ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ರಾಹುಲ್ ಗಾಂಧಿ v/s ಅಮಿತ್ ಶಾ: ‘ವೋಟ್ ಚೋರಿ’ ಆರೋಪಕ್ಕೆ ಸಂಸತ್ತಿನ ವಿಶೇಷ ಅಧಿವೇಶನದ ಸವಾಲು; ರಾಜಕೀಯ ಸಂಘರ್ಷಕ್ಕೆ ಹೊಸ ತಿರುವು!ಎಐ ಈಗ ಸೈಬರ್ ದಾಳಿಕೋರರಿಗೂ ಅಸ್ತ್ರ: ವಿದ್ಯುತ್, ನೀರು, ಆಹಾರ ಪೂರೈಕೆಗೂ ಕಾದಿದೆಯೇ ಡಿಜಿಟಲ್ ಕಂಟಕ?ನನ್ನ ಮೇಲೆ ಇಡಿ, ಐಟಿ ದಾಳಿ ನಡೆಸಲು ಕೇಂದ್ರ ಸಚಿವರಿಂದ ಸಂಚು – ಪ್ರಿಯಾಂಕ್‌ ಖರ್ಗೆತೆರೆ ಹಿಂದೆ ಮಗು ಚಿವುಟಿ, ಮಾಧ್ಯಮಗಳ ಮುಂದೆ ತೊಟ್ಟಿಲು ತೂಗುತ್ತಿದ್ದರು HD ಸ್ಟಿಂಗ್ ಸ್ವಾಮಿ – ಎಂ. ಲಕ್ಷ್ಮಣ್ಮನುವ್ಯಾದಿ ಅಡ್ಡಂಡ ಕಾರಿಯಪ್ಪನ ಮುಖಕ್ಕೆ ಮಸಿರಾಜಧಾನಿಯಲ್ಲಿ ಅಕ್ರಮ ಪಿಜಿಗಳ ಹಾವಳಿ ನಿಯಂತ್ರಣಕ್ಕೆ – GBA ಹೊಸ ಮಾರ್ಗಸೂಚಿವಾರದ ಹಿಂದೆ ನಾಪತ್ತೆಯಾಗಿದ್ದ ದಲಿತ ನಾಯಕ – ಧರ್ಮಸ್ಥಳದಲ್ಲಿ ಶವವಾಗಿ ಪತ್ತೆಆಂಧ್ರ ಕರಾವಳಿಗೆ ಭಾಗಗಳಿಗೆ ಅಪ್ಪಳಿಸಿದ ಚಂಡಮಾರುತ, ಮೀನುಗಾರಿಕೆ ದೋಣಿಗಳಿಗೆ ಹಾನಿ – ಭಾರಿ ಅನಾಹುತಅಮಿತ್ ಶಾ ಭೇಟಿಯಾದ ಚಿರಂಜೀವಿ, ರಾಮ್ ಚರಣ್; ಭೇಟಿಯ ಉದ್ದೇಶ ಏನು ಗೊತ್ತಾ?ವಿಜಯ ಪ್ರಸಾದ್ ಹೊಸ ಸಿನಿಮಾದಲ್ಲಿ ರಚಿತಾ ರಾಮ್; ಈ ಬಾರಿ ಡಿಫರೆಂಟ್ ಆಗಿ ಪ್ರೇಕ್ಷಕರ ಮುಂದೆ!ಕೆಪಿಎಸ್‌ಸಿ ನೇಮಕಾತಿ ಅಕ್ರಮ ತನಿಖೆಗೆ ಹೊಸ ಸಾರಥಿ: ಎಸ್‌ಐಟಿ ಜವಾಬ್ದಾರಿ ಆರ್. ಹಿತೇಂದ್ರ ಹೆಗಲಿಗೆಕಬ್ಬು ಬೆಲೆ ಬಿಕ್ಕಟ್ಟು: ಇಂದು ಕಾರ್ಖಾನೆ ಮಾಲೀಕರು-ರೈತ ಸಂಘಟನೆಗಳ ಸಭೆ; ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆಗಾಂಧಿ ಹತ್ಯೆಯ ಸತ್ಯ ನಾಟಕ ವಿವಾದ: ಸುಚಿತ್ರಾ ಫಿಲಂ ಸೊಸೈಟಿಗೆ ಬನಶಂಕರಿ ಪೊಲೀಸರ ನೋಟಿಸ್ಮೋದಿ ಅವರಿಗೆ ಬಹಿರಂಗ ಚರ್ಚೆಗೆ ರಾಹುಲ್ ಗಾಂಧಿ ಸವಾಲು; ವಿದೇಶಿ ಬೆಂಬಲದ ಆರೋಪಕ್ಕೆ ತಿರುಗೇಟು16 ವರ್ಷಗಳ ಬಳಿಕ ದೇಶದಲ್ಲಿ ಜನಗಣತಿ ಪ್ರಕ್ರಿಯೆಗೆ ಅಧಿಕೃತ ವೇಳಾಪಟ್ಟಿ ಪ್ರಕಟ; ಜನವರಿ 25ರಿಂದ ಮನೆಮನೆ ಸಮೀಕ್ಷೆ ಆರಂಭಅಸ್ಸಾಂ: ಮುಸ್ಲಿಂ ಬಾಹುಳ್ಯದ ಆಲಂಗಂಜ್‌ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯಿಂದ ನಿರ್ವಸತಿಗರಾದ 4,000ಕ್ಕೂ ಹೆಚ್ಚು ನಿವಾಸಿಗಳುಟಿಕೆಟ್ ರೇಟ್‌ ಜಾಸ್ತಿ ಅನ್ಸಿದ್ರೆ ವಿಮಾನದಲ್ಲಿ ಓಡಾಡಬೇಡಿ: ಸುಪ್ರೀಂ ಕೋರ್ಟ್SIR, EVM ವಿಚಾರದಲ್ಲಿ ವಿಶೇಷ ಸಂಸತ್ ಅಧಿವೇಶನಕ್ಕೆ ಸರ್ಕಾರ ಸಿದ್ಧ: ರಾಹುಲ್ ಗಾಂಧಿಗೆ ಅಮಿತ್ ಶಾ ಸವಾಲುಎಸ್‌ಐಆರ್‌ ಪ್ರತಿಭಟನೆ | ಬಾಂಬೆ ಹೈಕೋರ್ಟ್‌ ಎದುರು ಬೇಷರತ್‌ ಕ್ಷಮೆಯಾಚಿಸಿ‌, ಮುಚ್ಚಳಿಕೆ ಬರೆದುಕೊಟ್ಟ ನಟ ಇಮ್ರಾನ್‌ ಖಾನ್ಅಡ್ಡಂಡ ಪ್ರಕರಣ | ಸಂವಿಧಾನದ ಮೇಲೆ ಸವಾರಿ ಮಾಡಲು ಯತ್ನಿಸಿದರೆ ಜನರೇ ಕಾಂಗ್ರೆಸಿಗೆ ಬುದ್ಧಿ ಕಲಿಸುತ್ತಾರೆ: ತೇಜಸ್ವಿ ಸೂರ್ಯ ವಾಗ್ದಾಳಿ

ರಾಜಧಾನಿಯಲ್ಲಿ ಅಕ್ರಮ ಪಿಜಿಗಳ ಹಾವಳಿ ನಿಯಂತ್ರಣಕ್ಕೆ – GBA ಹೊಸ ಮಾರ್ಗಸೂಚಿ

ರಾಜಧಾನಿಯಲ್ಲಿ ಅಕ್ರಮ ಪಿಜಿಗಳ ಹಾವಳಿ ನಿಯಂತ್ರಣಕ್ಕೆ – GBA ಹೊಸ ಮಾರ್ಗಸೂಚಿ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತನ್ನ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಸಾವಿರಕ್ಕೂ ಹೆಚ್ಚು ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗಳನ್ನು ನಿಯಂತ್ರಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ರೂಪಿಸುತ್ತಿದೆ. ಆದರೆ, ಅನಧಿಕೃತ ಪಿಜಿಗಳ ವಿರುದ್ಧ ಹಲವು ವರ್ಷಗಳಿಂದ ಧ್ವನಿ ಎತ್ತುತ್ತಿರುವ ನಾಗರಿಕ ಹೋರಾಟಗಾರರು ಮತ್ತು ಸ್ವಯಂಸೇವಾ ಸಂಸ್ಥೆಗಳು, ಪ್ರಸ್ತಾಪಿತ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಜಿಬಿಎ ನಡೆಸಿದ ಪರಿಶೀಲನೆಯ ಪ್ರಕಾರ, ನಗರದಲ್ಲಿ 3,597 ಅನಧಿಕೃತ ಪಿಜಿಗಳಿವೆ. ಕಳೆದ ಒಂದು ದಶಕದಿಂದ ನಗರದಲ್ಲಿ ಪಿಜಿ ನಿಯಮಗಳ ಉಲ್ಲಂಘನೆ ವ್ಯಾಪಕವಾಗಿ ನಡೆಯುತ್ತಿದ್ದರೂ, ಜಿಬಿಎ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದು ಪದೇಪದೇ ಹೈಕೋರ್ಟ್ ನೀಡಿದ ಕಠಿಣ ಸೂಚನೆಗಳ ನಂತರವೇ ಎಂದು ಬೆಂಗಳೂರು ಕೊಯಲಿಷನ್‌ನ ರಾಜಗೋಪಾಲನ್ ಆರ್. ಹೇಳಿದ್ದಾರೆ.

ನಿಯಮ ಉಲ್ಲಂಘನೆಗಳ ವಿರುದ್ಧ ವಾಸ್ತವದಲ್ಲಿ ಯಾವುದೇ ಗಮನಾರ್ಹ ಕ್ರಮಗಳು ನಡೆದಿಲ್ಲ. ಪರಿಷ್ಕೃತ ನೀತಿ ಅಥವಾ ಎಸ್‌ಒಪಿ ರೂಪಿಸುವ ಪ್ರಸ್ತಾಪವಿದ್ದರೂ, 2024ರ ಮಾರ್ಗಸೂಚಿಗಳನ್ನು ಬಹಿರಂಗವಾಗಿಯೇ ಉಲ್ಲಂಘಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಸತಿ ಪ್ರದೇಶಗಳಲ್ಲಿ ಪಿಜಿಗಳ ಕಾರ್ಯಾಚರಣೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ವಲಯ ನಿಯಮಾವಳಿಗಳನ್ನು ತಿದ್ದುಪಡಿ ಮಾಡಬೇಕು. ಅಲ್ಲದೆ, ಹಾಸ್ಟೆಲ್‌ಗಳಿಗಿಂತ ಭಿನ್ನವಾಗಿರುವ ಪಿಜಿಗಳಿಗೆ ಜಿಬಿಎ ಪ್ರತ್ಯೇಕ ವರ್ಗೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಹುಡುಕಾಟದಲ್ಲಿ ನಗರಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಪಿಜಿಗಳು ಕಡಿಮೆ ವೆಚ್ಚದ ವಸತಿ ವ್ಯವಸ್ಥೆಯಾಗಿವೆ. ಹೀಗಾಗಿ ಇವುಗಳನ್ನು ನಿರ್ಬಂಧಿಸಬಾರದು ಎಂದು ಪಿಜಿ ಮಾಲೀಕರ ಸಂಘ ಸಮರ್ಥಿಸಿಕೊಂಡಿದೆ.

ಆದರೆ, ಈ ವಾದವನ್ನು ಒಪ್ಪದ ಬೆಂಗಳೂರಿನ ನಾಗರಿಕರ ವೇದಿಕೆಯ ಸಂಚಾಲಕ ಸಂದೀಪ್ ಅನಿರುದ್ಧನ್, ಅಕ್ರಮ ಪಿಜಿಗಳ ಹಾವಳಿ ಮತ್ತು ಕಟ್ಟಡ ನಿಯಮಗಳ ಉಲ್ಲಂಘನೆ ರಾಜ್ಯದ ಎರಡು ಮೂಲಭೂತ ವೈಫಲ್ಯಗಳಾದ ಯೋಜನಾರಹಿತ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಯ ಕುಸಿತದ ಪರಿಣಾಮ ಎಂದು ಹೇಳಿದ್ದಾರೆ.

ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ, ಉಳಿದ ಕ್ರಮಗಳೆಲ್ಲವೂ ಕೇವಲ ಮೇಲ್ನೋಟದ ಬದಲಾವಣೆಗಳಾಗಲಿವೆ. ಬೆಂಗಳೂರು ವೇಗವಾಗಿ ಕೊಳಗೇರಿ ನಗರವಾಗಿ ಬದಲಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

ವಿಷಯಗಳು: #karnataka #news
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು