ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಮನುವ್ಯಾದಿ ಅಡ್ಡಂಡ ಕಾರಿಯಪ್ಪನ ಮುಖಕ್ಕೆ ಮಸಿರಾಜಧಾನಿಯಲ್ಲಿ ಅಕ್ರಮ ಪಿಜಿಗಳ ಹಾವಳಿ ನಿಯಂತ್ರಣಕ್ಕೆ – GBA ಹೊಸ ಮಾರ್ಗಸೂಚಿವಾರದ ಹಿಂದೆ ನಾಪತ್ತೆಯಾಗಿದ್ದ ದಲಿತ ನಾಯಕ – ಧರ್ಮಸ್ಥಳದಲ್ಲಿ ಶವವಾಗಿ ಪತ್ತೆಆಂಧ್ರ ಕರಾವಳಿಗೆ ಭಾಗಗಳಿಗೆ ಅಪ್ಪಳಿಸಿದ ಚಂಡಮಾರುತ, ಮೀನುಗಾರಿಕೆ ದೋಣಿಗಳಿಗೆ ಹಾನಿ – ಭಾರಿ ಅನಾಹುತಅಮಿತ್ ಶಾ ಭೇಟಿಯಾದ ಚಿರಂಜೀವಿ, ರಾಮ್ ಚರಣ್; ಭೇಟಿಯ ಉದ್ದೇಶ ಏನು ಗೊತ್ತಾ?ವಿಜಯ ಪ್ರಸಾದ್ ಹೊಸ ಸಿನಿಮಾದಲ್ಲಿ ರಚಿತಾ ರಾಮ್; ಈ ಬಾರಿ ಡಿಫರೆಂಟ್ ಆಗಿ ಪ್ರೇಕ್ಷಕರ ಮುಂದೆ!ಕೆಪಿಎಸ್‌ಸಿ ನೇಮಕಾತಿ ಅಕ್ರಮ ತನಿಖೆಗೆ ಹೊಸ ಸಾರಥಿ: ಎಸ್‌ಐಟಿ ಜವಾಬ್ದಾರಿ ಆರ್. ಹಿತೇಂದ್ರ ಹೆಗಲಿಗೆಕಬ್ಬು ಬೆಲೆ ಬಿಕ್ಕಟ್ಟು: ಇಂದು ಕಾರ್ಖಾನೆ ಮಾಲೀಕರು-ರೈತ ಸಂಘಟನೆಗಳ ಸಭೆ; ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆಗಾಂಧಿ ಹತ್ಯೆಯ ಸತ್ಯ ನಾಟಕ ವಿವಾದ: ಸುಚಿತ್ರಾ ಫಿಲಂ ಸೊಸೈಟಿಗೆ ಬನಶಂಕರಿ ಪೊಲೀಸರ ನೋಟಿಸ್ಮೋದಿ ಅವರಿಗೆ ಬಹಿರಂಗ ಚರ್ಚೆಗೆ ರಾಹುಲ್ ಗಾಂಧಿ ಸವಾಲು; ವಿದೇಶಿ ಬೆಂಬಲದ ಆರೋಪಕ್ಕೆ ತಿರುಗೇಟು16 ವರ್ಷಗಳ ಬಳಿಕ ದೇಶದಲ್ಲಿ ಜನಗಣತಿ ಪ್ರಕ್ರಿಯೆಗೆ ಅಧಿಕೃತ ವೇಳಾಪಟ್ಟಿ ಪ್ರಕಟ; ಜನವರಿ 25ರಿಂದ ಮನೆಮನೆ ಸಮೀಕ್ಷೆ ಆರಂಭಅಸ್ಸಾಂ: ಮುಸ್ಲಿಂ ಬಾಹುಳ್ಯದ ಆಲಂಗಂಜ್‌ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯಿಂದ ನಿರ್ವಸತಿಗರಾದ 4,000ಕ್ಕೂ ಹೆಚ್ಚು ನಿವಾಸಿಗಳುಟಿಕೆಟ್ ರೇಟ್‌ ಜಾಸ್ತಿ ಅನ್ಸಿದ್ರೆ ವಿಮಾನದಲ್ಲಿ ಓಡಾಡಬೇಡಿ: ಸುಪ್ರೀಂ ಕೋರ್ಟ್SIR, EVM ವಿಚಾರದಲ್ಲಿ ವಿಶೇಷ ಸಂಸತ್ ಅಧಿವೇಶನಕ್ಕೆ ಸರ್ಕಾರ ಸಿದ್ಧ: ರಾಹುಲ್ ಗಾಂಧಿಗೆ ಅಮಿತ್ ಶಾ ಸವಾಲುಎಸ್‌ಐಆರ್‌ ಪ್ರತಿಭಟನೆ | ಬಾಂಬೆ ಹೈಕೋರ್ಟ್‌ ಎದುರು ಬೇಷರತ್‌ ಕ್ಷಮೆಯಾಚಿಸಿ‌, ಮುಚ್ಚಳಿಕೆ ಬರೆದುಕೊಟ್ಟ ನಟ ಇಮ್ರಾನ್‌ ಖಾನ್ಅಡ್ಡಂಡ ಪ್ರಕರಣ | ಸಂವಿಧಾನದ ಮೇಲೆ ಸವಾರಿ ಮಾಡಲು ಯತ್ನಿಸಿದರೆ ಜನರೇ ಕಾಂಗ್ರೆಸಿಗೆ ಬುದ್ಧಿ ಕಲಿಸುತ್ತಾರೆ: ತೇಜಸ್ವಿ ಸೂರ್ಯ ವಾಗ್ದಾಳಿಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸರ್ಕಾರ: ನಂದಿನಿ ಮೊಸರು ದರ ಲೀಟರ್‌ಗೆ ₹2 ಇಳಿಕೆಗೆ ಸಿಎಂ ಸೂಚನೆಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ: ಆರು ಪ್ರಶ್ನೆಗಳ ಪಟ್ಟಿಯೊಂದಿಗೆ ಕಂಪನಿಗಳನ್ನು ಸಂಪರ್ಕಿಸಿದ ಕರವೇಬಾಹ್ಯಾಕಾಶದಲ್ಲಿ AI ತಂತ್ರಜ್ಞಾನದ ಹೊಸ ಪ್ರಯೋಗ: ಉಪಗ್ರಹದಿಂದ ಕವಿತೆ ರಚಿಸಿ ಭೂಮಿಗೆ ರವಾನಿಸಿದ ಗೂಗಲ್!ದೀಪಾವಳಿಗೆ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ: ಹಸಿರು ಪಟಾಕಿ ಬಳಕೆಗೆ ಪೊಲೀಸ್ ಸೂಚನೆ

ಅಡ್ಡಂಡ ಪ್ರಕರಣ | ಸಂವಿಧಾನದ ಮೇಲೆ ಸವಾರಿ ಮಾಡಲು ಯತ್ನಿಸಿದರೆ ಜನರೇ ಕಾಂಗ್ರೆಸಿಗೆ ಬುದ್ಧಿ ಕಲಿಸುತ್ತಾರೆ: ತೇಜಸ್ವಿ ಸೂರ್ಯ ವಾಗ್ದಾಳಿ

PPeepal Media

Peepal Media ರಾಜಕೀಯ

• 1 ನಿಮಿಷದ ಓದು

ಅಡ್ಡಂಡ ಪ್ರಕರಣ | ಸಂವಿಧಾನದ ಮೇಲೆ ಸವಾರಿ ಮಾಡಲು ಯತ್ನಿಸಿದರೆ ಜನರೇ ಕಾಂಗ್ರೆಸಿಗೆ ಬುದ್ಧಿ  ಕಲಿಸುತ್ತಾರೆ:  ತೇಜಸ್ವಿ ಸೂರ್ಯ ವಾಗ್ದಾಳಿ

ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಖಂಡಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಸೃಷ್ಟಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು: ನಾಟಕಕಾರ ಹಾಗೂ ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 1975ರ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿರುವ ಅವರು, ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ತೇಜಸ್ವಿ ಸೂರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಸರ್ಕಾರ ನೀಡುವ ಭಿಕ್ಷೆಯಲ್ಲ, ಅದು ಸಂವಿಧಾನ ನೀಡಿರುವ ಹಕ್ಕು ಎಂದು ಹೇಳಿದ್ದಾರೆ.

“1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದರು. ಇಂದು ಕರ್ನಾಟಕದಲ್ಲಿ ಅದೇ ಕಾಂಗ್ರೆಸ್, ಅದೇ ಸರ್ವಾಧಿಕಾರದ ಮನಸ್ಥಿತಿಯೊಂದಿಗೆ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿದೆಯೇ? ಅಂದು ತುರ್ತು ಪರಿಸ್ಥಿತಿ, ಇಂದು ಅಘೋಷಿತ ತುರ್ತು ಪರಿಸ್ಥಿತಿ. ಅಂದು ಪತ್ರಿಕೆಗಳಿಗೆ ನಿರ್ಬಂಧ, ಇಂದು ಕಲಾವಿದರ ಅಭಿವ್ಯಕ್ತಿಗೆ ಅಡ್ಡಿ. ಬದಲಾಗಿರುವುದು ಕಾಲ ಮಾತ್ರ, ಕಾಂಗ್ರೆಸ್‌ನ ಸರ್ವಾಧಿಕಾರದ ಚಾಳಿ ಬದಲಾಗಿಲ್ಲ” ಎಂದು ಟೀಕಿಸಿದ್ದಾರೆ.

ಅಡ್ಡಂಡ ಕಾರ್ಯಪ್ಪ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರಿಗೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

“ವಿಚಾರವನ್ನು ಎದುರಿಸಲಾಗದವರು ಪೊಲೀಸ್ ಅಧಿಕಾರದ ಹಿಂದೆ ಅಡಗುತ್ತಾರೆ. ಸತ್ಯವನ್ನು ಸಹಿಸಲಾಗದವರು ನಿಷೇಧದ ಅಸ್ತ್ರ ಪ್ರಯೋಗಿಸುತ್ತಾರೆ. ಪೊಲೀಸ್ ಇಲಾಖೆ ನಿಮ್ಮ ರಾಜಕೀಯ ಪ್ರತಿಷ್ಠೆ ಕಾಪಾಡುವ ಕವಚವಲ್ಲ. ಅದು ಕಾನೂನು ಮತ್ತು ನ್ಯಾಯವನ್ನು ರಕ್ಷಿಸುವ ವ್ಯವಸ್ಥೆ” ಎಂದು ಮುಖ್ಯಮಂತ್ರಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

“ಪೊಲೀಸ್ ಇಲಾಖೆ ನಿಮ್ಮ ಪಕ್ಷದ ಖಾಸಗಿ ಸೇನೆಯೂ ಅಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಾಹುಲ್ ಗಾಂಧಿಯವರ ಅಣತಿಯಂತೆ ನಡೆಯುವುದಿಲ್ಲ” ಎಂದೂ ಅವರು ಹೇಳಿದ್ದಾರೆ.

ಏನಿದು ವಿವಾದ?

ಅಡ್ಡಂಡ ಕಾರ್ಯಪ್ಪ ನಿರ್ದೇಶನದ ‘ಗಾಂಧಿ ಹತ್ಯೆಯ ಸತ್ಯ’ ನಾಟಕದ ಪ್ರದರ್ಶನದ ವೇಳೆ ಅಕ್ಟೋಬರ್ 31ರಂದು ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಅಕಾಡೆಮಿಯಲ್ಲಿ ಗಲಾಟೆ ನಡೆದಿತ್ತು. ಪ್ರತಿಭಟನಾಕಾರರು ಕಾರ್ಯಪ್ಪ ಅವರ ಮುಖಕ್ಕೆ ಮಸಿ ಬಳಿದಿದ್ದರು. ನವೆಂಬರ್ 2ರಂದು ಅಕಾಡೆಮಿ ಎದುರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರತ್ತ ಚಪ್ಪಲಿ ಎಸೆಯಲಾಗಿತ್ತು. ಎರಡೂ ಘಟನೆಗಳ ಸಂಬಂಧ ದೂರುಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ನಾಟಕದಲ್ಲಿ ಮಹಾತ್ಮ ಗಾಂಧೀಜಿ ಕುರಿತು ಆಕ್ಷೇಪಾರ್ಹ ವಿಚಾರಗಳನ್ನು ಹೇಳಲಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪ. ಮತ್ತೊಂದೆಡೆ, ನಾಟಕದ ವಿಷಯದಲ್ಲಿ ಆಕ್ಷೇಪವಿದ್ದರೆ ಕಾನೂನುಬದ್ಧವಾಗಿ ವಿರೋಧಿಸಬೇಕೇ ಹೊರತು ಕಲಾವಿದರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ ಎಂಬ ಚರ್ಚೆ ನಡೆಯುತ್ತಿದೆ.

ಈ ಬೆಳವಣಿಗೆಗಳ ಬೆನ್ನಲ್ಲೇ ತೇಜಸ್ವಿ ಸೂರ್ಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

PPeepal Media

Peepal Media

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು