ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ನನ್ನ ಮೇಲೆ ಇಡಿ, ಐಟಿ ದಾಳಿ ನಡೆಸಲು ಕೇಂದ್ರ ಸಚಿವರಿಂದ ಸಂಚು – ಪ್ರಿಯಾಂಕ್‌ ಖರ್ಗೆತೆರೆ ಹಿಂದೆ ಮಗು ಚಿವುಟಿ, ಮಾಧ್ಯಮಗಳ ಮುಂದೆ ತೊಟ್ಟಿಲು ತೂಗುತ್ತಿದ್ದರು HD ಸ್ಟಿಂಗ್ ಸ್ವಾಮಿ – ಎಂ. ಲಕ್ಷ್ಮಣ್ಮನುವ್ಯಾದಿ ಅಡ್ಡಂಡ ಕಾರಿಯಪ್ಪನ ಮುಖಕ್ಕೆ ಮಸಿರಾಜಧಾನಿಯಲ್ಲಿ ಅಕ್ರಮ ಪಿಜಿಗಳ ಹಾವಳಿ ನಿಯಂತ್ರಣಕ್ಕೆ – GBA ಹೊಸ ಮಾರ್ಗಸೂಚಿವಾರದ ಹಿಂದೆ ನಾಪತ್ತೆಯಾಗಿದ್ದ ದಲಿತ ನಾಯಕ – ಧರ್ಮಸ್ಥಳದಲ್ಲಿ ಶವವಾಗಿ ಪತ್ತೆಆಂಧ್ರ ಕರಾವಳಿಗೆ ಭಾಗಗಳಿಗೆ ಅಪ್ಪಳಿಸಿದ ಚಂಡಮಾರುತ, ಮೀನುಗಾರಿಕೆ ದೋಣಿಗಳಿಗೆ ಹಾನಿ – ಭಾರಿ ಅನಾಹುತಅಮಿತ್ ಶಾ ಭೇಟಿಯಾದ ಚಿರಂಜೀವಿ, ರಾಮ್ ಚರಣ್; ಭೇಟಿಯ ಉದ್ದೇಶ ಏನು ಗೊತ್ತಾ?ವಿಜಯ ಪ್ರಸಾದ್ ಹೊಸ ಸಿನಿಮಾದಲ್ಲಿ ರಚಿತಾ ರಾಮ್; ಈ ಬಾರಿ ಡಿಫರೆಂಟ್ ಆಗಿ ಪ್ರೇಕ್ಷಕರ ಮುಂದೆ!ಕೆಪಿಎಸ್‌ಸಿ ನೇಮಕಾತಿ ಅಕ್ರಮ ತನಿಖೆಗೆ ಹೊಸ ಸಾರಥಿ: ಎಸ್‌ಐಟಿ ಜವಾಬ್ದಾರಿ ಆರ್. ಹಿತೇಂದ್ರ ಹೆಗಲಿಗೆಕಬ್ಬು ಬೆಲೆ ಬಿಕ್ಕಟ್ಟು: ಇಂದು ಕಾರ್ಖಾನೆ ಮಾಲೀಕರು-ರೈತ ಸಂಘಟನೆಗಳ ಸಭೆ; ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆಗಾಂಧಿ ಹತ್ಯೆಯ ಸತ್ಯ ನಾಟಕ ವಿವಾದ: ಸುಚಿತ್ರಾ ಫಿಲಂ ಸೊಸೈಟಿಗೆ ಬನಶಂಕರಿ ಪೊಲೀಸರ ನೋಟಿಸ್ಮೋದಿ ಅವರಿಗೆ ಬಹಿರಂಗ ಚರ್ಚೆಗೆ ರಾಹುಲ್ ಗಾಂಧಿ ಸವಾಲು; ವಿದೇಶಿ ಬೆಂಬಲದ ಆರೋಪಕ್ಕೆ ತಿರುಗೇಟು16 ವರ್ಷಗಳ ಬಳಿಕ ದೇಶದಲ್ಲಿ ಜನಗಣತಿ ಪ್ರಕ್ರಿಯೆಗೆ ಅಧಿಕೃತ ವೇಳಾಪಟ್ಟಿ ಪ್ರಕಟ; ಜನವರಿ 25ರಿಂದ ಮನೆಮನೆ ಸಮೀಕ್ಷೆ ಆರಂಭಅಸ್ಸಾಂ: ಮುಸ್ಲಿಂ ಬಾಹುಳ್ಯದ ಆಲಂಗಂಜ್‌ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯಿಂದ ನಿರ್ವಸತಿಗರಾದ 4,000ಕ್ಕೂ ಹೆಚ್ಚು ನಿವಾಸಿಗಳುಟಿಕೆಟ್ ರೇಟ್‌ ಜಾಸ್ತಿ ಅನ್ಸಿದ್ರೆ ವಿಮಾನದಲ್ಲಿ ಓಡಾಡಬೇಡಿ: ಸುಪ್ರೀಂ ಕೋರ್ಟ್SIR, EVM ವಿಚಾರದಲ್ಲಿ ವಿಶೇಷ ಸಂಸತ್ ಅಧಿವೇಶನಕ್ಕೆ ಸರ್ಕಾರ ಸಿದ್ಧ: ರಾಹುಲ್ ಗಾಂಧಿಗೆ ಅಮಿತ್ ಶಾ ಸವಾಲುಎಸ್‌ಐಆರ್‌ ಪ್ರತಿಭಟನೆ | ಬಾಂಬೆ ಹೈಕೋರ್ಟ್‌ ಎದುರು ಬೇಷರತ್‌ ಕ್ಷಮೆಯಾಚಿಸಿ‌, ಮುಚ್ಚಳಿಕೆ ಬರೆದುಕೊಟ್ಟ ನಟ ಇಮ್ರಾನ್‌ ಖಾನ್ಅಡ್ಡಂಡ ಪ್ರಕರಣ | ಸಂವಿಧಾನದ ಮೇಲೆ ಸವಾರಿ ಮಾಡಲು ಯತ್ನಿಸಿದರೆ ಜನರೇ ಕಾಂಗ್ರೆಸಿಗೆ ಬುದ್ಧಿ ಕಲಿಸುತ್ತಾರೆ: ತೇಜಸ್ವಿ ಸೂರ್ಯ ವಾಗ್ದಾಳಿಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸರ್ಕಾರ: ನಂದಿನಿ ಮೊಸರು ದರ ಲೀಟರ್‌ಗೆ ₹2 ಇಳಿಕೆಗೆ ಸಿಎಂ ಸೂಚನೆಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ: ಆರು ಪ್ರಶ್ನೆಗಳ ಪಟ್ಟಿಯೊಂದಿಗೆ ಕಂಪನಿಗಳನ್ನು ಸಂಪರ್ಕಿಸಿದ ಕರವೇ

ವಾರದ ಹಿಂದೆ ನಾಪತ್ತೆಯಾಗಿದ್ದ ದಲಿತ ನಾಯಕ – ಧರ್ಮಸ್ಥಳದಲ್ಲಿ ಶವವಾಗಿ ಪತ್ತೆ

ವಾರದ ಹಿಂದೆ ನಾಪತ್ತೆಯಾಗಿದ್ದ ದಲಿತ ನಾಯಕ – ಧರ್ಮಸ್ಥಳದಲ್ಲಿ ಶವವಾಗಿ ಪತ್ತೆ

ದೊಡ್ಡಬಳ್ಳಾಪುರ: ಮನೆಯಿಂದ ಹೊರಹೋದ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ (Missing) ದೊಡ್ಡಬಳ್ಳಾಪುರದ ದಲಿತ ಮುಖಂಡ ಸಿ. ಗುರುರಾಜಪ್ಪ ಅವರು ಧರ್ಮಸ್ಥಳದಲ್ಲಿ (Dharmasthala) ಮೃತಪಟ್ಟಿರುವುದು (Crime) ಬೆಳಕಿಗೆ ಬಂದಿದೆ. ಧರ್ಮಸ್ಥಳದ ಶ್ರೀಮುಡಿ ಭವನದ ಆವರಣದಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಗುರುವಾರದಿಂದ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು.

ದೊಡ್ಡಬಳ್ಳಾಪುರದ (Doddaballapur) ಕಚೇರಿಪಾಳ್ಯದಲ್ಲಿ ವಾಸವಿದ್ದ ಗುರುರಾಜಪ್ಪ ಅವರು ಛಲವಾದಿ ಮಹಾಸಭಾದ ತಾಲೂಕು ಘಟಕದ ಮಾಜಿ ಅಧ್ಯಕ್ಷರಾಗಿದ್ದರು. ದಲಿತ ಪರ ಹೋರಾಟಗಳ ಜೊತೆಗೆ ಕನ್ನಡ ಮತ್ತು ಪ್ರಗತಿಪರ ಚಳವಳಿಗಳಲ್ಲಿಯೂ ಗುರುತಿಸಿಕೊಂಡಿದ್ದರು. ಗುರುವಾರ ಬೈಕ್‌ನಲ್ಲಿ ಮನೆಯಿಂದ ತೆರಳಿದ್ದ ಅವರು ನಂತರ ಕುಟುಂಬದವರ ಸಂಪರ್ಕಕ್ಕೆ ಬಂದಿರಲಿಲ್ಲ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡಿದ್ದ ಮನೆಯವರು ಸೋಮವಾರ ಬೆಳಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲು ತೆರಳಿದ್ದರು.

ಆದರೆ, ಅದೇ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಸುದ್ದಿ ಅವರಿಗೆ ತಲುಪಿದೆ. ಮೃತದೇಹದ ಫೋಟೋವನ್ನು ಪರಿಶೀಲಿಸಿದ ಕುಟುಂಬಸ್ಥರು ಅದು ಗುರುರಾಜಪ್ಪ ಅವರದ್ದೇ ಎಂದು ಗುರುತಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅವರು ಅನಾರೋಗ್ಯದಿಂದ ಅಥವಾ ಬೇರೆ ಯಾವುದಾದರೂ ಕಾರಣದಿಂದ ಮಲಗಿದ್ದ ಜಾಗದಲ್ಲೇ ಮೃತಪಟ್ಟಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ, ಸಾವಿನ ಹಿಂದಿನ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ವಿಷಯಗಳು: #karnataka #news
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು