ಸಕಲೇಶಪುರ : ಮಳೆಯಿಂದ ಕತ್ತಲಾದ ಹಳ್ಳಿಗಳಿಗೆ ನಾಳೆಯೊಳಗೆ ವಿದ್ಯುತ್

ಹಾಸನ : ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಹಾನಿಗೊಳಗಾದ ಸಕಲೇಶಪುರ ಮತ್ತು ಆಲೂರು ತಾಲೂಕಿನ ಗ್ರಾಮಗಳಲ್ಲಿ ನಾಳೆ ಸಂಜೆ ಒಳಗೆ ವಿದ್ಯುತ್ ಸಂಪರ್ಕ ಮರುಸ್ಥಾಪಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಸೆಸ್ಕ್ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

🔹 ಸಕಲೇಶಪುರದಲ್ಲಿ 219 ಹಾಗೂ ಆಲೂರಿನಲ್ಲಿ 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾನಿ

🔹 ಸಿಬ್ಬಂದಿ ಕೊರತೆ ನೀಗಿಸಲು 40 ಸಿಬ್ಬಂದಿ ಸಕಲೇಶಪುರಕ್ಕೆ, 8 ಸಿಬ್ಬಂದಿ ಆಲೂರಿಗೆ ನಿಯೋಜನೆ

🔹 ಸಾರ್ವಜನಿಕರ ಕರೆಗಳಿಗೆ ಅಧಿಕಾರಿಗಳು ಕಡ್ಡಾಯವಾಗಿ ಸ್ಪಂದಿಸಬೇಕು ಎಂದು ಸೂಚನೆ

🔹 ರೋಗಿಗಳು, ವಿದ್ಯಾರ್ಥಿಗಳು ಹಾಗೂ ಗರ್ಭಿಣಿಯರಿಗೆ ತೊಂದರೆಯಾಗದಂತೆ ತ್ವರಿತ ಕಾಮಗಾರಿ ನಡೆಸಲು ನಿರ್ದೇಶನ

🔹 ಅಗತ್ಯವಿದ್ದರೆ ಹೊರ ತಾಲೂಕುಗಳಿಂದಲೂ ಸಿಬ್ಬಂದಿ ಕರೆಸಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

🙏 ಸಂಕಷ್ಟದ ಸಮಯದಲ್ಲಿ ಜಂಗಲ್ ಕ್ಲಿಯರೆನ್ಸ್ ಹಾಗೂ ವಿದ್ಯುತ್ ಕಾಮಗಾರಿಗೆ ಸಹಕರಿಸುತ್ತಿರುವ ಗ್ರಾಮಸ್ಥರ ಸೇವೆಯನ್ನು ಶಾಸಕರು ಶ್ಲಾಘಿಸಿದರು.

Related Articles

ಇತ್ತೀಚಿನ ಸುದ್ದಿಗಳು