧದಲ್ಲಿ ಒಬ್ಬ ‘ಮಧ್ಯವರ್ತಿ’ಯಾಗಿ ಬಿಂಬಿಸಿಕೊಳ್ಳಲು ನಾವೇ ಅವಕಾಶ ಮಾಡಿಕೊಟ್ಟಿದ್ದೇವೆ! ವಾಸ್ತವದಲ್ಲಿ ಈ ಜವಾಬ್ದಾರಿಯನ್ನು ಭಾರತ ತೆಗೆದುಕೊಳ್ಳಬೇಕಿತ್ತು. ಆದರೆ ಜಗತ್ತಿನಾದ್ಯಂತ ಟೀಕೆಗೆ ಗುರಿಯಾಗುತ್ತಿರುವ ಇಸ್ರೇಲ್ ಪ್ರಧಾನಿ ಮತ್ತು ಪ್ರಧಾನಿ ಮೋದಿ ನಡುವಿನ ಕೇವಲ ಒಂದು ವೈಯಕ್ತಿಕ ಸ್ನೇಹಕ್ಕಾಗಿ ನಾವು ನಮ್ಮ ನೈತಿಕತೆ ಮತ್ತು ಸ್ಟ್ರಾಟಜಿಕ್ ಹಿತಾಸಕ್ತಿ ಎರಡನ್ನೂ ಬಲಿಕೊಟ್ಟಿದ್ದೇವೆ.

ಸೋನಿಯಾ ಗಾಂಧಿಯವರು ತಮ್ಮ ಲೇಖನವನ್ನು ಒಂದು ಸ್ಪಷ್ಟ ಎಚ್ಚರಿಕೆಯೊಂದಿಗೆ ಮುಕ್ತಾಯಗೊಳಿಸುತ್ತಾರೆ: “ನಮ್ಮ ಭಾರತೀಯ ರಾಷ್ಟ್ರೀಯತೆಯ ಆತ್ಮ, ನಾವು ನಮ್ಮ ಪ್ಯಾಲೆಸ್ತೀನ್ ಸಹೋದರ-ಸಹೋದರಿಯರ ಪರವಾಗಿ ಧ್ವನಿ ಎತ್ತುವುದನ್ನು ಬಯಸುತ್ತದೆ. ಮೋದಿ ಸರ್ಕಾರದ ಈ ನಿರಂತರ ಮೌನವನ್ನು ಯಾವುದೇ ತಾರ್ಕಿಕ ಅಥವಾ ನೈತಿಕ ಕಾರಣಗಳಿಂದಲೂ ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ.”

ದೇಶದ ವಿದೇಶಾಂಗ ನೀತಿ, ಜಾಗತಿಕ ಮಟ್ಟದಲ್ಲಿ ನಮ್ಮ ಸ್ಥಾನಮಾನ ಮತ್ತು ನೈತಿಕತೆಯ ಬಗ್ಗೆ ಸೋನಿಯಾ ಗಾಂಧಿಯವರು ಎತ್ತಿರುವ ಈ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು