ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬೆಂಗಳೂರಿಗರೇ, ಕೊಡೆ ಮರೆಯಬೇಡಿ: ಆಂಧ್ರ ಕರಾವಳಿಯತ್ತ ಚಂಡಮಾರುತದ ಅಬ್ಬರ; ಕರ್ನಾಟಕಕ್ಕೂ ಮಳೆ, ಗುಡುಗು, ಸಿಡಿಲಿನ ಎಚ್ಚರಿಕೆ!ರಾಹುಲ್ ಗಾಂಧಿ v/s ಅಮಿತ್ ಶಾ: ‘ವೋಟ್ ಚೋರಿ’ ಆರೋಪಕ್ಕೆ ಸಂಸತ್ತಿನ ವಿಶೇಷ ಅಧಿವೇಶನದ ಸವಾಲು; ರಾಜಕೀಯ ಸಂಘರ್ಷಕ್ಕೆ ಹೊಸ ತಿರುವು!ಎಐ ಈಗ ಸೈಬರ್ ದಾಳಿಕೋರರಿಗೂ ಅಸ್ತ್ರ: ವಿದ್ಯುತ್, ನೀರು, ಆಹಾರ ಪೂರೈಕೆಗೂ ಕಾದಿದೆಯೇ ಡಿಜಿಟಲ್ ಕಂಟಕ?ನನ್ನ ಮೇಲೆ ಇಡಿ, ಐಟಿ ದಾಳಿ ನಡೆಸಲು ಕೇಂದ್ರ ಸಚಿವರಿಂದ ಸಂಚು – ಪ್ರಿಯಾಂಕ್‌ ಖರ್ಗೆತೆರೆ ಹಿಂದೆ ಮಗು ಚಿವುಟಿ, ಮಾಧ್ಯಮಗಳ ಮುಂದೆ ತೊಟ್ಟಿಲು ತೂಗುತ್ತಿದ್ದರು HD ಸ್ಟಿಂಗ್ ಸ್ವಾಮಿ – ಎಂ. ಲಕ್ಷ್ಮಣ್ಮನುವ್ಯಾದಿ ಅಡ್ಡಂಡ ಕಾರಿಯಪ್ಪನ ಮುಖಕ್ಕೆ ಮಸಿರಾಜಧಾನಿಯಲ್ಲಿ ಅಕ್ರಮ ಪಿಜಿಗಳ ಹಾವಳಿ ನಿಯಂತ್ರಣಕ್ಕೆ – GBA ಹೊಸ ಮಾರ್ಗಸೂಚಿವಾರದ ಹಿಂದೆ ನಾಪತ್ತೆಯಾಗಿದ್ದ ದಲಿತ ನಾಯಕ – ಧರ್ಮಸ್ಥಳದಲ್ಲಿ ಶವವಾಗಿ ಪತ್ತೆಆಂಧ್ರ ಕರಾವಳಿಗೆ ಭಾಗಗಳಿಗೆ ಅಪ್ಪಳಿಸಿದ ಚಂಡಮಾರುತ, ಮೀನುಗಾರಿಕೆ ದೋಣಿಗಳಿಗೆ ಹಾನಿ – ಭಾರಿ ಅನಾಹುತಅಮಿತ್ ಶಾ ಭೇಟಿಯಾದ ಚಿರಂಜೀವಿ, ರಾಮ್ ಚರಣ್; ಭೇಟಿಯ ಉದ್ದೇಶ ಏನು ಗೊತ್ತಾ?ವಿಜಯ ಪ್ರಸಾದ್ ಹೊಸ ಸಿನಿಮಾದಲ್ಲಿ ರಚಿತಾ ರಾಮ್; ಈ ಬಾರಿ ಡಿಫರೆಂಟ್ ಆಗಿ ಪ್ರೇಕ್ಷಕರ ಮುಂದೆ!ಕೆಪಿಎಸ್‌ಸಿ ನೇಮಕಾತಿ ಅಕ್ರಮ ತನಿಖೆಗೆ ಹೊಸ ಸಾರಥಿ: ಎಸ್‌ಐಟಿ ಜವಾಬ್ದಾರಿ ಆರ್. ಹಿತೇಂದ್ರ ಹೆಗಲಿಗೆಕಬ್ಬು ಬೆಲೆ ಬಿಕ್ಕಟ್ಟು: ಇಂದು ಕಾರ್ಖಾನೆ ಮಾಲೀಕರು-ರೈತ ಸಂಘಟನೆಗಳ ಸಭೆ; ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆಗಾಂಧಿ ಹತ್ಯೆಯ ಸತ್ಯ ನಾಟಕ ವಿವಾದ: ಸುಚಿತ್ರಾ ಫಿಲಂ ಸೊಸೈಟಿಗೆ ಬನಶಂಕರಿ ಪೊಲೀಸರ ನೋಟಿಸ್ಮೋದಿ ಅವರಿಗೆ ಬಹಿರಂಗ ಚರ್ಚೆಗೆ ರಾಹುಲ್ ಗಾಂಧಿ ಸವಾಲು; ವಿದೇಶಿ ಬೆಂಬಲದ ಆರೋಪಕ್ಕೆ ತಿರುಗೇಟು16 ವರ್ಷಗಳ ಬಳಿಕ ದೇಶದಲ್ಲಿ ಜನಗಣತಿ ಪ್ರಕ್ರಿಯೆಗೆ ಅಧಿಕೃತ ವೇಳಾಪಟ್ಟಿ ಪ್ರಕಟ; ಜನವರಿ 25ರಿಂದ ಮನೆಮನೆ ಸಮೀಕ್ಷೆ ಆರಂಭಅಸ್ಸಾಂ: ಮುಸ್ಲಿಂ ಬಾಹುಳ್ಯದ ಆಲಂಗಂಜ್‌ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯಿಂದ ನಿರ್ವಸತಿಗರಾದ 4,000ಕ್ಕೂ ಹೆಚ್ಚು ನಿವಾಸಿಗಳುಟಿಕೆಟ್ ರೇಟ್‌ ಜಾಸ್ತಿ ಅನ್ಸಿದ್ರೆ ವಿಮಾನದಲ್ಲಿ ಓಡಾಡಬೇಡಿ: ಸುಪ್ರೀಂ ಕೋರ್ಟ್SIR, EVM ವಿಚಾರದಲ್ಲಿ ವಿಶೇಷ ಸಂಸತ್ ಅಧಿವೇಶನಕ್ಕೆ ಸರ್ಕಾರ ಸಿದ್ಧ: ರಾಹುಲ್ ಗಾಂಧಿಗೆ ಅಮಿತ್ ಶಾ ಸವಾಲುಎಸ್‌ಐಆರ್‌ ಪ್ರತಿಭಟನೆ | ಬಾಂಬೆ ಹೈಕೋರ್ಟ್‌ ಎದುರು ಬೇಷರತ್‌ ಕ್ಷಮೆಯಾಚಿಸಿ‌, ಮುಚ್ಚಳಿಕೆ ಬರೆದುಕೊಟ್ಟ ನಟ ಇಮ್ರಾನ್‌ ಖಾನ್

ನನ್ನ ಮೇಲೆ ಇಡಿ, ಐಟಿ ದಾಳಿ ನಡೆಸಲು ಕೇಂದ್ರ ಸಚಿವರಿಂದ ಸಂಚು – ಪ್ರಿಯಾಂಕ್‌ ಖರ್ಗೆ

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ಮೀಡಿಯಾ, ರಾಜಕೀಯ, ರಾಜ್ಯ

• 1 ನಿಮಿಷದ ಓದು

ನನ್ನ ಮೇಲೆ ಇಡಿ, ಐಟಿ ದಾಳಿ ನಡೆಸಲು ಕೇಂದ್ರ ಸಚಿವರಿಂದ ಸಂಚು – ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಕೆಪಿಎಸ್‌ಸಿ ತನಿಖೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು, ನನ್ನ ಹಾಗೂ ಸಂಪುಟ ಸಹೋದ್ಯೋಗಿಗಳ ವಿರುದ್ಧ ಐಟಿ ಹಾಗೂ ಇ.ಡಿ. ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವಂತೆ ಕೇಂದ್ರ ಸಚಿವರೊಬ್ಬರು ಮೋದಿ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ದಾಳಿ ನಡೆಸಲು ಸಿದ್ಧತೆ ನಡೆಯುತ್ತಿರುವ ಬಗ್ಗೆ ದೆಹಲಿಯ ಅಧಿಕಾರದ ಕಾರಿಡಾರ್‌ನಲ್ಲಿ ಮಾತುಗಳು ಕೇಳಿಬರುತ್ತಿವೆ ಎಂದು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ನ ಇತ್ತೀಚಿನ ‘ಗ್ರೂಪ್-ಡಿ’ ನೇಮಕಾತಿಯಂತಿರುವ ವ್ಯಕ್ತಿಯೊಬ್ಬರು ಈ ಹುನ್ನಾರದ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಕೆಪಿಎಸ್‌ಸಿ ನೇಮಕಾತಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮತ್ತು ನನ್ನ ಹೆಸರನ್ನು ಸುಳ್ಳು ಆರೋಪಗಳ ಮೂಲಕ ಸಿಲುಕಿಸಲು, ಪ್ರಕರಣದ ಎಲ್ಲ ಆರೋಪಿಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಇ.ಡಿ.ಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅತ್ಯಂತ ಕಠಿಣ ಪರಿಶ್ರಮಿ ಎಂದು ಕರೆದೊಳ್ಳುವ ಸಚಿವರು, ಈ ಮಾನ್ಯ ಕೇಂದ್ರ ಸಚಿವರು ರಾಜಕೀಯವಾಗಿ ತಾವು ಒಬ್ಬರೇ ಮುಳುಗಲು ಸಿದ್ಧರಿಲ್ಲ. ತಮ್ಮ ಹತಾಶೆಯ ಪರಾಕಾಷ್ಠೆಯಲ್ಲಿ ಅವರು ತಮ್ಮ ಮೈತ್ರಿಕೂಟದ ಪಾಲುದಾರರನ್ನೂ ಜೊತೆಯಲ್ಲೇ ಮುಳುಗಿಸಲು ಹವಣಿಸುತ್ತಿದ್ದಾರೆ ಎಂದು ಪ್ರಿಯಾಂಕ್‌ ವ್ಯಂಗ್ಯವಾಡಿದ್ದಾರೆ.

ವಿಷಯಗಳು: #karnataka #news #politics
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಮೀಡಿಯಾ ವಿಭಾಗ

ಸಂಬಂಧಿತ ಸುದ್ದಿಗಳು